ಸ್ವಾತಂತ್ರ್ಯೋತ್ಸವಕ್ಕೆ ಯಮಹಾ ಕೊಡುಗೆ ಹೊಸ ಕ್ರೀಡಾ ಬೈಕ್
ಈ ಬಾರಿಯ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ ವಿಶೇಷ ಕೊಡುಗೆಯೊಂದನ್ನು ನೀಡಲಿದೆ. ಹೌದು, ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಮುನ್ನುಡಿಯಾಗಿ 2015 ಆಗಸ್ಟ್ 11ರಂದು ನೂತನ ವೈಝಡ್‌ಎಫ್-ಆರ್3 ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ.
ಕಳೆದ ಕೆಲವು ಸಮಯಗಳಿಂದ ಭಾರತೀಯ ರಸ್ತೆಗಳಲ್ಲಿ ಪ್ರಯೋಗಾರ್ಥ ಸಂಚಾರದಲ್ಲಿರುವ ಈ ಬಹುನಿರೀಕ್ಷಿತ ಮಾದರಿಯು ಸದ್ಯದಲ್ಲೇ ಬಿಡುಗಡೆಯಾಗಲಿದೆ. ನಿಮ್ಮ ಮಾಹಿತಿಗಾಗಿ ಪ್ರಸ್ತುತ ಮಾದರಿಯು ಯುರೋಪ್ ಹಾಗೂ ಅಮೆರಿಕ ಖಂಡಗಳಲ್ಲಿ ಈಗಾಗಲೇ ಮಾರಾಟದಲ್ಲಿದೆ.

ಅದೇ ಹೊತ್ತಿಗೆ ಇದೇ ತಳಹದಿಯಲ್ಲಿ ನಿರ್ಮಾಣವಾಗಲಿರುವ ಎಂಟಿ-320 ಆವೃತ್ತಿಯನ್ನು ಒಂದು ವರ್ಷದಷ್ಟು ವಿಳಂಬವಾಗಿ ಅಂದರೆ 2016 ಮಧ್ಯಂತರ ಅವಧಿಯಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ.
ಯಮಹಾ ವೈಝಡ್‌ಎಫ್-ಆರ್3 ಎಂಜಿನ್ ತಾಂತ್ರಿಕತೆ:
- ಎಂಜಿನ್: 321 ಸಿಸಿ ಇನ್ ಲೈನ್ ಟು ಸಿಲಿಂಡರ್ ಲಿಕ್ವಿಡ್ ಕೂಲ್ಡ್
- ಅಶ್ವಶಕ್ತಿ: 41.44
- ತಿರುಗುಬಲ: 29.2 ಎನ್‌ಎಂ
- ಗೇರ್ ಬಾಕ್ಸ್: 6 ಸ್ಪೀಡ್ ಸ್ಥಿರ ಜಾಲರಿ
- ಗರಿಷ್ಠ ವೇಗ: 187 kph


ಬಣ್ಣಗಳು
- ಯಮಹಾ ಬ್ಲೂ/ಮ್ಯಾಟ್ ಸಿಲ್ವರ್,
- ರಾಪಿಡ್ ರೆಡ್,
- ರೆವನ್ (ಬ್ಲ್ಯಾಕ್)


Click it and Unblock the Notifications








