ಡುಕಾಟಿ ಡಬಲ್ ಧಮಾಕಾ; 15ರಿದ 18 ಲಕ್ಷ ದುಬಾರಿಯ ಎಕ್ಸ್ ಡಯಾವಲ್ ಬಿಡುಗಡೆ

Written By:

ಇಟಲಿಯ ಐಕಾನಿಕ್ ದ್ವಿಚಕ್ರ ವಾಹನ ಸಂಸ್ಥೆ ಡುಕಾಟಿ ಮಗದೊಮ್ಮೆ ಭಾರತೀಯ ರಸ್ತೆಗಳಲ್ಲಿ ಅಬ್ಬರ ಆರಂಭಿಸಿದೆ. ಇದರಂತೆ ಅತಿ ನೂತನ ಎಕ್ಸ್ ಡಯಾವಲ್ ಮತ್ತು ಎಕ್ಸ್ ಡಯಾವಲ್ ಎಸ್ ಬೈಕ್ ಗಳನ್ನು ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಎಕ್ಸ್ ಡಯಾವಲ್: 15.87 ಲಕ್ಷ ರು.
  • ಎಕ್ಸ್ ಡಯಾವಲ್ ಎಸ್: 18.47 ಲಕ್ಷ ರು.

ಪ್ರಸಕ್ತ ಸಾಲಿನಲ್ಲಷ್ಟೇ ದೇಶದಲ್ಲಿ 959 ಪನಿಗಲ್ ಮತ್ತು ಮಲ್ಟಿಸ್ಟ್ರಾಡಾ 1200 ಪೈಕ್ಸ್ ಪೀಕ್ ಬೈಕ್ ಗಳನ್ನು ಡುಕಾಟಿ ಬಿಡುಗಡೆಗೊಳಿಸಿತ್ತು. ಈಗ ಎಕ್ಸ್ ಡಯಾವಲ್ ಆಗಮನದೊಂದಿಗೆ ತನ್ನ ಸಾನಿಧ್ಯವನ್ನು ಮತ್ತಷ್ಟು ಬಲಪಡಿಸಿದೆ.

ಡುಕಾಟಿ ಎಕ್ಸ್ ಡಯಾವಲ್ ಭರ್ಜರಿ ಬಿಡುಗಡೆ

'ಪವರ್ ಕ್ರೂಸರ್' ಎಂದೇ ಗುರುತಿಸಿಕೊಂಡಿರುವ ಎಕ್ಸ್ ಡಯಾವಲ್, 1263 ಸಿಸಿ ಟೆಸ್ಟಾಟ್ರೆಟ್ಟಾ ಡೆಸ್ಮೊಡ್ರಾಮಿಕ್ ವೆರಿಯಬಲ್ ಟೈಮಿಂಗ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 129 ಎನ್ ಎಂ ತಿರುಗುಬಲದಲ್ಲಿ 156 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದೆ.

ಡುಕಾಟಿ ಎಕ್ಸ್ ಡಯಾವಲ್ ಭರ್ಜರಿ ಬಿಡುಗಡೆ

ಈ ಮೊದಲೇ ತಿಳಿಸಿರುವಂತೆಯೇ ಎಕ್ಸ್ ಡಯಾವಲ್ ಎರಡು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಆದರೂ ಎರಡು ಆವೃತ್ತಿಗಳು ಸಮಾನವಾದ ಎಂಜಿನ್ ತಾಂತ್ರಿಕತೆಗಳನ್ನು ಪಡೆದಲಿದೆ.

ಡುಕಾಟಿ ಎಕ್ಸ್ ಡಯಾವಲ್ ಭರ್ಜರಿ ಬಿಡುಗಡೆ

ಹಾಗಿದ್ದರೂ ಎಕ್ಸ್ ಡಯಾವಲ್ ಎಸ್ ಆವೃತ್ತಿಯಲ್ಲಿ ಸಂಪೂರ್ಣ ಎಲ್ ಇಡಿ ಲೈಟಿಂಗ್ ಕ್ಲಸ್ಟರ್ ಜೊತೆ ಬ್ಲೂಟೂತ್ ಇನ್ಪೋಟೈನ್ಮೆಂಟ್ ಸಿಸ್ಟಂ, ಮೆಷಿನ್ ಫಿನಿಶ್ ಅಲಾಯ್ ಚಕ್ರ ಹಾಗೂ ಎಂಜಿನ್ ಕವರ್ ಇತ್ಯಾದಿ ಸೌಲಭ್ಯಗಳು ಲಭ್ಯವಾಗಲಿದೆ.

ಡುಕಾಟಿ ಎಕ್ಸ್ ಡಯಾವಲ್ ಭರ್ಜರಿ ಬಿಡುಗಡೆ

ನೂತನ ಎಕ್ಸ್ ಡಯಾವಲ್ ಡೈರ್-ಬೈ-ವೈರ್ ಮತ್ತು ಮೂರು ಚಾಲನಾ ವಿಧಗಳನ್ನು ಪಡೆಯಲಿದೆ. ಅವುಗಳೆಂದರೆ,

ಸ್ಪೋರ್ಟ್, ಟೂರಿಂಗ್ ಮತ್ತು ಅರ್ಬನ್.

