ಮಹೀಂದ್ರ ಮೊಜೊ ವೆಬ್ ಸೈಟ್ ಲೈವ್; ಬಿಡುಗಡೆಗೆ ಕ್ಷಣಗಣನೆ
ಬಹುನಿರೀಕ್ಷಿತ ಮಹೀಂದ್ರ ಮೊಜೊ ಸ್ಟೈಲಿಷ್ ಬೈಕ್ ಬಿಡುಗಡೆಗೆ ಸನ್ನದ್ಧವಾಗಿದ್ದು, ಇದರಂತೆ ವೆಬ್ ಸೈಟ್ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಆಸಕ್ತ ಗ್ರಾಹಕರಿಗಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಟೆಸ್ಟ್ ಡ್ರೈವ್ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.
ನಾಲ್ಕು ನಗರಗಳು: ಬೆಂಗಳೂರು, ಮುಂಬೈ, ದೆಹಲಿ, ಪುಣೆ
ಬೆಂಗಳೂರಿನಲ್ಲಿ ಟೆಸ್ಟಿಂಗ್ ವೇಳೆ ಕ್ಯಾಮೆರಾ ಕಣ್ಣಿಕೆ ಸಿಕ್ಕಿಬಿದ್ದ ಮಹೀಂದ್ರ ಮೊಜೊ: ಎಕ್ಸ್ ಕ್ಲೂಸಿವ್ ಲೇಖನ ಓದಿ
ಅತಿ ನೂತನ ಮಹೀಂದ್ರ ಮೊಜೊ ಹಬ್ಬದ ಆವೃತ್ತಿಯ ಅಂಗವಾಗಿ ಪ್ರಸಕ್ತ ತಿಂಗಳಲ್ಲೇ ಬಿಡುಗಡೆಯಾಗಲಿದೆ. ಇದರಂತೆ ಎಕ್ಸ್ ಕ್ಲೂಸಿವ್ ವೀಡಿಯೋವನ್ನು ಸಂಸ್ಥೆ ಬಿಡುಗಡೆಗೊಳಿಸಿದೆ [ಟೀಸರ್ ವಿಡಿಯೋ ವೀಕ್ಷಿಸಿ].

ಅಂದಾಜು ಬೆಲೆ
ಮಹೀಂದ್ರ ಮೊಜೊ 1.7 ಲಕ್ಷ ರು.ಗಳಿಂದ 1.9 ಲಕ್ಷ ರು.ಗಳ ವರೆಗಿನ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಪ್ರತಿಸ್ಪರ್ಧಿಗಳು
ಪ್ರಮುಖವಾಗಿಯೂ ದೇಶದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿರುವ ಕೆಟಿಎಂ ಡ್ಯೂಕ್ 390 ಜೊತೆಗೆ ರಾಯಲ್ ಎನ್ ಫೀಲ್ಡ್ ಕಾಂಟಿನೆಂಟಲ್ ಜಿಟಿ, ಕವಾಸಕಿ ನಿಂಜಾ 300ಆರ್ ಹಾಗೂ ಸಿಬಿಆರ್250 ಆರ್ ಮಾದರಿಗಳಿಗೆ ಇದು ಪ್ರತಿಸ್ಪರ್ಧಿಯಾಗಲಿದೆ.

ಎಂಜಿನ್ ತಾಂತ್ರಿಕತೆ
ಇದರ 300 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ 27 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ.

ವೈಶಿಷ್ಟ್ಯ
- ಡೇಟೈಮ್ ರನ್ನಿಂಗ್ ಲೈಟ್ಸ್,
- ಕ್ರೀಡಾತ್ಮಕ ವಿನ್ಯಾಸ,
- ಹೊಸ ಇಂಧನ ಟ್ಯಾಂಕ್,
- ಟ್ವಿನ್ ಎಕ್ಸಾಸ್ಟ್,
- ಪೈರಲ್ಲಿ ಸ್ಪೋರ್ಟ್ ಡೆಮೊನ್ ಚಕ್ರ,
- ಎಲ್‌ಇಡಿ ಟೈಲ್ ಲೈಟ್,
- ಅಪ್ ಸೈಡ್ ಡೌನ್ (ಯುಎಸ್‌ಡಿ) ಫಾರ್ಕ್ ಮತ್ತು ಟ್ವಿನ್ ಮಫ್ಲರ್

ಬುಕ್ಕಿಂಗ್ ಪ್ರಾರಂಭ
ಆಸಕ್ತ ಗ್ರಾಹಕರು ಮಹೀಂದ್ರ ಅಧಿಕೃತ ಶೋ ರೂಂ ಗಳಲ್ಲಿ 10,000 ರು.ಗಳನ್ನು ಮುಂಗಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಮಹೀಂದ್ರ ಮೊಜೊ ಬಿಡುಗಡೆ ಸನಿಹ; ಸಂಚಲನ ಮೂಡಿಸಿತೇ? ಮುಂದಕ್ಕೆ ಓದಲು ಕ್ಲಿಕ್ಕಿಸಿ


Click it and Unblock the Notifications








