ದೆಹಲಿ ಆಟೋ ಎಕ್ಸ್ ಪೋದಲ್ಲಿ ಕೆಟಿಎಂ ಆರ್‌ಸಿ390 ಬಿಡುಗಡೆ?

Written By:

ಇತ್ತೀಚೆಗಿನ ವರ್ಷಗಳಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟಿರುವುದರ ಪೈಕಿ ಅತಿ ಹೆಚ್ಚಿನ ಜನಪ್ರಿಯತೆ ಕಾಪಾಡಿಕೊಂಡಿರುವ ಬೈಕ್ ಬ್ರಾಂಡ್ ಗಳಲ್ಲಿ ಕೆಟಿಎಂ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತದೆ. ದೇಶದ ನಂ.1 ಕ್ರೀಡಾ ಬೈಕ್ ತಯಾರಕ ಬಜಾಜ್ ಆಟೋ ಸಹಯೋಗದಲ್ಲಿ ದೇಶ ಪ್ರವೇಶಸಿರುವ ಕೆಟಿಎಂ, ಈಗಾಗಲೇ ಯುವ ಮನಸ್ಕರ ಮನಗೆಲ್ಲುವಲ್ಲಿ ಯಶ ಕಂಡಿದೆ.

ಪ್ರಸ್ತುತ ಕೆಟಿಎಂ ಮುಂಬರುವ 2016 ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಆರ್‌ಸಿ390 ಬೈಕ್ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ನಿಮ್ಮ ಮಾಹಿತಿಗಾಗಿ, ಕೆಟಿಎಂ ಆರ್‌ಸಿ390 ಇತ್ತೀಚೆಗಷ್ಟೇ ನಡೆದ ಮಿಲಾನ್ ಮೋಟಾರು ಶೋದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು.

To Follow DriveSpark On Facebook, Click The Like Button
ಕೆಟಿಎಂ ಆರ್‌ಸಿ390

ನೂತನ ಕೆಟಿಎಂ ಆರ್‌ಸಿ390, 373 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 35 ಎನ್ ಎಂ ತಿರುಗುಬಲದಲ್ಲಿ 42.89 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಈಗ ಮಾರಾಟದಲ್ಲಿರುವ ಕೆಟಿಎಂ390 ಮುಂಬೈ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 2.11 ಲಕ್ಷ ರು.ಗಳಷ್ಟು ಬೆಲೆ ಬಾಳುತ್ತದೆ. ಅಂದರೆ ಹೊಸ ಮಾದರಿಯು ಇದಕ್ಕಿಂತಲೂ ಮತ್ತಷ್ಟು 15ರಿಂದ 20,000 ರು.ಗಳಷ್ಟು ದುಬಾರಿಯೆನಿಸಲಿದೆ.

ಬಜಾಜ್‌ನ ಚಕನ್ ಘಟಕದಲ್ಲಿ ನಿರ್ಮಾಣವಾಗಲಿರುವ ನೂತನ ಕೆಟಿಎಂ ಬೈಕ್, ಹೊಸತಾದ ಅಲ್ಯೂಮಿನಿಯಂ ಸೈಡ್ ಮೌಂಟೆಡ್ ಎಕ್ಸಾಸ್ಟ್ ಮಫ್ಲರ್, ದೊಡ್ಡದಾದ 320 ಎಂಎಂ ಫ್ರಂಟ್ ಡಿಸ್ಕ್, ಬದಲಾಯಿಸಬಲ್ಲ ಎಬಿಎಸ್ ಮುಂತಾದ ಹಲವಾರು ವೈಶಿಷ್ಟ್ಯಗಳನ್ನು ಪಡೆಯಲಿದೆ.

ಯಾವುದಕ್ಕೂ ಒಮ್ಮೆ ಕೆಟಿಎಂ ಆರ್‌ಸಿ390 ಆಗಮನಕ್ಕೆ ಕಾದಿರಿ..!

Read more on ಕೆಟಿಎಂ ktm
English summary
KTM RC390 2016 Edition Could Launch At Auto Expo
Story first published: Saturday, December 5, 2015, 16:24 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark