ಬಹುನಿರೀಕ್ಷಿತ ಯಮಹಾ ಕ್ರೀಡಾ ಬೈಕ್ ಭರ್ಜರಿ ಬಿಡುಗಡೆ

Written By:

ಜಪಾನ್ ಮೂಲದ ದೈತ್ಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಯಮಹಾ, ಭಾರತದಲ್ಲಿ ಅತಿ ನೂತನ ವೈಝಡ್‌ಎಫ್-ಆರ್3 ಸ್ಪೋರ್ಟ್ಸ್ ಬೈಕನ್ನು ಭರ್ಜರಿ ಬಿಡುಗಡೆ ಮಾಡಿದೆ.

ಬೆಲೆ ಮಾಹಿತಿ: 3.4 ಲಕ್ಷ ರು. (ಆನ್ ರೋಡ್ ಬೆಂಗಳೂರು)

ಬಾಲಿವುಡ್‌ನ ಜನಪ್ರಿಯ ನಟ ಜಾನ್ ಅಬ್ರಹಾಂ ಸಾನಿಧ್ಯದಲ್ಲಿ ಯಮಹಾದ ಹೊಸ ಅವತಾರವು ಪ್ರತ್ಯಕ್ಷಗೊಂಡಿತ್ತು. ಸಮಗ್ರ ಮಾಹಿತಿಗಾಗಿ ಚಿತ್ರ ಪುಟದತ್ತ ಮುಂದುವರಿಯಿರಿ.

ಯಮಹಾ ವೈಝಡ್‌ಎಫ್ ಆರ್3

ಎಂಜಿನ್ ತಾಂತ್ರಿಕತೆ

  • 321 ಸಿಸಿ ಇನ್ ಲೈನ್ ಟು ಸಿಲಿಂಡರ್, ಡಿಒಎಚ್‌ಸಿ, ಲಿಕ್ವಿಡ್ ಕೂಲ್ಡ್
  • 41.42 ಅಶ್ವಶಕ್ತಿ
  • 29.6 ಎನ್‌ಎಂ ತಿರುಗುಬಲ
  • 6 ಸ್ಪೀಡ್ ಕಾಸ್ಟಂಟ್ ಮೆಶ್ ಗೇರ್ ಬಾಕ್ಸ್
  • ಡೈಮಂಡ್ ಫ್ರೇಮ್ ಚಾಸೀ

ನೂತನ ಯಮಹಾ ವೈಝಡ್‌ಎಫ್-ಆರ್3 ಸ್ಟೈಲಿಷ್ 17 ಇಂಚುಗಳ 10 ಸ್ಪೋಕ್ ಕಾಸ್ಟ್ ಚಕ್ರಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ 298ಎಂ ಮತ್ತು 220ಎಂಎಂ ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್ ಸೌಲಭ್ಯಗಳನ್ನು ಹೊಂದಿದೆ.

ಯಮಹಾ ವೈಝಡ್ಎಫ್-ಆರ್1, ವೈಝಡ್ಎಫ್-ಆರ್6, ವೈಝಡ್ಎಫ್-ಆರ್15 ಮತ್ತು ವೈಝಡ್ಎಫ್-ಆರ್125 ಮಾದರಿಗಳಲ್ಲಿ ಆಳವಡಿಸಲಾದ ವಿನ್ಯಾಸ ನೀತಿಯನ್ನು ವೈಝಡ್ಎಫ್-ಆರ್3 ಮಾದರಿಯಲ್ಲೂ ಬಳಕೆ ಮಾಡಲಾಗಿದೆ.

ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಸಿದ್ಧಾಂತದ ಮೂಲಕ ದೇಶವನ್ನು ತಲುಪಲಿದೆ. ಇನ್ನುಳಿದಂತೆ ಏರೋಡೈನಾಮಿಕ್ ದೇಹ ವಿನ್ಯಾಸ, ಡ್ಯುಯಲ್ ಹೆಡ್ ಲೈಟ್ ಮತ್ತು ಮೊಟೊಜಿಪಿಯಿಂದ ಸ್ಪೂರ್ತಿ ಪಡೆದ ತಂತ್ರಜ್ಞಾನವು ಪ್ರಮುಖ ಆಕರ್ಷಣೆಯಾಗಲಿದೆ.

ಎರಡು ಬಣ್ಣಗಳು

ಮಿಡ್ ನೈಟ್ ಬ್ಲ್ಯಾಕ್ ಮತ್ತು ರೇಸಿಂಗ್ ಬ್ಲೂ.

Read more on ಯಮಹಾ yamaha
English summary
Yamaha YZF-R3 Launched In India: Spec, Features & Details
Story first published: Tuesday, August 11, 2015, 12:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark