ಹೀರೊ ಕರಿಜ್ಮಾ ಮತ್ತು ಕರಿಜ್ಮಾ ಝಡ್‌ಎಂಆರ್ ಓಟಕ್ಕೆ ಬ್ರೇಕ್
ದೇಶಕ್ಕೆ ಹೀರೊ ಮೊಟೊಕಾರ್ಪ್ ಬೈಕ್ ಗಳ ಶ್ರೇಣಿಗೆ ಕರಿಜ್ಮಾ ಮತ್ತು ಕರಿಜ್ಮಾ ಝಡ್‌ಎಂಆರ್ ಹೊಸ ಆಯಾಮವನ್ನು ನೀಡಿತ್ತು. ದುರದೃಷ್ಟವಶಾತ್ ಈ ಎರಡು ಮಾದರಿಗಳ ನಿರ್ಮಾಣವನ್ನು ಹೀರೊ ಈಗ ಸ್ಥಗಿತಗೊಳಿಸಿದೆ.
ಇತ್ತೀಚೆಗಷ್ಟೇ ಈ ಎರಡು ಮಾದರಿಗಳ ಪರಿಷ್ಕೃತ ಮಾದರಿಗಳನ್ನು ಬಿಡುಗಡೆಗೊಳಿಸಿತ್ತಾದರೂ ಯಾವುದೇ ಫಲವುಂಟಾಗಲಿಲ್ಲ. ಕಳಪೆ ಮಾರಾಟವೇ ಹೀರೊ ಇಂತಹದೊಂದು ನಿರ್ಧಾರಕ್ಕೆ ಕಾರಣವಾಗಿದೆ.

ಆಧುನಿಕ ಮಾರುಕಟ್ಟೆಯಲ್ಲಿ ಕರಿಜ್ಮಾ ಮತ್ತು ಕರಿಜ್ಮಾ ಝಡ್ಎಂಆರ್ ಮಾದರಿಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ವಿಫಲವಾಗುತ್ತಿದೆ. ಹಾಗಿದ್ದರೂ 2014ರ ಸ್ಟೋಕ್ ಗಳನ್ನೇ ಮಾರಾಟ ಮಾಡಲು ಡೀಲರ್ ಶಿಪ್ ವಕ್ತಾರರು ಪರದಾಡುತ್ತಿದ್ದಾರೆ.
ಏತನ್ಮಧ್ಯೆ ಹಲವಾರು ಡೀಲರ್ ಶಿಪ್ ಗಳಲ್ಲಿ ಹೀರೊ ಕರಿಜ್ಮಾ ಬುಕ್ಕಿಂಗ್ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದೆ. ಅಂದ ಹಾಗೆ 223 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಕರಿಜ್ಮಾ ಮತ್ತು ಕರಿಜ್ಮಾ ಝಡ್ಎಂಆರ್ ಮಾದರಿಗಳು 19.7 ಎನ್ ಎಂ ತಿರುಗುಬಲದಲ್ಲಿ 20 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ ಗರಿಷ್ಠ 129 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ.


Click it and Unblock the Notifications








