ಶೈನ್‌ಗೆ ಸದ್ದಿಲ್ಲದೆ ಸೆಡ್ಡು ನೀಡಿದ ಯಮಹಾ 'ಸೆಲ್ಯೂಟೊ' ಎಂಟ್ರಿ

By Nagaraja

ಎಂಟ್ರಿ ಲೆವೆಲ್ ಕ್ರೀಡಾ, ನಿರ್ವಹಣಾ ಬೈಕ್ ವಿಭಾಗದಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಯಮಹಾ ಮೋಟಾರು ಸಂಸ್ಥೆಯೀಗ ಸೆಲ್ಯೂಟೊ ದ್ವಿಚಕ್ರ ವಾಹನ ಬಿಡುಗಡೆ ಮಾಡುವ ಮೂಲಕ ವಿಸ್ತಾರವಾಗಿ ಹರಡಿರುವ ದೇಶದ ಪ್ರಯಾಣಕ ಬಜೆಟ್ ಬೈಕ್ ವಿಭಾಗಕ್ಕೆ ಕಾಲಿರಿಸಿದೆ.

ಯಮಹಾದ ನೂತನ ಬೈಕ್ 125 ಸಿಸಿ ಎಂಜಿನ್ ನಿಂದ ನಿಯಂತ್ರಿಸ್ಪಡಲಿದ್ದು, 52,000 ರು.ಗಳಷ್ಟು (ದೆಹಲಿ ಎಕ್ಸ್ ಶೋ ರೂಂ) ದುಬಾರಿಯೆನಿಸಲಿದೆ. ಈಗ ಯಮಹಾ ಸೆಲ್ಯೂಟೊ ದೇಶದ ಅಗ್ರ 125 ಸಿಸಿ ಬೈಕ್ ಹೋಂಡಾ ಶೈನ್ ಮಾದರಿಗೆ ಹೇಗೆ ಪ್ರತಿಸ್ಪರ್ಧಿಯಾಗಲಿದೆ ಎಂಬುದನ್ನು ತಿಳಿದುಕೊಳ್ಳೋಣ.

07. ಎಂಜಿನ್

07. ಎಂಜಿನ್

ಹೋಂಡಾದ ಶೈನ್ ಮಾದರಿಗೆ ನೇರ ಪ್ರತಿಸ್ಪರ್ಧಿಯಾಗಲಿರುವ ಯಮಹಾ ಸೆಲ್ಯೂಟೊ 125 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಸ್ಪಡಲಿದ್ದು, 8.2 ಅಶ್ವಶಕ್ತಿ (10.1 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ 4 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

06. ಮೈಲೇಜ್

06. ಮೈಲೇಜ್

ಸಂಸ್ಥೆಯ ಪ್ರಕಾರ ಯಮಹಾ ಕಾರ್ಯ ನಿರ್ವಾಹಕ ಬೈಕ್ ಪ್ರತಿ ಲೀಟರ್ ಗೆ 78 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

05. ವಿನ್ಯಾಸ

05. ವಿನ್ಯಾಸ

ಯಮಹಾದ ಬ್ಲೂ ಕೋರ್ ಎಂಜಿನ್ ತಳಹದಿಯಲ್ಲಿ ಇದನ್ನು ಅಭಿವೃದ್ಧಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ಭಾರತೀಯ ಕುಟುಂಬವೊಂದರ ಹಣಕಾಸು ಸ್ಥಿತಿಗತಿ ಹಾಗೂ ಪ್ರಾಯೋಗಿಕವಾದ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಯಮಹಾ ಸೆಲ್ಯೂಟೊ ವಿನ್ಯಾಸಗೊಳಿಸಲಾಗಿದೆ.

04. ಮಾರಾಟ

04. ಮಾರಾಟ

ಪ್ರಸ್ತುತ ಜಪಾನ್ ಮೂಲದ ಸಂಸ್ಥೆಯು 2015ನೇ ಸಾಲಿನಲ್ಲಿ 60,000 ಯುನಿಟ್ ಗಳಷ್ಟು ಸೆಲ್ಯೂಟೊ ಮಾರಾಟವಾಗುವ ನಿರೀಕ್ಷೆಯನ್ನಿಟ್ಟುಕೊಂಡಿದೆ.

03. ಜೈತ್ರಯಾತ್ರೆ

03. ಜೈತ್ರಯಾತ್ರೆ

ಅನೇಕ ವರ್ಷಗಳ ಹಿಂದೆ 100 ಸಿಸಿ ವಿಭಾಗದಲ್ಲಿ ಆರ್ ಎಕ್ಸ್100 ಬಿಡುಗಡೆ ಮಾಡುವ ಮೂಲಕ ಕ್ರಾಂತಿಯನ್ನುಂಟು ಮಾಡಿದ್ದ ಯಮಹಾ ಕಡಿಮೆ ಸಾಮರ್ಥ್ಯ ಪ್ರಯಾಣಿಕ ಬೈಕ್ ಗಳತ್ತ ಪುನರಾಮನ ಮಾಡುತ್ತಿದೆ.

02.ಆಯಾಮ

02.ಆಯಾಮ

ಉದ್ದ - 2035 ಎಂಎಂ

ಎತ್ತರ - 1080 ಎಂಎಂ,

ಅಗಲ - 700 ಎಂಎಂ,

ವೀಲ್ ಬೇಸ್ - 125 ಎಂಎಂ

ಗ್ರೌಂಡ್ ಕ್ಲಿಯರನ್ಸ್ - 180 ಎಂಎಂ

01. ಬ್ರೇಕ್, ಸಸ್ಷೆಷನ್

01. ಬ್ರೇಕ್, ಸಸ್ಷೆಷನ್

ಯಮಹಾ ಸೆಲ್ಯೂಟೊ ಎರಡು ಬದಿಗಳಲ್ಲಿ (ಮುಂಭಾಗ ಮತ್ತು ಹಿಂಭಾಗ) 130 ಎಂಎಂ ಡ್ರಮ್ ಬ್ರೇಕ್ ಪಡೆಯಲಿದೆ. ಹಾಗೆಯೇ ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಹಾಗೂ ಹಿಂಭಾಗದಲ್ಲಿ ಸಿಂಗ್ ಆರ್ಮ್ ಸಸ್ಷೆಷನ್ ವ್ಯವಸ್ಥೆಯನ್ನು ಪಡೆಯಲಿದೆ.


Most Read Articles

Kannada
Read more on ಯಮಹಾ yamaha
English summary
The Japanese two-wheeler manufacturer Yamaha has launched its new Saluto motorcycle. This motorcycle is expected to attract commuter segment to the brand and sell high volumes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X