ಬಿಎಂಡಬ್ಲ್ಯು ಅಗ್ಗದ ಬೈಕ್ 'ಜಿ310ಆರ್' ಬಗ್ಗೆ ನಿಮಗೆಷ್ಟು ಗೊತ್ತು?
ಟಿವಿಎಸ್ ಸಹಯೋಗದಲ್ಲಿ ನಿಕಟ ಭವಿಷ್ಯದಲ್ಲೇ ಭಾರತಕ್ಕೆ ಅಪ್ಪಳಿಸಲಿರುವ 'ಬಿಎಂಡಬ್ಲ್ಯು ಜಿ310ಆರ್' ಮೋಟಾರ್ ಸೈಕಲ್ ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಪ್ರಯೋಗಾರ್ಥ ಟೆಸ್ಟಿಂಗ್ ವೇಳೆ ಮಗದೊಮ್ಮೆ ಸೆರೆ ಸಿಕ್ಕಿದೆ. ಇದು ಜರ್ಮನಿಯ ಮೂಲದ ಬಿಎಂಡಬ್ಲ್ಯು ಮೊಟೊರಾಡ್ ನಿರ್ಮಿಸುತ್ತಿರುವ 500 ಸಿಸಿ ವಿಭಾಗದೊಳಗಿನ ಮೊದಲ ಬೈಕ್ ಆಗಿರಲಿದೆ.
ಚೆನ್ನೈನಲ್ಲಿರುವ ಟಿವಿಎಸ್ ಘಟಕದಲ್ಲಿ ಟೆಸ್ಟಿಂಗ್ ಮತ್ತು ಅಭಿವೃದ್ಧಿ ಪ್ರಕ್ರಿಯೆಯು ಜೋರಾಗಿ ನಡೆಯುತ್ತಿದ್ದು, ಯಾವುದೇ ಹಂತದಲ್ಲೂ ಬೇಕಾದರೂ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇದು ಬೆಳೆದು ಬರುತ್ತಿರುವ ಭಾರತೀಯ ಕ್ರೀಡಾ ಬೈಕ್ ವಿಭಾಗಕ್ಕೆ ಹೊಸ ಆಶಾಕಿರಣವಾಗಿದ್ದು, ಪ್ರತಿಷ್ಠಿತ ಸಂಸ್ಥೆಗಳ ಗುಣಮಟ್ಟದ ಬೈಕ್ ಗಳು ಭಾರತೀಯ ದ್ವಿಚಕ್ರ ವಾಹನ ವಿಭಾಗವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ.

ಎಂಜಿನ್ ತಾಂತ್ರಿಕತೆ
313 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿರುವ ಬಿಎಂಡಬ್ಲ್ಯು ಜಿ310ಆರ್, 28 ಎನ್ ಎಂ ತಿರುಗುಬಲದಲ್ಲಿ 34 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಸಸ್ಪೆನ್ಷನ್
- ಮುಂಭಾಗ: ಅಪ್ ಸೈಡ್ ಡೌನ್ (140 ಎಂಎಂ ಟ್ರಾವೆಲ್)
- ಹಿಂಭಾಗ: ಮೊನೊಶಾಕ್ (131 ಎಂಎಂ ಟ್ರಾವೆಲ್)
- ಮುಂಭಾಗ: 300 ಎಂಎಂ ಡಿಸ್ಕ್
- ಹಿಂಭಾಗ: 240 ಎಂಎಂ ಡಿಸ್ಕ್
- ಮುಂಭಾಗ: 110/70 R17 ಮಿಚೆಲಿನ್
- ಹಿಂಭಾಗ: 150/60 R17 ಮಿಚೆಲಿನ್
- ಸೀಟು ಎತ್ತರ: 760 ಎಂಎಂ (815 ಎಂಎಂ ವರೆಗೂ ಹೊಂದಾಣಿಸಬಹುದು)
- ಇಂಧನ ಟ್ಯಾಂಕ್ ಸಾಮರ್ಥ್ಯ: 11 ಲೀಟರ್
- ಡ್ಯುಯಲ್ ಚಾನಲ್ ಎಬಿಎಸ್
- 17 ಇಂಚುಗಳ 5 ಸ್ಪೋಕ್ ಅಲಾಯ್ ಚಕ್ರಗಳು,
- ಎಲ್ ಇಡಿ ಸೈಡ್ ಇಂಡಿಕೇಟರ್,
- ಸೆಂಟರ್ ಸ್ಟ್ಯಾಂಡ್
- 12 ವಾಟ್ ಚಾರ್ಚಿಂಗ್ ಸಾಕೆಟ್

