ಮೂರು ಅವತಾರಗಳಲ್ಲಿ ಬರುತ್ತಿದೆ ಬಜಾಜ್ ಅವೆಂಜರ್
ವಾಹನೋದ್ಯಮದ ನಿಕಟ ಮೂಲದಿಂದ ಬಂದಿರುವ ಮಾಹಿತಿಯ ಪ್ರಕಾರ ಇನ್ನೇನು ಕೆಲವೇ ದಿನಗಳೊಳಗೆ ಬಜಾಜ್ ಅವೆಂಜರ್ ಮೂರು ಮಾದರಿಗಳು ಬಿಡುಗಡೆಯಾಗಲಿದೆ. ಈ ಮೂಲಕ ದೇಶದ ನಂ.1 ಕ್ರೀಡಾ ಬೈಕ್ ತಯಾರಿಕ ಸಂಸ್ಥೆಯಾಗಿರುವ ಬಜಾಜ್, ಕ್ರೂಸರ್ ಬೈಕ್ ವಿಭಾಗದಲ್ಲಿ ಭರ್ಜರಿ ರಿ ಎಂಟ್ರಿ ಕೊಡುವ ಇರಾದೆಯನ್ನು ಹೊಂದಿದೆ.
ಬಜಾಜ್ ಅವೆಂಜರ್ ಮಾರುಕಟ್ಟೆಯಲ್ಲಿ ನಿರೀಕ್ಷಿತ ಮಟ್ಟದ ಯಶ ಸಾಧಿಸಿರಲಿಲ್ಲ. ಹಾಗಿದ್ದರೂ ಹೊಸ ಮಾದರಿಗಳು ಹಬ್ಬದ ಆವೃತ್ತಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಮಾರಾಟವನ್ನು ಗಿಟ್ಟಿಸಿಕೊಳ್ಳುವ ನಿರೀಕ್ಷೆಯನ್ನು ಸಂಸ್ಥೆ ಹೊಂದಿದೆ.

ಎಂಜಿನ್ ತಾಂತ್ರಿಕತೆ (ಪಲ್ಸರ್ 200 ಎನ್‌ಎಸ್‌ಗೆ ಸಮಾನ)
- 199.5 ಸಿಸಿ,
- 23.52 ಅಶ್ವಶಕ್ತಿ,
- 18.3 ಎನ್‌ಎಂ ತಿರುಗುಬಲ,
- 6 ಸ್ಪೀಡ್ ಗೇರ್ ಬಾಕ್ಸ್
ಅಂದಾಜು ಬೆಲೆ: 1 ಲಕ್ಷ ರು.
ಇದರೊಂದಿಗೆ ಮೂರು ವೆರಿಯಂಟ್ ಗಳಲ್ಲಿ ಈಗಿರುವ 220ಸಿಸಿ ಎಂಜಿನ್ ಸಹ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಇನ್ನುಳಿದಂತೆ ಪ್ರೀಮಿಯಂ ವೆರಿಯಂಟ್ ಎಬಿಸ್ ಭದ್ರತಾ ವ್ಯವಸ್ಥೆಯೊಂದಿಗೂ ಲಭ್ಯವಾಗಲಿದೆ.


Click it and Unblock the Notifications








