ಮುಂದಿನ ವರ್ಷದಲ್ಲಿ ಪರಿಷ್ಕೃತ ಬಜಾಜ್ ಪಲ್ಸರ್ 200ಎನ್‌ಎಸ್ ಆಗಮನ
ಭಾರತೀಯ ಬೈಕ್ ವಾಹನ ಪ್ರೇಮಿಗಳಿಗೆ ಮಗದೊಂದು ಖುಷಿ ಸುದ್ದಿ ಆಗಮನವಾಗಿದ್ದು, ಮುಂದಿನ ವರ್ಷದಲ್ಲಿ ಪರಿಷ್ಕೃತ ಪಲ್ಸರ್ 200ಎನ್‌ಎಸ್ ಬಿಡುಗಡೆಯಾಗಲಿದೆ. ಬಲ್ಲ ಮೂಲಗಳ ಪ್ರಕಾರ ಬಜಾಜ್ ಪಲ್ಸರ್ 200ಎನ್‌ಎಸ್ 2016 ಜೂನ್ ತಿಂಗಳ ಮುಂಚಿತವಾಗಿ ಆಗಮನವಾಗಲಿದೆ.
ಮೊದಲ ಬಾರಿಗೆ 2012ರಲ್ಲಿ ಬಿಡುಗಡೆಯಾಗಿದ್ದ ಈ ಮಾದರಿಯು ದುರದೃಷ್ಟವಶಾತ್ ನಿರ್ಮಾಣ ಸ್ಥಗಿತಗೊಂಡಿತ್ತು. ಇದು ಕೂಡಾ ಜನಪ್ರಿಯ ಪಲ್ಸರ್ ಆರ್‌ಎಸ್200 ಮಾದರಿಯಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಪಡೆಯಲಿದೆ.

ಬಜಾಜ್ ಪಲ್ಸರ್ ಆರ್‌ಎಸ್200, 199.5 ಸಿಸಿ, ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ 18.6 ಎನ್ ಎಂ ತಿರುಗಬಲದಲ್ಲಿ 24.15 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.
ಇನ್ನುಳಿದಂತೆ ಹೊಸ ಬಣ್ಣಗಳ ಆಯ್ಕೆಯೂ ಹೊಸ ಕ್ರೀಡಾ ಬೈಕನ್ನು ಹೆಚ್ಚು ಆಕರ್ಷಕವಾಗಿಸಲಿದೆ. ಇದರಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೂ ಹೆಚ್ಚು ರೋಚಕತೆ ಕಾಪಾಡಿಕೊಳ್ಳಲಿದೆ.
ನಿಮ್ಮ ಮಾಹಿತಿಗಾಗಿ ಬಜಾಜ್ ಪಲ್ಸರ್ 200ಎನ್‌ಎಸ್ ಎಕ್ಸ್ ಶೋರೂಂ ಬೆಲೆ 91,553 ರು.ಗಳಷ್ಟು ದುಬಾರಿಯೆನಿಸಲಿದೆ. ನೂತನ ಮಾದರಿಯು ಅಂದಾಜು ಇದಕ್ಕೆ ಸಮಾನವಾದ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.
ಹಾಗಿದ್ದರೂ ಹೊಸ ಬಜಾಜ್ ಪಲ್ಸರ್ 200ಎನ್‌ಎಸ್ 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಕಡಿಮೆಯಾಗಿದೆ.


Click it and Unblock the Notifications








