ಹೊಸ ವರ್ಷಕ್ಕೆ ಕ್ರೀಡಾ ಬೈಕ್ ಪ್ರೇಮಿಗಳಿಗೆ ಕೆಟಿಎಂ ಉಡುಗೊರೆ

2017 ಕೆಟಿಎಂ ಡ್ಯೂಕ್ 390 ಕ್ರೀಡಾ ಬೈಕ್ ಮುಂದಿನ ವರ್ಷಾರಂಭದಲ್ಲಿ ಬಿಡುಗಡೆಯಾಗಲಿದೆ.

By Nagaraja

ಭಾರತದಲ್ಲಿ ಅತಿ ಹೆಚ್ಚು ಪ್ರಚಲಿತವಾಗಿರುವ ಕೆಟಿಎಂ ಬೈಕ್ ಗಳು, ಜನಪ್ರಿಯ ಪಲ್ಸರ್ ಬೈಕ್ ಗಳನ್ನೇ ಮೀರಿಸುವತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಕಾಲೇಜು ಹುಡುಗರಿಂದ ಹಿಡಿದು ಕೆಟಿಎಂ ಯುವ ಪೀಳಿಗೆಯ ಮೆಚ್ಚಿನ ಬೈಕ್ ಎಂದೆನಿಸಿಕೊಂಡಿದೆ. ಪ್ರಸ್ತುತ ಕೆಟಿಎಂ ಹೊಸ ಸ್ವರೂಪದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಹೊಸ ವರ್ಷದಲ್ಲಿ ಕ್ರೀಡಾ ಬೈಕ್ ಪ್ರೇಮಿಗಳಿಗಾಗಿ ಮಗದೊಂದು ಉಡುಗೊರೆಯನ್ನು ನೀಡಲಿದೆ.

ಹೊಸ ವರ್ಷಕ್ಕೆ ಕ್ರೀಡಾ ಬೈಕ್ ಪ್ರೇಮಿಗಳಿಗೆ ಕೆಟಿಎಂ ಉಡುಗೊರೆ

2017 ಕೆಟಿಎಂ ಡ್ಯೂಕ್ 390 ಹೊಸ ವರ್ಷಾರಂಭದಲ್ಲಿ ಅಂದರೆ ಜನವರಿ ತಿಂಗಳಲ್ಲೇ ಬಿಡುಗಡೆಯಾಗಲಿದೆ ಎಂದು ವಾಹನ ಮೂಲಗಳು ಖಚಿತಪಡಿಸಿದೆ.

ಹೊಸ ವರ್ಷಕ್ಕೆ ಕ್ರೀಡಾ ಬೈಕ್ ಪ್ರೇಮಿಗಳಿಗೆ ಕೆಟಿಎಂ ಉಡುಗೊರೆ

ಎರಡನೇ ತೆಮಾರಿನ ಕೆಟಿಎಂ ಡ್ಯೂಕ್ 390 ಹಿಂದಿನ ಮಾದರಿಗಿಂತಲೂ ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಳ್ಳಲಿದೆ. ಇನ್ನು 2017 ಎಪ್ರಿಲ್ ವೇಳೆಯಾಗುವಾಗ ವಿತರಣೆಯಾಗಲಿದೆ.

ಹೊಸ ವರ್ಷಕ್ಕೆ ಕ್ರೀಡಾ ಬೈಕ್ ಪ್ರೇಮಿಗಳಿಗೆ ಕೆಟಿಎಂ ಉಡುಗೊರೆ

2017 ಕೆಟಿಎಂ ಡ್ಯೂಕ್ 390 ಬೈಕ್ ನಲ್ಲಿ ಕಂಡುಬರುವ ಪ್ರಮುಖ ಬದಲಾವಣೆಯೆಂದರೆ ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದ್ದು, ಯುರೋ IV ಮಾಲಿನ್ಯ ಮಟ್ಟದ ಎಂಜಿನ್ ಪಡೆಯಲಿದೆ.

ಹೊಸ ವರ್ಷಕ್ಕೆ ಕ್ರೀಡಾ ಬೈಕ್ ಪ್ರೇಮಿಗಳಿಗೆ ಕೆಟಿಎಂ ಉಡುಗೊರೆ

ಇದರಲ್ಲಿರುವ 373.2 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ 37 ಎನ್ ಎಂ ತಿರುಗುಬಲದಲ್ಲಿ 44 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

ಹೊಸ ವರ್ಷಕ್ಕೆ ಕ್ರೀಡಾ ಬೈಕ್ ಪ್ರೇಮಿಗಳಿಗೆ ಕೆಟಿಎಂ ಉಡುಗೊರೆ

ಕೆಟಿಎಂ ಡ್ಯೂಕ್ 390 ಅತ್ಯುತ್ತಮ ಹ್ಯಾಂಡ್ಲಿಂಗ್ ಪ್ರದಾನ ಮಾಡಲಿದ್ದು, ದೂರ ಪ್ರಯಾಣಕ್ಕೂ ಹೊಂದಿಕೆಯಾಗುವ ನಿಟ್ಟಿನಲ್ಲಿ 13.4 ಲೀಟರ್ ಇಂಧನ ಟ್ಯಾಂಕ್ ಗಿಟ್ಟಿಸಿಕೊಳ್ಳಲಿದೆ.

