ಜೂಪಿಟರ್ ಜಾಹೀರಾತಿನಲ್ಲಿ 'ಬಿಗ್ ಬಿ' ಚಮಕ್
ಬಾಲಿವುಡ್ ಜಗತ್ತಿನಲ್ಲಿ 'ಬಿಗ್ ಬಿ' ಎಂದೇ ಖ್ಯಾತಿ ಹೊಂದಿರುವ ಮೇರು ನಟ ಅಮಿತಾಬ್ ಬಚ್ಚನ್ ಟಿವಿಎಸ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಬೇರೆ ಯಾವುದಲ್ಲ. ದೇಶದ ಅತ್ಯಂತ ಜನಪ್ರಿಯ ಸ್ಕೂಟರ್ ಟಿವಿಎಸ್ ಜೂಪಿಟರ್ ನಲ್ಲಿ ಅಮಿತಾಬ್ ತಮ್ಮ ಚಮತ್ಕಾರ ತೋರಿದ್ದಾರೆ.
ದೇಶದಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿದ್ದು, ಇದರಂತೆ ಪ್ರತಿಷ್ಠಿತ ವಾಹನ ಉತ್ತೇಜಕ ಸಂಸ್ಥೆಗಳಿಂದ ವರ್ಷದ ಸ್ಕೂಟರ್ ಜೊತೆಗೆ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಜೂಪಿಟರ್ ಪ್ರಚಾರಾರ್ಥಕ್ಕಾಗಿ ಅತಿತಾಬ್ ಜನಪ್ರಿಯ ಸದುಪಯೋಗ ಮಾಡಲು ಟಿವಿಎಸ್ ನಿರ್ಧರಿಸಿದೆ.

ತಮ್ಮ ಸಹಜ ಮಾತುಗಾರಿಕೆಯಿಂದಲೇ ಜನರನ್ನು ಮೋಡಿ ಮಾಡುವ ಶಕ್ತಿ ಹೊಂದಿರುವ ಅಮಿತಾಬ್ ಆಗಮನದೊಂದಿಗೆ ಜೂಪಿಟರ್ ಗೆ ಆನೆ ಬಲ ಬಂದಂತಾಗಿದೆ. ಅಲ್ಲದೆ ತನ್ನ ನಿಕಟ ಪ್ರತಿಸ್ಪರ್ಧಿ ಆಕ್ಟಿವಾ ಹಿಮ್ಮೆಟ್ಟಿಸುವ ಪ್ರಯತ್ನದಲ್ಲಿದೆ.
ಟಿವಿಎಸ್ ಬಿಡುಗಡೆ ಮಾಡಿರುವ ಅತ್ಯುತ್ತಮ ಸ್ಕೂಟರ್ ಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಜೂಪಿಟರ್ 109.7 ಸಿಸಿ ಎಂಜಿನ್ ನಿಂದ ನಿಯಂತ್ರಿಸ್ಪಡುತ್ತಿದ್ದು, 8 ಎನ್ಎಂ ತಿರುಗುಬದಲ್ಲಿ 7.88 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಸಿವಿಟಿ ಗೇರ್ ಬಾಕ್ಸ್ ಸಹ ಪಡೆದುಕೊಂಡಿದೆ.
ಹಾಗಿದ್ದರೆ ತಡ ಯಾಕೆ ಆಕರ್ಷಕ ಜಾಹೀರಾತು ನೋಡಿಯೇ ಬಿಡಿ


Click it and Unblock the Notifications








