ಪ್ರಸಕ್ತ ತಿಂಗಳಲ್ಲೇ ಹೀರೊ ಡ್ಯುಯೆಟ್, ಮ್ಯಾಸ್ಟ್ರೋ ಎಡ್ಜ್ ಬಿಡುಗಡೆ
ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್ ಇದೇ ಮುಂಬರುವ 2015 ಸೆಪ್ಟೆಂಬರ್ 29ರಂದು ಎರಡು ಹೊಸ ಮಾದರಿಗಳನ್ನು ದೇಶ ನಿವಾಸಿಗಳಿಗೆ ಪರಿಚಯಿಸಲಿದೆ.
ಅದುವೇ, ಹೀರೊ ಡ್ಯುಯೆಟ್ ಮತ್ತು ಹೀರೊ ಮ್ಯಾಸ್ಟ್ರೋ ಎಡ್ಜ್

ಜಗತ್ತಿನ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯೆಂಬ ಹೆಗ್ಗಳಿಕೆಗೂ ಪಾತ್ರವಾಗಿರುವ ಹೀರೊ ಬೈಕ್ ಹಾಗೂ ಸ್ಕೂಟರ್ ವಿಭಾಗದಲ್ಲಿ ತನ್ನದೇ ಆದ ಮಾರಾಟ ವಲಯವನ್ನು ಗಿಟ್ಟಿಸಿಕೊಂಡಿದೆ.
ಇವೆರಡು 110 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 8.5 ಎನ್‌ಎಂ ತಿರುಗುಬಲದಲ್ಲಿ 8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರಲಿದೆ.

ಒಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಅನೇಕ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿರುವ ಹೀರೊ ತನ್ನೆಲ್ಲ ಮಾದರಿಗಳಿಗೆ ತಾಜಾತನವನ್ನು ತುಂಬುವ ಇರಾದೆಯಲ್ಲಿದೆ.


Click it and Unblock the Notifications