ಬ್ರೇಕ್

ಚಕ್ರಗಳು

ಸೀಟು ಎತ್ತರ, ಇಂಧನ ಟ್ಯಾಂಕ್ ಸಾಮರ್ಥ್ಯ

ಮೈಲೇಜ್
ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಬಿಎಂಡಬ್ಲ್ಯು ಜಿ310ಆರ್ ಪ್ರತಿ ಲೀಟರ್ ಗೆ 36 ಕೀ.ಮೀ. ವರೆಗೂ ಇಂಧನ ಕ್ಷಮತೆ ನೀಡವ ಸಾಮರ್ಥ್ಯ ಹೊಂದಿರುತ್ತದೆ.

ಪ್ರತಿಸ್ಪರ್ಧಿಗಳು
ಕೆಟಿಎಂ ಡ್ಯೂಕ್ 390,
ಬೆನೆಲ್ಲಿ ಟಿಎನ್ ಟಿ300,
ಬಜಾಜ್ ಪಲ್ಸರ್ ಸಿಎಸ್400,
ಮಹೀಂದ್ರ ಮೊಜೊ

ಬಿಡುಗಡೆ, ಬೆಲೆ ಮತ್ತು ಭಾರ
ನೂತನ ಬಿಎಂಡಬ್ಲ್ಯು ಜಿ310ಆರ್ ಮುಂಬರುವ ಹಬ್ಬದ ಆವೃತ್ತಿಯ ವೇಳೆಯಾಗುವಾಗ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಮೂರು ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಮಾರುಕಟ್ಟೆ ತಲುಪಲಿದೆ.
ಭಾರ: 158.5 ಕೆ.ಜಿ

ವಿನ್ಯಾಸ ಸ್ಪೂರ್ತಿ
ಬಿಎಂಡಬ್ಲ್ಯು ಶಕ್ತಿಶಾಲಿ ಬೈಕ್ ಗಳಾದ ಎಸ್ 1000 ಆರ್ ಆರ್ ಮತ್ತು ಆರ್ 1200 ಆರ್ ಬೈಕ್ ಗಳಿಂದ ವಿನ್ಯಾಸ ಪ್ರೇರಣೆ ಪಡೆದುಕೊಂಡು ಇದನ್ನು ನಿರ್ಮಿಸಲಾಗಿದೆ.

ಟಿವಿಎಸ್ ಪಾಲುದಾರಿಕೆ
ಟಿವಿಎಸ್ ಹೊಸೂರು ಘಟಕದ ಸಮೀಪದ ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ನಿರಂತರ ಟೆಸ್ಟಿಂಗ್ ನಡೆಸಲಾಗುತ್ತಿದೆ. ಈ ವೇಳೆಯಲ್ಲಿ ಬಿಎಂಡಬ್ಲ್ಯು ಜಿ310ಆರ್ ಗಂಟೆಗೆ ಗರಿಷ್ಠ 160ರಿಂದ 170 ಕೀ.ಮೀ. ವೇಗ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂಬುದು ತಿಳಿದು ಬಂದಿದೆ.

ಮೇಡ್ ಇನ್ ಇಂಡಿಯಾ
'ಮೇಡ್ ಇನ್ ಇಂಡಿಯಾ' ಬಿಎಂಡಬ್ಲ್ಯು ಜಿ310ಆರ್ ತಮಿಳುನಾಡಿನಲ್ಲಿರುವ ಟಿವಿಎಸ್‌ನ ಹೊಸೂರು ಘಟಕದಲ್ಲಿ ನಿರ್ಮಾಣವಾಗಲಿದೆ. ತದಾ ಬಳಿಕ ಟಿವಿಎಸ್ ಅಕುಲಾ ಆರ್‌ಟಿಆರ್ 310 ದೇಶಕ್ಕೆ ಎಂಟ್ರಿ ಕೊಡಲಿದೆ. ಇದು ಅಪಾಚಿ ಆರ್‌ಟಿಎರ್ 310 ಎಂದು ಮರು ನಾಮಕರಣಗೊಳ್ಳುವ ಸಾಧ್ಯತೆಯಿದೆ.



Click it and Unblock the Notifications








