ವಾರೆ ವ್ಹಾ..! ಮಹೀಂದ್ರ ಮೊಜೊ ಬುಕ್ಕಿಂಗ್ಸ್ ಪ್ರಾರಂಭ
ಟೆಸ್ಟಿಂಗ್ ವೇಳೆ ಹಲವು ಬಾರಿ ಕ್ಯಾಮೆರಾದ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿರುವ ಮಹೀಂದ್ರ ಮೊಜೊ ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಬಗ್ಗೆ ಊಹಾಪೋಹಗಳಿದ್ದವು. ಈ ನಡುವೆ ಈ ಬಹುನಿರೀಕ್ಷಿತ ಬೈಕ್ ನ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂಬುದಕ್ಕೆ ಮತ್ತಷ್ಟು ಪುಷ್ಠಿ ಲಭಿಸಿದೆ.
ವಾಹನೋದ್ಯಮದ ನಿಕಟ ಮೂಲಗಳ ಪ್ರಕಾರು ಆಸಕ್ತ ಗ್ರಾಹಕರು 10,000 ರುಪಾಯಿಗಳನ್ನು ಪಾವತಿಸಿ ಮಹೀಂದ್ರ ಮೊಜೊ ಮುಂಗಡವಾಗಿ ಬುಕ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಮುಂಬರುವ ಹಬ್ಬದ ಆವೃತ್ತಿಯ ವೇಳೆಯಲ್ಲಿ ಭರ್ಜರಿ ಬಿಡುಗಡೆ ಕಾಣುವ ಸಾಧ್ಯತೆಯಿರುವ ಮೊಜೊ ವಿತರಣೆ ಪ್ರಕ್ರಿಯೆಯು ಅಕ್ಟೋಬರ್ ತಿಂಗಳಲ್ಲಿ ನಡೆಯಲಿದೆ.

ಮೊದಲ ಹಂತವಾಗಿ ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಮಾತ್ರ ಮೊಜೆ ಬಿಡುಗಡೆಯಾಗಲಿದೆ ಎಂಬ ಬಗ್ಗೆಯೂ ಮಾಹಿತಿಯಿದೆ. ಇದು 300 ಸಿಸಿ ವಿಭಾಗದಲ್ಲಿ ಹೊಸ ಅಧ್ಯಾಯ ಬರೆಯುವ ಸಾಧ್ಯತೆಯಿದೆ.
25 ತಿರುಗುಬಲದಲ್ಲಿ 28 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಮಹೀಂದ್ರ ಮೊಜೊ 295 ಸಿಸಿ ಸಿಂಗಲ್ ಸಿಲಿಂಡರ್ ಡಿಒಎಚ್‌ಸಿ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ. ಅಲ್ಲದೆ ಪ್ರಮುಖವಾಗಿಯೂ ಕವಾಸಕಿ ನಿಂಜಾ 300ಆರ್, ಸಿಬಿಆರ್ 250 ಆರ್ ಮತ್ತು ಕೆಟಿಎಂ ಆರ್ ಸಿ 390 ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.


Click it and Unblock the Notifications








