ಬ್ರೇಕಿಂಗ್ ವೇಳೆ ಪಲ್ಸರ್ ಇಬ್ಭಾಗ; ನಿರ್ಮಾಣ ಗುಣಮಟ್ಟದ ಬಗ್ಗೆ ಶಂಕೆ

By Nagaraja

ದೇಶದ ನಂ.1 ಕ್ರೀಡಾ ಬೈಕ್ ತಯಾರಿಕ ಸಂಸ್ಥೆಯಾಗಿರುವ ಬಜಾಜ್ ಆಟೋಗೆ ಭಾರಿ ಹಿನ್ನಡೆಯನ್ನುಂಟು ಮಾಡಿರುವ ಪ್ರಕರಣವೊಂದರಲ್ಲಿ ಹೊಚ್ಚ ಹೊಸ ಪಲ್ಸರ್ ಆರ್‌ಎಸ್ 200 ಬೈಕ್ ಬ್ರೇಕಿಂಗ್ ವೇಳೆ ತುಂಡಾಗಿ ಇಬ್ಬಾಗವಾಗಿರುವುದು ಭಾರಿ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ತತ್ ಕ್ಷಣದಲ್ಲಿ ಸುದ್ದಿ ತಾಣಗಳಲ್ಲಿ ಪಲ್ಸರ್ ಅಪಘಾತ ಸುದ್ದಿ ವ್ಯಾಪಕ ರೀತಿಯಲ್ಲಿ ಪಸರಿಸಿತ್ತಲ್ಲದೆ ನಿರ್ಮಾಣ ಗುಣಮಟ್ಟದ ಬಗ್ಗೆ ಭಾರಿ ಆತಂಕ ವ್ಯಕ್ತವಾಗಿತ್ತು. ಇವೆಲ್ಲಕ್ಕೂ ಪಲ್ಸರ್ ಈಗ ತನ್ನ ಅಧಿಕೃತ ಪ್ರಕಟಣೆಯಲ್ಲಿ ಉತ್ತರವನ್ನು ನೀಡಿದೆ.

ಬ್ರೇಕಿಂಗ್ ವೇಳೆ ಪಲ್ಸರ್ ಇಬ್ಭಾಗ; ನಿರ್ಮಾಣ ಗುಣಮಟ್ಟದ ಬಗ್ಗೆ ಶಂಕೆ

ದೇಶದ ಮೂರನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಬಜಾಜ್, ಇತ್ತೀಚೆಗಷ್ಟೇ ನೂತನ ಶ್ರೇಣಿಯ ಪಲ್ಸರ್ ಆರ್‌ಎಸ್200 ಬಿಡುಗಡೆ ಮಾಡಿತ್ತು. ನಿಮ್ಮ ಮಾಹಿತಿಗಾಗಿ, ಪಲ್ಸರ್ ನಲ್ಲಿ ನೀಡಲಾಗಿರುವ ಡಿಸ್ಕ್ ಬ್ರೇಕ್ ಹಾಗೂ ಅಲಾಯ್ ವೀಲ್ ಸೌಲಭ್ಯಗಳು ಚಾಲಕರಿಗೆ ಸಂಚಾರದ ವೇಳೆ ಹೆಚ್ಚಿನ ಸುರಕ್ಷತೆಯನ್ನು ಖಾತ್ರಿ ಪಡಿಸುತ್ತದೆ.

ಬ್ರೇಕಿಂಗ್ ವೇಳೆ ಪಲ್ಸರ್ ಇಬ್ಭಾಗ; ನಿರ್ಮಾಣ ಗುಣಮಟ್ಟದ ಬಗ್ಗೆ ಶಂಕೆ

ಆದರೆ ಇಲ್ಲಿ ನಡೆದ ಘಟನೆ ಬೇರೆಯೇ ಆಗಿತ್ತು. ತನ್ನ ಪತ್ನಿ ಜೊತೆ ಸರಾಸರಿ ವೇಗದಲ್ಲಿ ಸಂಚರಿಸುತ್ತಿದ್ದ ಚಾಲಕ ಸಡನ್ ಆಗಿ ಬ್ರೇಕ್ ಅದುಮಿದಾಗ ಪಲ್ಸರ್ ಇಬ್ಭಾಗವಾಗಿ ತುಂಡರಿಸಲ್ಪಟ್ಟಿತ್ತು. ಘಟನೆಯಲ್ಲಿ ಪಲ್ಸರ್ ಚಾಲಕ ಹಾಗೂ ಆತನ ಪತ್ನಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.

ಬ್ರೇಕಿಂಗ್ ವೇಳೆ ಪಲ್ಸರ್ ಇಬ್ಭಾಗ; ನಿರ್ಮಾಣ ಗುಣಮಟ್ಟದ ಬಗ್ಗೆ ಶಂಕೆ

ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಬಜಾಜ್ ಆಟೋ, "ಬಜಾಜ್ ಮೋಟಾರುಸೈಕಲ್ ಇತಿಹಾಸದಲ್ಲಿ ಇದುವರೆಗೆ ಇಂತಹ ಅಪಘಾತಗಳು ಸಂಭವಿಸಿಲ್ಲ. ಹಾಗಿದ್ದರೂ ಮೇಲಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಮ್ಮ ಸಂಸ್ಥೆಯು ತಕ್ಷಣವೇ ತಜ್ಞರ ತಂಡವನ್ನು ಘಟನಾ ಸ್ಥಳಕ್ಕೆ ಕಳುಹಿಸಿಕೊಟ್ಟಿದೆ" ಎಂದಿದೆ.

ಬ್ರೇಕಿಂಗ್ ವೇಳೆ ಪಲ್ಸರ್ ಇಬ್ಭಾಗ; ನಿರ್ಮಾಣ ಗುಣಮಟ್ಟದ ಬಗ್ಗೆ ಶಂಕೆ

ಅಪಘಾತದಲ್ಲಿ ಗಾಯಗೊಂಡ ಸವಾರನಿಗೆ ಸಾಂತ್ವನ ಹೇಳಿರುವ ಬಜಾಜ್ ಆಟೋ, ಈಗ ಪಲ್ಸರ್ ಇಬ್ಭಾಗವಾಗಿರುವ ಪ್ರಕರಣದ ಹಿಂದಿನ ನಿಖರ ಕಾರಣ ಅರಿಯುವ ಪ್ರಯತ್ನದಲ್ಲಿದೆ. ಅಲ್ಲದೆ ಈ ಸಂಬಂಧ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದೆ.

ಬ್ರೇಕಿಂಗ್ ವೇಳೆ ಪಲ್ಸರ್ ಇಬ್ಭಾಗ; ನಿರ್ಮಾಣ ಗುಣಮಟ್ಟದ ಬಗ್ಗೆ ಶಂಕೆ

ಬೈಕ್‌ನ ಬಾಹ್ಯ ಭಾಗದಿಂದ ಪ್ರಬಲವಾದ ಏಟು ಬಿದ್ದಲ್ಲಿ ಮಾತ್ರ ಅಲಾಯ್ ವೀಲ್ ಗಳು ತುಂಡಾಗುವ ಸಂಭವವಿದೆ. ಆದರೆ ಸಾಮಾನ್ಯ ರಸ್ತೆ ಅಥವಾ ಟ್ರ್ಯಾಕ್ ಪರಿಸ್ಥಿತಿಯಲ್ಲಿ ಅಷ್ಟು ಪ್ರಬಲವಾದ ಹೊಡೆತ ಬೀಳುವುದು ಅಸಾಧ್ಯದ ಮಾತು ಎಂದಿದೆ.

ಬ್ರೇಕಿಂಗ್ ವೇಳೆ ಪಲ್ಸರ್ ಇಬ್ಭಾಗ; ನಿರ್ಮಾಣ ಗುಣಮಟ್ಟದ ಬಗ್ಗೆ ಶಂಕೆ

ಬಜಾಜ್ ಪಲ್ಸರ್ ಆರ್‌ಎಸ್200 ಬೈಕ್ ನಲ್ಲಿ 'ಪಿ' ದರ್ಜೆಯ ಚಕ್ರಗಳನ್ನು ಬಳಕೆ ಮಾಡಲಾಗಿದ್ದು, ಗಂಟೆಗೆ 150 ಕೀ.ಮೀ. ವೇಗದಲ್ಲಿ ನಿಶ್ಚಿಂತತೆಯಿಂದ ಸಾಗಬಹುದಾಗಿದೆ. ಚಕ್ರಗಳ ಸಂಯೋಜನೆ ಹಾಗೂ ಇಡೀ ಮೋಟಾರ್ ಸೈಕಲ್ ವಿನ್ಯಾಸವನ್ನು ಗರಿಷ್ಠ ವೇಗ ಹಾಗೂ ಸುರಕ್ಷಿತವಾಗಿ ಕಾರ್ಯ ನಿರ್ವಹಿಸುವಂತೆ ತಮ್ಮ ಫಾಕ್ಟರಿಯಲ್ಲಿ ಪರೀಶೀಲಿಸಲಾಗುತ್ತದೆ ಎಂದು ವಿವರಿಸಿದೆ.

ಬ್ರೇಕಿಂಗ್ ವೇಳೆ ಪಲ್ಸರ್ ಇಬ್ಭಾಗ; ನಿರ್ಮಾಣ ಗುಣಮಟ್ಟದ ಬಗ್ಗೆ ಶಂಕೆ

ಗರಿಷ್ಠ ಸುರಕ್ಷಾ ಮಾನದಂಡ ಹಾಗೂ ಗುಣಮಟ್ಟತೆಯನ್ನು ಕಾಪಾಡಿಕೊಂಡು ಬಜಾಜ್ ಬೈಕ್ ಗಳನ್ನು ತಯಾರಿಸಲಾಗುತ್ತದೆ. ಕಳೆದ 14 ವರ್ಷಗಳಿಂದ ವಾಹನ ಪ್ರೇಮಿಗಳ ಸೇವೆಯಲ್ಲಿರುವ ಬಜಾಜ್ ಸಂಸ್ಥೆಯು 25 ರಾಷ್ಟ್ರಗಳಲ್ಲಾಗಿ 50 ಲಕ್ಷಕ್ಕೂ ಹೆಚ್ಚು ನಂಬಿಕೆಗ್ರಸ್ತ ಗ್ರಾಹಕರನ್ನು ಹೊಂದಿದೆ ಎಂಬುದನ್ನು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

Article Published On: Friday, July 24, 2015, 14:30 [IST]
English summary
Bajaj Auto Provides Clarity On Pulsar RS200 Alloy Wheel Issue
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+