ಭಾರತದಲ್ಲಿ ಬಿಡುಗಡೆಯಾಗಲಿರುವ 'ಜಿಕ್ಸರ್ 250' ಚೀನಾದಲ್ಲಿ ಪ್ರತ್ಯಕ್ಷ

By Nagaraja

ಗಾಬರಿಯಾಗದಿರಿ. ಕಳೆದ ಕೆಲವು ಸಮಯಗಳಿಂದ ಅತಿ ನೂತನ ಸುಜುಕಿ ಜಿಕ್ಸರ್ 250 ಸಿಸಿ ಬೈಕ್ ಭಾರತದಲ್ಲಿ ಬಿಡುಗಡೆಯಾಗುವ ಬಗ್ಗೆ ಸುದ್ದಿಯಾಗುತ್ತಿದೆ. ಜಿಕ್ಸರ್ 150 ಶ್ರೇಣಿಯ ಬೈಕ್ ಗಳ ಯಶಸ್ಸಿನ ನಂತರ ಮತ್ತಷ್ಟು ಹೆಚ್ಚು ಶಕ್ತಿಯ ಜಿಕ್ಸರ್ ಬೈಕನ್ನು ಬಿಡುಗಡೆ ಮಾಡುವ ಯೋಜನೆಯನ್ನು ಈ ಜಪಾನ್ ಮೂಲದ ಸಂಸ್ಥೆಯು ಹೊಂದಿದೆ.

ಹಾಗೇ ಎಲ್ಲರ ಮನದಲ್ಲೂ ಜಿಕ್ಸರ್ ಬಗ್ಗೆ ಆಸೆಗಳು ಹುಟ್ಟಿಕೊಂಡಿರುವಂತೆಯೇ ಸುಜುಕಿ ಜಿಕ್ಸರ್ 250 ಸಿಸಿ ಬೈಕ್ ನೆರೆಯ ಚೀನಾ ರಾಷ್ಟ್ರದ ಘಟಕದಲ್ಲಿ ಪ್ರತ್ಯಕ್ಷಗೊಂಡಿದೆ. ಇದೇ ಬೈಕ್ ಮುಂಬರುವ ದಿನಗಳಲ್ಲಿ ಭಾರತವನ್ನು ತಲುಪಲಿದೆ ಎಂಬುದು ಸಿಹಿ ಸುದ್ದಿ.

ಭಾರತದಲ್ಲಿ ಬಿಡುಗಡೆಯಾಗಲಿರುವ 'ಜಿಕ್ಸರ್ 250' ಚೀನಾದಲ್ಲಿ ಪ್ರತ್ಯಕ್ಷ

ಜಿಕ್ಸರ್ ಜಿಎಸ್‌ಎಕ್ಸ್-ಆರ್250 ಎಂದೂ ಕರೆಯಲ್ಪಡುವ ನೂತನ ಜಿಕ್ಸರ್ 250 ಸಂಪೂರ್ಣ ಫೇರ್ಡ್ ವರ್ಷನ್ ರಹಸ್ಯ ಚಿತ್ರಗಳು ಅಂತರ್ಜಾಲದಲ್ಲಿ ಬಿಡುಗಡೆಯಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ 'ಜಿಕ್ಸರ್ 250' ಚೀನಾದಲ್ಲಿ ಪ್ರತ್ಯಕ್ಷ

ಈಗ ಲಭ್ಯವಿರುವ ಮಾಹಿತಿಗಳ ಪ್ರಕಾರ ಭಾರತದಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಸುಜುಕಿ ಜಿಕ್ಸರ್ 250 ಭರ್ಜರಿ ಅನಾವರಣ ಕಾಣಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ 'ಜಿಕ್ಸರ್ 250' ಚೀನಾದಲ್ಲಿ ಪ್ರತ್ಯಕ್ಷ

ಸುಜುಕಿಯ ಐಕಾನಿಕ್ ಇನಾಝುಮಾ ತಳಹದಿಯಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಜಿಕ್ಸರ್ ಹಲವಾರು ಘಟಕಗಳನ್ನು ಹಂಚಿಕೊಳ್ಳಲಿದೆ. ವಾಹನ ಪ್ರೇಮಿಗಳಿಗೆ ಇದಕ್ಕಿಂತಲೂ ಮಿಗಿಲಾಗಿ ಇನ್ನೇನು ಬೇಕು ಅಂತೀರಾ?

ಭಾರತದಲ್ಲಿ ಬಿಡುಗಡೆಯಾಗಲಿರುವ 'ಜಿಕ್ಸರ್ 250' ಚೀನಾದಲ್ಲಿ ಪ್ರತ್ಯಕ್ಷ

ಮೊದಲ ನೋಟದಲ್ಲೇ ಕ್ರೀಡಾ ಬೈಕ್ ಶೈಲಿಯ ವಿನ್ಯಾಸಕ್ಕೆ ಇಲ್ಲಿ ಹೆಚ್ಚಿ ಆದ್ಯತೆ ಕೊಟ್ಟಿರುವುದು ಕಂಡುಬರುತ್ತದೆ. ಇದು ಯುವ ಜನಾಂಗವನ್ನು ಹೆಚ್ಚು ಆಕರ್ಷಿಸಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಭಾರತದಲ್ಲಿ ಬಿಡುಗಡೆಯಾಗಲಿರುವ 'ಜಿಕ್ಸರ್ 250' ಚೀನಾದಲ್ಲಿ ಪ್ರತ್ಯಕ್ಷ

ನೂತನ ಜಿಕ್ಸರ್, 248 ಸಿಸಿ ಟ್ವಿನ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದೂ ಕೂಡಾ ಇನಾಝುಮಾ ಮಾದರಿಗೆ ಸಮಾನವಾಗಿರುವುದು ಮಗದೊಂದು ಸಮಾನತೆಯಾಗಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ 'ಜಿಕ್ಸರ್ 250' ಚೀನಾದಲ್ಲಿ ಪ್ರತ್ಯಕ್ಷ

ಇವೆಲ್ಲದಕ್ಕಿಂತಲೂ ಮಿಗಿಲಾಗಿ ನೂತನ ಬೈಕ್ ಸುಜುಕಿ ಜಿಎಸ್‌ಎಕ್ಸ್-ಆರ್1000 ಸೂಪರ್ ಬೈಕ್‌ಗೆ ಸಾಮ್ಯತೆಯನ್ನು ಪಡೆದುಕೊಂಡಿದೆ. ಅಲ್ಲದೆ ದೇಶದಲ್ಲಿ ಹೋಂಡಾ ಸಿಬಿಆರ್ 250ಆರ್, ಕೆಟಿಎಂ ಆರ್‌ಸಿ200 ಹಾಗೂ ಯಮಹಾ ವೈಝಡ್‌ಎಫ್-ಆರ್3 ಮಾದರಿಗಳಿಗೆ ನಿಕಟ ಪೈಪೋಟಿಯನ್ನು ಒಡ್ಡಲಿದೆ.

More from DriveSpark

Article Published On: Tuesday, December 29, 2015, 9:17 [IST]
English summary
Suzuki Gixxer 250 Spied In Chinese Facility; India Bound
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+