ಮಹೀಂದ್ರ ಮೊಜೊ ಟೀಸರ್ ವೀಡಿಯೋ, ಲಾಂಛನ ಲೋಕಾರ್ಪಣೆ
ಬಹುನಿರೀಕ್ಷಿತ ಮಹೀಂದ್ರ ಮೊಜೊ 300 ಸಿಸಿ ಬೈಕ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ದೇಶದ ಈ ಮುಂಚೂಣಿಯ ಸಂಸ್ಥೆಯ ತನ್ನ ಅತಿ ನೂತನ ಬೈಕ್‌ನ ರೋಚಕ ಟೀಸರ್ ವೀಡಿಯೋ, ಲಾಂಛನವನ್ನು ಬಿಡುಗಡೆ ಮಾಡಿದೆ.
ಬೈಕ್ ಪ್ರೇಮಿಗಳ ಪಾಲಿಗೆ ಮಹೀಂದ್ರ ಮೊಜೊ ಹೊಸ ಅನುಭವ ನೀಡಲಿದೆ ಎಂಬ ನಂಬಿಕೆಯಿದೆ. ಅನೇಕ ವರ್ಷಗಳ ಪ್ರಯತ್ನದ ಬಳಿಕ ಮಹೀಂದ್ರ ಟು ವೀಲರ್ಸ್ ಇದನ್ನು ಹೊರ ತರುತ್ತಿದೆ.

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಮಹೀಂದ್ರ ಮೊಜೊ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಅಲ್ಲದೆ ಅಕ್ಟೋಬರ್ 16 ದಿನಾಂಕದ ವೇಳೆಯಾಗುವಾಗ ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ.
296ಸಿಸಿ ಲಿಕ್ವಿಡ್ ಕೂಲ್ಡ್ ಫೋರ್ ಸ್ಟ್ರೋಕ್ ಸಿಂಗಲ್ ಸಿಲಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಮಹೀಂದ್ರ ಮೊಜೊ 27 ಅಶ್ವಶಕ್ತಿ (30 ಎನ್‌ಎಂ ತಿರುಗುಬಲ) ಉತ್ಪಾದಿಸಲಿದೆ.
ಅಷ್ಟೇ ಅಲ್ಲದೆ ಎಲ್ ಇಡಿ ಡೈಟೈಮ್ ರನ್ನಿಂಗ್ ಲೈಟ್ಸ್, ಹೊಸ ಇಂಧನ ಟ್ಯಾಂಕ್, ಪೈರಲ್ಲಿ ಸ್ಪೋರ್ಟ್ ಡೆಮೊನ್ ಚಕ್ರಗಳು, ವೈ ಸ್ಪೋಕ್ ಅಲಾಯ್ ವೀಲ್ ಮತ್ತು ಎಲ್‌ಇಡಿ ಟೈಲ್ ಲೈಟ್ ಗಳು ಪ್ರಮುಖ ಆಕರ್ಷಣೆಯಾಗಲಿದೆ.
ಜನಪ್ರಿಯ ಕವಾಸಕಿ ನಿಂಜಾ 300ಆರ್, ಹೋಂಡಾ ಸಿಬಿಆರ್ 250ಆರ್/300ಆರ್ ಮತ್ತು ಕೆಟಿಎಂ ಡ್ಯೂಕ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿರುವ ಮಹೀಂದ್ರ ಮೊಜೊ ಎರಡು ಲಕ್ಷ ರು.ಗಳ ಬೆಲೆ ಪರಿಧಿಯೊಳಗೆ ಬಿಡುಗಡೆಯಾಗಲಿರುವುದು ಬಹುತೇಕ ಖಚಿತವೆನಿಸಿದೆ. ಈ ಸಂಬಂಧ ಕೆಲವು ಮಹೀಂದ್ರ ಡೀಲರುಗಳಲ್ಲಿ ಬುಕ್ಕಿಂಗ್ ಸಹ ಸ್ವೀಕರಿಸಲಾಗುತ್ತಿದೆ ಎಂಬ ಬಗ್ಗೆಯೂ ಆಟೋ ಆಪ್ತ ವಲಯದಿಂದ ಮಾಹಿತಿ ಲಭಿಸಿದೆ.


Click it and Unblock the Notifications








