2016 ಆಟೋ ಎಕ್ಸ್ ಪೋದಲ್ಲಿ ಟ್ರಯಂಪ್ ಬೈಕ್ ಗಳ ರಾಂಪ್ ಶೋ
2015 ಮಿಲಾನ್ ಮೋಟಾರ್ ಶೋದಲ್ಲಿ ಟ್ರಯಂಪ್ ಮೋಟಾರ್ ಸೈಕಲ್ಸ್ ಅಬ್ಬರವನ್ನು ನಡೆಸಿತ್ತು. ಈಗ ಈ ಬ್ರಿಟನ್ ಮೂಲದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯು ಭಾರತದತ್ತ ದಾಪುಗಾಲನ್ನಿಡುತ್ತಿದೆ.
ಭಾರತದಲ್ಲಿ ಎರಡು ವರ್ಷಕ್ಕೊಮ್ಮೆ ಸಾಗುವ ಆಟೋ ಎಕ್ಸ್ ಪೋ ವಾಹನ ಪ್ರದರ್ಶನ ಮೇಳವನ್ನು ಆನಂದಿಸಲು ಎಲ್ಲರೂ ಕಾತರದಿಂದ ಕಾದು ಕುಳಿತಿದ್ದಾರೆ. ಇದನ್ನೇ ಸೂಕ್ತ ಸಮಯವೆಂದು ಮನಗಂಡಿರುವ ಟ್ರಯಂಪ್ ಸಂಸ್ಥೆಯು ತನ್ನ ಕೆಲವು ಬೈಕ್ ಗಳ ರಾಂಪ್ ಶೋವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.

2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಳ್ಳಲಿರುವ ಟ್ರಯಂಪ್ ಬೈಕ್‌ಗಳು:
- ಟ್ರಯಂಪ್ ಬೊನೆವಿಲ್ಲೆ ಸ್ಟ್ರೀಟ್ ಟ್ವಿನ್,
- ಟ್ರಯಂಪ್ ಬೊನೆವಿಲ್ಲೆ ಟಿ120,
- ಟ್ರಯಂಪ್ ಬೊನೆವಿಲ್ಲೆ ಟಿ120 ಬ್ಲ್ಯಾಕ್,
- ಟ್ರಯಂಪ್ ಬೊನೆವಿಲ್ಲೆ ಥ್ರಕ್ಸ್ಟನ್,
- ಟ್ರಯಂಪ್ ಬೊನೆವಿಲ್ಲೆ ಥ್ರಕ್ಸ್ಟನ್ ಆರ್
ಬೈಕ್ ಸವಾರರಿಗೆ ಪ್ರೀಮಿಯಂ ಚಾಲನಾ ಅನುಭವ ನೀಡಲಿರುವ ಟ್ರಯಂಪ್ ಬೈಕ್‌ಗಳು ಮುಂದಿನ ದಿನಗಳಲ್ಲಿ ಭಾರತದ ಹೈ ಎಂಡ್ ದ್ವಿಚಕ್ರ ವಿಭಾಗದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
ಇಲ್ಲಿ ಸ್ಟ್ರೀಟ್ ಟ್ವಿನ್ ಮಾದರಿಯು 900ಸಿಸಿ ಹಾಗೂ ಉಳಿದೆಲ್ಲ ಟಿ120, ಟಿ120 ಬ್ಲ್ಯಾಕ್, ಥ್ರಕ್ಸ್ಟನ್ ಆರ್ ಪ್ಯಾರಲಲ್ ಟು ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇನ್ನು ಬೆಲೆಯ ಬಗ್ಗೆ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ.


Click it and Unblock the Notifications








