ಸ್ಟೈಲಿಷ್ ಹೀರೊ ಮ್ಯಾಸ್ಟ್ರೋ ಎಡ್ಜ್ ಬಿಡುಗಡೆ; ಡ್ಯುಯೆಟ್ ಅನಾವರಣ
ಎರಡನೇ ತಲೆಮಾರಿನ ಹೀರೊ ಮ್ಯಾಸ್ಟ್ರೋ ಎಡ್ಜ್ ಮತ್ತು ಎಲ್ಲ ಹೊಸತನದ ಹೀರೊ ಡ್ಯುಯೆಟ್ ಸ್ಕೂಟರ್ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಗೆ ಭರ್ಜರಿ ಪ್ರವೇಶ ಪಡೆದಿದೆ. ಇಂದು ನವದೆಹಲಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಡ್ರೈವ್ ಸ್ಪಾರ್ಕ್ ಸಾನಿಧ್ಯದಲ್ಲಿ ನ್ಯೂ ಹೀರೋಸ್ ಮಾದರಿಗಳು ಅನಾವರಣಗೊಂಡಿದೆ.
ಪ್ರಮುಖವಾಗಿಯೂ ದೇಶದ ನಂ.1 ಸ್ಕೂಟರ್ ಹೋಂಡಾ ಆಕ್ಟಿವಾ ಮಾದರಿಗೆ ಪ್ರತಿಸ್ಪರ್ಧಿಯಾಗಲಿರುವ 110 ಸಿಸಿ ಎಂಜಿನ್ ನಿಯಂತ್ರಿತ ನೂತನ ಹೀರೊ ಮಾದರಿಗಳು ಇನ್ನಷ್ಟೇ ಆರಂಭವಾಗಲಿರುವ ಹಬ್ಬದ ಆವೃತ್ತಿಯಲ್ಲಿ ಮಾರಾಟಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ.

ಬೆಲೆ ಮಾಹಿತಿ: ಹೀರೊ ಮ್ಯಾಸ್ಟ್ರೋ ಎಡ್ಜ್
(ಎಕ್ಸ್ ಶೋ ರೂಂ ದೆಹಲಿ)
- ಎಲ್‌ಎಕ್ಸ್: 49,500 ರು.
- ವಿಎಕ್ಸ್: 50,700 ರು.
- 110.9 ಸಿಸಿ, ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್
- 8.3 ಅಶ್ವಶಕ್ತಿ,
- 8.3 ಎನ್‌ಎಂ ತಿರುಗುಬಲ
- ಆಟೋಮ್ಯಾಟಿಕ್ ಗೇರ್ ಬಾಕ್ಸ್
- 115 ಕೆ.ಜಿ ಕರ್ಬ್ ಭಾರ (ಡ್ಯುಯೆಟ್)
- 109 ಕೆ.ಜಿ (ಮ್ಯಾಸ್ಟ್ರೋ ಎಡ್ಜ್)
- ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್,
- ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್,
- ಹೊರಗಿನಿಂದಲೇ ಇಂಧನ ತುಂಬುವಿಕೆ,
- ಹಿಂದುಗಡೆ ಲಗ್ಗೇಜ್ ಹುಕ್ಸ್,
- ಮೊಬೈಲ್ ಚಾರ್ಜಿಂಗ್ ಪಾಯಿಂಟ್,
- ಅಲಾಯ್ ವೀಲ್,
- ಇಂಟೆಗ್ರೇಟಡ್ ಬ್ರೇಕಿಂಗ್ ಸಿಸ್ಟಂ,
- ಇಂಮೊಬಿಲೈಜರ್,
- 12 ಇಂಚುಗಳ ವೀಲ್

ಈ ಪೈಕಿ ಹೀರೊ ಮ್ಯಾಸ್ಟ್ರೋ ಎಡ್ಜ್ ಮಾರಾಟವು 2015 ಅಕ್ಟೋಬರ್ 13ರಿಂದ ಆರಂಭವಾಗಲಿದೆ. ಅದೇ ಹೊತ್ತಿಗೆ ಹೀರೊ ಡ್ಯುಯೆಟ್ ಬೆಲೆ ಇನ್ನಷ್ಟೇ ತಿಳಿದು ಬರಬೇಕಾಗಿದ್ದು, ತದಾ ಬಳಿಕ ಮಾರಾಟಕ್ಕೆ ಲಭ್ಯವಾಗಲಿದೆ.

ಹೆಚ್ಚು ಸ್ಟೈಲಿಷ್ ಹೀರೊ ಮ್ಯಾಸ್ಟ್ರೋ ಪುರುಷ ಗ್ರಾಹಕರನ್ನು ಗುರಿ ಮಾಡಲಿದ್ದು, ಡ್ಯುಯೆಟ್ ಪುರುಷ ಜೊತೆಗೆ ಮಹಿಳೆಯರಿಗೂ ನೆಚ್ಚಿನ ಆಯ್ಕೆಯಾಗಿರಲಿದೆ. ಅಂತೆಯೇ ಎರಡು ಸ್ಕೂಟರ್ ಗಳಲ್ಲಿ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ ಸೌಲಭ್ಯವಿರಲಿದೆ.

ಎಂಜಿನ್ ತಾಂತ್ರಿಕತೆ



Click it and Unblock the Notifications








