ಹೀರೊ ಭವಿಷ್ಯದ ಬೈಕ್ - ಎಕ್ಸ್‌ಎಫ್3ಆರ್

By Nagaraja

2016 ಆಟೋ ಎಕ್ಸ್ ಪೋದಲ್ಲಿ ದೇಶದ ಅತಿ ದೊಡ್ಡ ವಾಹನ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್ ಅತಿ ನೂತನ ಎಕ್ಸ್‌ಎಫ್3ಆರ್ ಕಾನ್ಸೆಪ್ಟ್ ಬೈಕನ್ನು ಅನಾವರಣಗೊಳಿಸಿದೆ. ಇದು ಸಂಸ್ಥೆಯ "ಡಿಸೈನ್ ಕಾನ್ಸೆಪ್ಟ್ ವೆಹಿಕಲ್" ಯೋಜನೆಯ ಭಾಗವಾಗಿರಲಿದೆ.

ಭವಿಷ್ಯದ ಹೀರೊ ಗಾಡಿಗಳು ಹೇಗೆ ಇರಲಿದೆ ಎಂಬುದಕ್ಕೆ ಎಕ್ಸ್‌ಎಫ್3ಆರ್ ಉದಾಹರಣೆಯಾಗಲಿದೆ. ಇದೊಂದು ಪರಿಪೂರ್ಣ ಸ್ಟ್ರೀಟ್ ಫೈಟರ್ ಬೈಕ್ ಆಗಿರಲಿದ್ದು, ಆಕ್ರಮಣಕಾರಿ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ.

ಹೀರೊ ಎಕ್ಸ್‌ಎಫ್3ಆರ್


ವಿನ್ಯಾಸ, ನಿರ್ವಹಣೆ ಹೀಗೆ ಎಲ್ಲ ಹಂತದಲ್ಲೂ ಹೀರೊ ಎಕ್ಸ್‌ಎಫ್3ಆರ್ ನೆಕ್ಡ್ ಬೈಕ್ ತಾಜಾತನವನ್ನು ತುಂಬಿದೆ. ಇಲ್ಲಿ ಸ್ಟ್ರೀಟ್ ಫೈಟರ್ ಗೆ ತಕ್ಕುದಾಗಿ ಹೆಡ್ ಲ್ಯಾಂಪ್, ಫಾರ್ಕ್, ಅಲಾಯ್ ವೀಲ್, ಪೈರಲ್ಲಿ ಸ್ಪೋರ್ಟ್ ಡೆಮೊನ್ ಚಕ್ರಗಳು ಮತ್ತು ಇಂಧನ ಟ್ಯಾಂಕ್ ಗಳನ್ನು ಕಾಣಬಹುದಾಗಿದೆ.

ಇನ್ನುಳಿದಂತೆ ಮೊನೊಶಾಕ್ ಹಾಗೂ ಸ್ವಿಂಗ್ ಆರ್ಮ್, ಟ್ವಿನ್ ಎಕ್ಸಾಸ್ಟ್, ಎಲ್ ಇಡಿ ಬೆಳಕಿನ ಸೇವೆಗಳಿರಲಿದೆ. ಇವೆಲ್ಲದಕ್ಕೂ ಮಿಗಿಲಾಗಿ ಡ್ಯುಯಲ್ ಮ್ಯಾಪ್ ಟೆಕ್ನಾಲಜಿ ಫ್ಯೂಯಲ್ ಇಂಜೆಕ್ಷನ್ ವ್ಯವಸ್ಥೆಯು ಕಂಡುಬರಲಿದೆ.


ಒಟ್ಟಿನಲ್ಲಿ ಎಂಜಿನ್ ತಾಂತ್ರಿಕತೆ ಇತ್ಯಾದಿ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಾಗಿದ್ದು, ಯಾವಾಗ ನಿರ್ಮಾಣ ಆವೃತ್ತಿ ಆಗಮನವಾಗಲಿದೆ ಎಂಬುದನ್ನು ಸಹ ಸಂಸ್ಥೆಯು ರಹಸ್ಯವಾಗಿಟ್ಟಿದೆ.

More from DriveSpark

Article Published On: Tuesday, February 16, 2016, 11:10 [IST]
English summary
Hero XF3R Concept showcased at Auto Expo 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+