ಹೊಸ ವರ್ಷಕ್ಕೆ ಕ್ರೀಡಾ ಬೈಕ್ ಪ್ರೇಮಿಗಳಿಗೆ ಕೆಟಿಎಂ ಉಡುಗೊರೆ

ಇನ್ನು ನಿಖರ ಬ್ರೇಕಿಂಗ್ ವ್ಯವಸ್ಥೆಯನ್ನು ಜೋಡಿಸಲಾಗಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿ ಅನುಕ್ರಮವಾಗಿ 320 ಹಾಗೂ 230 ಎಂಎಂ ಡಿಸ್ಕ್ ಬ್ರೇಕ್ ಗಳನ್ನು ಪಡೆಯಲಿದೆ.

ಹೊಸ ವರ್ಷಕ್ಕೆ ಕ್ರೀಡಾ ಬೈಕ್ ಪ್ರೇಮಿಗಳಿಗೆ ಕೆಟಿಎಂ ಉಡುಗೊರೆ

ಮಳೆಗಾಲದಲ್ಲಿ ಕೆಟಿಎಂ ಎಕ್ಸಾಸ್ಟ್ ಕೊಳವೆಯೊಳಗೆ ನೀರು ಪ್ರವೇಶಿಸುವ ಬಗ್ಗೆ ವ್ಯಾಪಕ ದೂರುಗಳು ಎದ್ದಿದ್ದವು. ನೂತನ ಮಾದರಿಯಲ್ಲಿ ಇದಕ್ಕೂ ಪರಿಹಾರ ಕಂಡುಹುಡುಕಲಾಗಿದ್ದು, ಸಾಂಪ್ರದಾಯಿಕ ಶೈಲಿಯ ಎಕ್ಸಾಸ್ಟ್ ಕೊಳವೆ ಲಗತ್ತಿಸಲಾಗಿದೆ.

ಹೊಸ ವರ್ಷಕ್ಕೆ ಕ್ರೀಡಾ ಬೈಕ್ ಪ್ರೇಮಿಗಳಿಗೆ ಕೆಟಿಎಂ ಉಡುಗೊರೆ

ಇನ್ನು ಎಲ್ ಇಡಿ ಹೆಡ್ ಲೈಟ್, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಕಲರ್ ಟಿಎಫ್ ಟಿ ಇನ್ಸ್ಟ್ರುಮೆಂಟ್ ಪ್ಯಾನೆಲ್, ಸ್ಮಾರ್ಟ್ ಫೋನ್ ಗಳಲ್ಲಿ ಕೆಟಿಎಂ ಮೈ ರೈಡ್ ಸೇವೆಯು ಲಭ್ಯವಾಗಲಿದೆ.

ಹೊಸ ವರ್ಷಕ್ಕೆ ಕ್ರೀಡಾ ಬೈಕ್ ಪ್ರೇಮಿಗಳಿಗೆ ಕೆಟಿಎಂ ಉಡುಗೊರೆ

ಅಷ್ಟೇ ಯಾಕೆ ಬಾಷ್ 9ಎಂಬಿ ಟು ಚಾನೆಲ್ ಎಬಿಎಸ್, ರೈಡ್-ಬೈ-ವೈ ಸಿಸ್ಟಂ ವೈಶಿಷ್ಟ್ಯಗಳನ್ನು ನೂತನ ಕಟಿಎಂ 390 ಬೈಕ್ ಪಡೆಯಲಿದೆ.

ಹೊಸ ವರ್ಷಕ್ಕೆ ಕ್ರೀಡಾ ಬೈಕ್ ಪ್ರೇಮಿಗಳಿಗೆ ಕೆಟಿಎಂ ಉಡುಗೊರೆ

ಸದ್ಯ ಮಾರಾಟದಲ್ಲಿರುವ ಕೆಟಿಎಂ ಡ್ಯೂಕ್ ಮುಂಬೈ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 2.45 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ಅಂದರೆ ನೂತನ ಬೈಕ್ ಇದಕ್ಕಿಂತಲೂ 20,000 ರು.ಗಳಷ್ಟು ಹೆಚ್ಚು ದುಬಾರಿಯೆನಿಸಲಿದೆ.

More from DriveSpark

Article Published On: Wednesday, November 16, 2016, 12:35 [IST]
English summary
2017 KTM Duke 390 To Be Launched In India In January — Deliveries To Commence From April
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+