ಕ್ರೀಡಾ ಬೈಕ್ ಪ್ರೇಮಿಗಳಿಗೆ ಖುಷಿ ಸುದ್ದಿ; ಬರುತ್ತಿದೆ ಸುಜುಕಿ ಜಿಕ್ಸರ್ 250

By Nagaraja

ಈಗಾಗಲೇ 150 ಶ್ರೇಣಿಯ ಜಿಕ್ಸರ್ ಬೈಕ್ ಗಳನ್ನು ಪರಿಚಯಿಸುವ ಮೂಲಕ ಹೆಚ್ಚಿನ ಜನಪ್ರಿಯತೆ ಸಾಧಿಸಿರುವ ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆ ಸುಜುಕಿ, 2016 ಆಟೋ ಎಕ್ಸ್ ಪೋದಲ್ಲಿ ಮಗದೊಂದು ಕೊಡುಗೆಯೊಂದಿಗೆ ಮುಂದೆ ಬರುತ್ತಿದೆ.

ಬೈಕ್ ಪ್ರೇಮಿಗಳ ಜೊಲ್ಲು ಭರಿಸುವ ರೀತಿಯಲ್ಲಿ ಈ ಸುದ್ದಿ ಹರಡುತ್ತಿದೆ. ವಿಷಯ ಏನೆಂದರೆ 2016 ಆಟೋ ಎಕ್ಸ್ ಪೋದಲ್ಲಿ ಸುಜುಕಿ ಸಂಸ್ಥೆಯು ಜಿಕ್ಸರ್ 250 ಮಾದರಿಯನ್ನು ಬಿಡುಗಡೆ ಮಾಡಲಿದೆ.

ಸುಜುಕಿ ಜಿಕ್ಸರ್

250 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ನೂತನ ಜಿಕ್ಸರ್ ಪ್ರಮುಖವಾಗಿಯೂ ಹೋಂಡಾ ಸಿಬಿಆರ್ 250ಆರ್, ಹ್ಯೊಸಂಗ್ ಜಿಡಿ250ಆರ್ ಮತ್ತು ಬೆನೆಲ್ಲಿ ಟಿಎನ್‌ಟಿ 25 ಸವಾಲನ್ನು ಎದುರಿಸಲಿದೆ.

ನಿಮ್ಮ ಮಾಹಿತಿಗಾಗಿ ಜಿಕ್ಸರ್ ಹಾಗೂ ಜಿಕ್ಸರ್ ಎಸ್‌ಎಫ್ ಮಾದರಿಗಳು ಈಗಾಗಲೇ ಮಾರಾಟದಲ್ಲಿದ್ದು, ಅತ್ಯುತ್ತಮ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿದೆ. ಸುಜುಕಿಯ ರೇಸಿಂಗ್ ತಂಡವು ಇನ್ ಫುಟ್ ತೆಗೆದುಕೊಂಡು ಇದನ್ನು ನಿರ್ಮಿಸಲಾಗಿತ್ತು. ಇತ್ತೀಚೆಗಷ್ಟೇ ಮಿಲಾನ್ ಮೋಟಾರು ಶೋದಲ್ಲಿ ಐಕಾನಿಕ್ ಜಿಎಸ್‌ಎಕ್ಸ್-ಆರ್1000 ಮಾದರಿಯನ್ನು ಅನಾವರಣಗೊಳಿಸಿರುವುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

More from DriveSpark

Article Published On: Friday, December 4, 2015, 18:10 [IST]
English summary
Suzuki Gixxer 250 Could Be Showcased At 2016 Auto Expo
Read more on ಸುಜುಕಿ suzuki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+