ಪಲ್ಸರ್ ಪ್ರೇಮಿಗಳಿಗೆ ಖುಷಿಸುದ್ದಿ; ಸಿಎಸ್400 ಬಿಡುಗಡೆಗೆ ಕಾಲ ಸನ್ನಿಹಿತ
ದೇಶದ ನಂ.1 ಕ್ರೀಡಾ ಬೈಕ್ ಪಲ್ಸರ್ ಪ್ರೇಮಿಗಳಿಗೆ ಖುಷಿ ಸುದ್ದಿ ಬಂದಿದ್ದು, ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಬಜಾಜ್ ಆಟೋ ಅತಿ ನೂತನ ಪಲ್ಸರ್ ಸಿಎಸ್400 ಮಾದರಿಯನ್ನು ಪ್ರಸಕ್ತ ಸಾಲಿನ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳಿಸಲಿದೆ. ಅಂದರೆ ಮುಂಬರುವ ಹಬ್ಬದ ಆವೃತ್ತಿಯಲ್ಲಿ ಬಿಡುಗಡೆಯಾಗುವುದು ಬಹುತೇಕ ನಿಶ್ಚಿತವೆನಿಸಿದೆ.
ಇದರೊಂದಿಗೆ ಅತ್ಯಂತ ಶಕ್ತಿಶಾಲಿ 400 ಸಿಸಿ ಪಲ್ಸರ್ ಕ್ರೀಡಾ ಬೈಕ್ ಕಾಯುವಿಕೆಗೆ ವಿರಾಮ ಬಿದ್ದಿದೆ. ನೂತನ ಪಲ್ಸರ್ ಸಿಎಸ್400 ಬೈಕ್ ಪ್ರೇಮಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

2014 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಬಜಾಜ್ ಪಲ್ಸರ್ ಸಿಎಸ್400, ಈಗ ನಿರ್ಮಾಣ ಹಂತಕ್ಕೆ ಚುರುಕು ಮುಟ್ಟಿಸಿದೆ.

2014 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಬಜಾಜ್ ಪಲ್ಸರ್ ಸಿಎಸ್400, ಈಗ ನಿರ್ಮಾಣ ಹಂತಕ್ಕೆ ಚುರುಕು ಮುಟ್ಟಿಸಿದೆ.

ಕಾನ್ಸೆಪ್ಟ್ ನಲ್ಲಿ ಕಂಡುಬಂದಿರುವ ಪಲ್ಸರ್ ಸಿಎಸ್400 ಮಾದರಿಗೂ ನಿರ್ಮಾಣ ಸಿದ್ಧ ಮಾದರಿಯಲ್ಲಿ ಕೆಲವೊಂದು ಬದಲಾವಣೆಗೆಗಳು ಕಂಡುಬರಲಿದೆ. ಇದರಂತೆ ಅಪ್ ಸೈಡ್ ಡೌನ್ ಯುನಿಟ್ ಬದಲಾಗಿ ಸಾಮಾನ್ಯ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಇರಲಿದೆ.

ಕಾನ್ಸೆಪ್ಟ್ ನಲ್ಲಿ ಕಂಡುಬಂದಿರುವ ಪಲ್ಸರ್ ಸಿಎಸ್400 ಮಾದರಿಗೂ ನಿರ್ಮಾಣ ಸಿದ್ಧ ಮಾದರಿಯಲ್ಲಿ ಕೆಲವೊಂದು ಬದಲಾವಣೆಗೆಗಳು ಕಂಡುಬರಲಿದೆ. ಇದರಂತೆ ಅಪ್ ಸೈಡ್ ಡೌನ್ ಯುನಿಟ್ ಬದಲಾಗಿ ಸಾಮಾನ್ಯ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಇರಲಿದೆ.

ಕ್ರೀಡಾತ್ಮಕ ನೋಟ, ಎಲ್ ಇಡಿ ಹೆಡ್ ಲ್ಯಾಂಪ್, ಟೈಲ್ ಲ್ಯಾಂಪ್, ದಪ್ಪವಾದ ಚಕ್ರಗಳು, ಸ್ಟೈಲಿಷ್ ಅಲಾಯ್ ವೀಲ್, ಸಂಪೂರ್ಣವಾದ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಫ್ರಂಟ್ ಮತ್ತು ರಿಯರ್ ಡಿಸ್ಕ್ ಬ್ರೇಕ್ ಮತ್ತು ಎಬಿಎಸ್ ವೈಶಿಷ್ಟ್ಯಗಳು ಪ್ರಮುಖ ಆಕರ್ಷಣೆಯಾಗಲಿದೆ.

ಇಲ್ಲಿ ಪಲ್ಸರ್ 'ಸಿಎಸ್' ಎಂಬುದು ಕ್ರೂಸರ್ ಸ್ಪೋರ್ಟ್ ಎಂಬುದನ್ನು ಸೂಚಿಸುತ್ತದೆ. ಇದರಲ್ಲಿ ಕೆಟಿಎಂ ಡ್ಯೂಕ್ 390ಗೆ ಸಮಾನವಾದ 373.2 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಬಳಕೆಯಾಗಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

Click it and Unblock the Notifications