ಮಹೀಂದ್ರ ಶಕ್ತಿಶಾಲಿ ಸ್ಕೂಟರ್ ಗಸ್ಟೊ 125 ಭರ್ಜರಿ ಬಿಡುಗಡೆ
ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಭಾಗವಾಗಿರುವ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಟು ವೀಲರ್ಸ್, ಬೆಂಗಳೂರಿನಲ್ಲಿ ಅತಿ ನೂತನ ಗಸ್ಟೊ 125 ಸ್ಕೂಟರನ್ನು ಬಿಡುಗಡೆಗೊಳಿಸಿದೆ. ಇದು ಗಸ್ಟೊ 110 ಸಿಸಿ ಆವೃತ್ತಿಗಿಂತಲೂ ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳಲಿದ್ದು ಗರಿಷ್ಠ ವೈಶಿಷ್ಟ್ಯಗಳನ್ನು ಪಡೆದಿದೆ.
ಪ್ರಾರಂಭಿಕ ಬೆಲೆ: 50,680 ರು. (ಎಕ್ಸ್ ಶೋ ರೂಂ ಬೆಂಗಳೂರು)
ನೂತನ ಗಸ್ಟೊ 125 ಸ್ಕೂಟರನ್ನು ಸಂಪೂರ್ಣವಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಹೋಂಡಾದ ಜನಪ್ರಿಯ ಆಕ್ಟಿವಾ 125 ಮತ್ತು ಸುಜುಕಿ ಆಕ್ಸೆಸ್ 125 ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)
- ಮಹೀಂದ್ರ ಗಸ್ಟೊ 125 ಡಿಎಕ್ಸ್: 50,680 ರು.
- ಮಹೀಂದ್ರ ಗಸ್ಟೊ 125 ವಿಎಕ್ಸ್: 53,680 ರು.
- ಶಕ್ತಿಯುತ 125 ಸಿಸಿ ಎಂ-ಟೆಕ್ ಎಂಜಿನ್, ಎಂಸಿಡಿಐ ತಂತ್ರಗಾರಿಕೆ,
- ಎತ್ತರ ಹೊಂದಾಣಿಕೆಯ ಸೀಟು ಜೊತೆಗೆ ಪ್ರಶಸ್ತಿ ವಿಜೇತ ನವೀನ ತಂತ್ರಜ್ಞಾನ,
- 124.6 ಸಿಸಿ, 4 ಸ್ಟ್ರೋಕ್, ಏರ್ ಕೂಲ್ಡ್ ಎಂ-ಟೆಕ್ ಎಂಜಿನ್
- 8.5 ಅಶ್ವಶಕ್ತಿ (7000 ಆರ್‌ಪಿಎಂ)
- 10 ಎನ್ ಎಂ ತಿರುಗುಬಲ (5500 ಆರ್‌ಪಿಎಂ)
- ಗೇರ್ ಬಾಕ್ಸ್: ಸಿವಿಟಿ

ಮುಖ್ಯಾಂಶಗಳು

ನೂತನ ಗಮನ ಸೆಳೆಯುವ ವಿನ್ಯಾಸ
ನೂತನ ಗಸ್ಟೊ 125 ಸಿಸಿ ಎಂಜಿನ್ ಆಕರ್ಷಕ ವಿನ್ಯಾಸದಲ್ಲಿ ಲಭ್ಯವಿದ್ದು, ಆರೆಂಜ್ ರಷ್, ಬೋಲ್ಟ್ ವೈಟ್, ಮೊನಾರ್ಚ್ ಬ್ಲ್ಯಾಕ್, ರೀಗಲ್ ರೆಡ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಅನುಕೂಲಗಳು - ಎತ್ತರ ಹೊಂದಾಣಿಸುವ ಸೀಟು
ಭಾರತೀಯ ಸ್ಕೂಟರ್ ವಿಭಾಗದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿರುವ ಮಹೀಂದ್ರ, ನೂತನ ಗಸ್ಟೊ 125 ಸ್ಕೂಟರ್ ನಲ್ಲಿ ಎತ್ತರ ಹೊಂದಾಣಿಸಬಹುದಾದ ಸೀಟಿನ ವ್ಯವಸ್ಥೆಯನ್ನು ಒದಗಿಸುತ್ತಿದೆ.

ನಾವೀನ್ಯತೆ
ನೂತನ ಗಸ್ಟೊ 125 ಸ್ಕೂಟರ್ ನಲ್ಲಿ ರಿಮೋಟ್ ಫ್ಲಿಪ್ ಕೀ, ಫೈಂಡ್ ಮೀ ಲ್ಯಾಂಡ್, ಗೈಡ್ ಲ್ಯಾಂಪ್, ಆಕರ್ಷಕ ಹ್ಯಾಲೊಗನ್ ಹೆಡ್ ಲೈಟ್, ಎಲ್ ಇಡಿ ಪೈಲಟ್ ಲ್ಯಾಂಪ್ ಗಳು, ಸುಲಭವಾಗಿ ನಿರ್ವಹಿಸಬಹುದಾದ ಫ್ರಂಟ್ ಕಿಕ್, ತ್ವರಿತ ಸ್ಟೋರೇಜ್ ಜಾಗ ಕೂಡಾ ಇರುತ್ತದೆ.

ಸಾಧನೆ
ಆಕರ್ಷಕ ಎಂ-ಟೆಕ್ ಎಂಜಿನ್ ತಂತ್ರಜ್ಞಾನವು ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು, ಕಡಿಮೆ ಎಳೆತದ ಕ್ಲಚ್, ರೋಲರ್ ಸಿವಿಟಿ, ಎಚ್ ಟಿ ಕಾಯಿಲ್, ಇಂಧನ ಕ್ಷಮತೆ, ಸರಾಗವಾದ ಎಂಜಿನ್ ನಿರ್ವಹಣೆ ಹೊಂದಿದೆ.

ಚಾಲನಾ ಗುಣಮಟ್ಟ
ಅತಿ ದೊಡ್ಡದಾದ 12 ಇಂಚುಗಳ ಟ್ಯೂಬ್ ಲೆಸ್ ಚಕ್ರಗಳು, ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಸಸ್ಪೆನ್ಷನ್ ಮತ್ತು ಸ್ಪ್ರಿಂಗ್ ಇದೆ. ಲಾಂಗ್ ಸ್ಟ್ರೋಕ್ ನ ಹೆಡ್ರಾಲಿಕ್ ರೇಕ್ ಸಸ್ಪೆನ್ಷನ್, ಹೈ ಗ್ರೌಂಡ್ ಕ್ಲಿಯರನ್ಸ್, ವಿಶಾಲವಾದ ಚಕ್ರದ ತಳಹದಿ ಇರುತ್ತದೆ.

ಎಂಜಿನ್

ಮಹೀಂದ್ರ ಗಸ್ಟೊ 125 ಸಿಸಿ ಸ್ಕೂಟರ್ ವಿಮರ್ಶೆ; ಆಕ್ಟಿವಾಗಿಂತ ಹೇಗೆ ಭಿನ್ನ?


Click it and Unblock the Notifications