ಡುಕಾಟಿ ಎಕ್ಸ್ ಡಯಾವಲ್ ಭರ್ಜರಿ ಬಿಡುಗಡೆ

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ಟ್ರಾಕ್ಷನ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಹಾಗೂ ಡುಕಾಟಿ ಪವರ್ ಲಾಂಚ್ ಮುಂತಾದ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಡುಕಾಟಿ ಎಕ್ಸ್ ಡಯಾವಲ್ ಭರ್ಜರಿ ಬಿಡುಗಡೆ

2015 ಮಿಲಾನ್ ಮೋಟಾರು ಶೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿರುವ ಡುಕಾಟಿ ಎಕ್ಸ್ ಡಯಾವಲ್, ಜಗತ್ತಿನ ಅತ್ಯಂತ ಸುಂದರ ಕ್ರೂಸರ್ ಬೈಕ್ ಗಳಲ್ಲಿ ಒಂದಾಗಿದೆ. ಇದು ಪ್ರತಿಷ್ಠಿತ ಹಾರ್ಲೆ ಡೇವಿಡ್ಸನ್ ಹಾಗೂ ಇಂಡಿಯನ್ ಮೋಟಾರ್ ಸೈಕಲ್ ಸಂಸ್ಥೆಗಳಿಗೆ ನೇರ ಪೈಪೋಟಿಯನ್ನು ಒಡ್ಡಲಿದೆ.

ಡುಕಾಟಿ ಎಕ್ಸ್ ಡಯಾವಲ್ ಭರ್ಜರಿ ಬಿಡುಗಡೆ

ಟ್ರೆಲ್ಲಿಸ್ ಫ್ರೇಮ್ ಜೊತೆಗೆ ಆಕ್ರಮಣಕಾರಿ ರಸ್ತೆ ಸಾನಿಧ್ಯ, ಯು ಆಕಾರದ ಡೇಟೈಮ್ ರನ್ನಿಂಗ್ ಲೈಟ್, ಬೃಹತ್ತಾದ 18 ಲೀಟರ್ ಗಳ ಇಂಧನ ಟ್ಯಾಂಕ್, ಸಿಂಗಲ್ ಸೈಡಡ್ ಸ್ವಿಂಗ್ ಆರ್ಮ್ ಜೊತೆಗೆ ಹೊಂದಾಣಿಸಬಹುದಾದ ಸಸ್ಪೆನ್ಷನ್ ವ್ಯವಸ್ಥೆ ಹಾಗೂ ಬ್ರೆಂಬೊ ಮೊನೊಬ್ಲಾಕ್ ರೇಡಿಯಲ್ ಕ್ಯಾಲಿಪರ್ ಪಡೆದಿದೆ.

ಡುಕಾಟಿ ಎಕ್ಸ್ ಡಯಾವಲ್ ಭರ್ಜರಿ ಬಿಡುಗಡೆ

ಅಷ್ಟಕ್ಕೂ ಡುಕಾಟಿ ಎಕ್ಸ್ ಡಯಾವಲ್ ಗಂಟೆಗೆ ಗರಿಷ್ಠ 240 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಡುಕಾಟಿ ಎಕ್ಸ್ ಡಯಾವಲ್ ಭರ್ಜರಿ ಬಿಡುಗಡೆ

ಡುಕಾಟಿ ಎಕ್ಸ್ ಡಯಾವಲ್ ವಿತರಣೆ ಪ್ರಕ್ರಿಯೆಯು ಸೆಪ್ಟೆಂಬರ್ ತಿಂಗಳಿನಿಂದಲೇ ಆರಂಭವಾಗಲಿದ್ದು, ಆಸಕ್ತರು ಎರಡು ಲಕ್ಷ ರು.ಗಳನ್ನು ಮುಗಂಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಡುಕಾಟಿ ಎಕ್ಸ್ ಡಯಾವಲ್ ಭರ್ಜರಿ ಬಿಡುಗಡೆ

ಡುಕಾಟಿ ಎಕ್ಸ್ ಡಯಾವಲ್ ಆಗಮನದೊಂದಿಗೆ ಭಾರತದಲ್ಲಿ ಪ್ರೀಮಿಯಂ ಕ್ರೂಸರ್ ಬೈಕ್ ಗಳಿಗೆ ಬೇಡಿಕೆ ಹೆಚ್ಚಲಿದೆ ಎಂಬುದು ವಿಶ್ಲೇಷಕರ ಅಭಿಮತವಾಗಿದೆ. ಇದು ಭಾರತೀಯ ವಾಹನ ಮಾರುಕಟ್ಟೆ ದೃಷ್ಟಿಕೋನದಲ್ಲಿ ಪೂರಕವಾದ ಬೆಳವಣಿಗೆಯಾಗಿದೆ.

Read more on ಡುಕಾಟಿ ducati
English summary
Ducati Launches Its Meanest Cruiser In India — The XDiavel For Rs. 15.87 Lakh
Story first published: Tuesday, September 20, 2016, 13:18 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark