ಯಮಹಾದಿಂದ ಬರಲಿದೆ ಆರ್25 ನೆಕ್ಡ್ ವರ್ಷನ್ ಬೈಕ್

Written By:

ಜಪಾನ್ ಮೂಲದ ದೈತ್ಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ, ತನ್ನ ಜನಪ್ರಿಯ ಆರ್25 ನೆಕ್ಡ್ ವರ್ಷನ್ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.

ಆರ್ ಶ್ರೇಣಿಯ ಬೈಕ್‌ಗಳನ್ನು ಮಾರುಟ್ಟೆಗೆ ಪರಚಿಯಿಸದ್ದ ಯಮಹಾ ಯುವ ಗ್ರಾಹಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿತ್ತು. ಈ ಪೈಕಿ ಭಾರತದಲ್ಲಿ ಆರ್15 ಉತ್ತಮ ಜನಪ್ರಿಯತೆ ಗಿಟ್ಟಿಸಿಕೊಂಡಿತ್ತು.

Yamaha

ಇದೀಗ ವೆಚ್ಚ ಕಡಿತಗೊಳಿಸುವ ನಿಟ್ಟಿನಲ್ಲಿ ಜಪಾನ್ ಮೂಲದ ಈ ವಾಹನ ತಯಾರಕ ಸಂಸ್ಥೆಯು ವಿವಿಧ ಫ್ಲ್ಯಾಟ್‌ಫಾರ್ಮ್‌ನಲ್ಲಿ ಸಮಾನವಾದ ಎಂಜಿನ್ ಬಳಕೆ ಮಾಡುವ ಯೋಜನೆ ಹೊಂದಿದೆ. ಇತ್ತೀಚೆಗಷ್ಟೇ ಸಂಸ್ಥೆಯ ಆರ್25 ನೆಕ್ಡ್ ಆವೃತ್ತಿಯು ಇಂಡೋನೇಷ್ಯಾದಲ್ಲಿ ಟೆಸ್ಟಿಂಗ್ ವೇಳೆ ಪತ್ತೆಯಾಗಿತ್ತು.

ವಿಶೇಷವೆಂದರೆ ನೆಕ್ಡ್ ವರ್ಷನ್ ಜೊತೆಗೆ ಫುಲ್ ಫೇರ್ಡ್ ಮಾದರಿಯನ್ನು ಸಂಸ್ಥೆಯು ಪರಿಚಯಿಸಿದೆ. ವರ್ಷಾರಂಭದಲ್ಲಷ್ಟೇ ಯಮಹಾ ಸಂಸ್ಥೆಯು ಯಮಹಾ ಎಂಟಿ ಶ್ರೇಣಿಯ ನೆಕ್ಡ್ ಬೈಕನ್ನು ಯುರೋಪ್ ಮಾರುಕಟ್ಟೆಗೆ ಪರಿಚಯಿಸಿತ್ತು. ಇದರಲ್ಲಿ ಎಂಟಿ125 ಮಾದರಿಯು ಪ್ರಮುಖವಾಗಿತ್ತು.

ಪ್ರಸ್ತುತ 250 ಸಿಸಿ ವಿಭಾಗದಲ್ಲೂ ನೆಕ್ಡ್ ವರ್ಷನ್ ಬಿಡುಗಡೆ ಮಾಡುವುದು ಯಮಹಾ ಇರಾದೆಯಾಗಿದೆ. ಇದರಿಂದಾಗಿ ಆರ್25 ನೆಕ್ಡ್ ವರ್ಷನ್ ಆಗಮನವಾಗುವುದು ಬಹುತೇಕ ಖಚಿತವಾಗಿದೆ. ಹಾಗಿದ್ದರೂ ಎಟಿ25 ಮಾದರಿಯನ್ನು ಭಾರತಕ್ಕೆ ತರಲಾಗುವುದೇ ಎಂಬುದು ಇನ್ನು ಖಚಿತವಾಗಿಲ್ಲ.

English summary
Recently a R25 without fairing was caught testing in Indonesia, alongside its fully faired version.
Story first published: Monday, September 29, 2014, 10:06 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark