ಡಿಸೆಂಬರ್ ಮಾರಾಟದಲ್ಲಿ ಏರುಗತಿ ಸಾಧಿಸಿದ ಸುಜುಕಿ

By Nagaraja

ಜಪಾನ್‌ನ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಸುಜುಕಿ 2014ನೇ ಸಾಲಿನಲ್ಲಿ ಕೆಲವು ಅತ್ಯಾಕರ್ಷಕ ಮಾದರಿಗಳನ್ನು ಬಿಡುಗಡೆಗೊಳಿಸಿತ್ತು. ಅಲ್ಲದೆ 2014 ಡಿಸೆಂಬರ್ ಮಾರಾಟದಲ್ಲಿ ಶೇಕಡಾ 42.65 ಮಾರಾಟ ವೃದ್ಧಿ ದಾಖಲಿಸುವಲ್ಲಿ ಯಶಸ್ವಿಯಾಗಿದೆ.

2014 ಡಿಸೆಂಬರ್ ತಿಂಗಳಲ್ಲಿ ಸುಜುಕಿ ಸಂಸ್ಥೆಯು 29,036 ಯುನಿಟ್ ಮೋಟಾರುಸೈಕಲ್ ಹಾಗೂ ಸ್ಕೂಟರ್ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು.

suzuki

ಕಳೆದ ವರ್ಷ ಇದೇ ಅವಧಿಯಲ್ಲಿ 20,355 ಯುನಿಟ್‌ಗಳ ಮಾರಾಟ ಮಾತ್ರ ಕಂಡುಕೊಂಡಿತ್ತು. ಈ ಮೂಲಕ ಶೇಕಡಾ 42.65ರಷ್ಟು ಮಾರಾಟ ಏರಿಕೆ ದಾಖಲಿಸಿದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿರುವ ಅತುಲ್ ಗುಪ್ತಾ, "ಈ ಫಲಿತಾಂಶವು ಮಾರುಕಟ್ಟೆಯು ಉತ್ತಮವಾಗಿ ಪ್ರತಿಕ್ರಿಯಿಸುವುದಕ್ಕೆ ಸಂಕೇತವಾಗಿದ್ದು, 2015ರಲ್ಲೂ ಇದೇ ಪ್ರವೃತ್ತಿ ಮುಂದುವರಿಯುವ ನಿರೀಕ್ಷೆಯಿದೆ" ಎಂದಿದ್ದಾರೆ.

ಸುಜುಕಿಯಿಂದ ಬಿಡುಗಡೆಯಾಗಿದ್ದ 150 ಸಿಸಿ ಜಿಕ್ಸರ್ ಬೈಕ್ ಯುವ ಗ್ರಾಹಕರಲ್ಲಿ ಹೆಚ್ಚಿನ ಪ್ರೀತಿಗೆ ಪಾತ್ರವಾಗಿತ್ತು. ಅಲ್ಲದೆ 2015ನೇ ಸಾಲಿನಲ್ಲಿ ಹೊಸ ಮಾದರಿಗಳನ್ನು ಪರಿಚಯಿಸುವುದರಲ್ಲಿ ಸಂಸ್ಥೆಯು ಬದ್ಧವಾಗಿದೆ ಎಂದು ತಿಳಿಸಿದೆ.

More from DriveSpark

Article Published On: Saturday, January 3, 2015, 10:58 [IST]
English summary
Japanese two-wheeler manufacturer Suzuki has introduced a few new vehicles in 2014. They have also announced that a few will be discontinued. Their goal is to strengthen its existing product portfolio and grow their sales.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+