ರೈಡಿಂಗ್ ಪ್ರಿಯರಿಗಾಗಿ ಮೊಜೊ ಟೂರರ್ ಎಡಿಷನ್ ಬಿಡುಗಡೆ
ಕೆಲವು ಸಮಯಗಳ ಹಿಂದೆಯಷ್ಟೇ ಮೊಜೊ ಕ್ರೀಡಾ ಬೈಕನ್ನು ಬಿಡುಗಡೆಗೊಳಿಸಿರುವ ದೇಶದ ಮುಂಚೂಣಿಯ ಮಹೀಂದ್ರ ಟು ವೀಲರ್ಸ್ ಸಂಸ್ಥೆಯೀಗ, ರೈಡಿಂಗ್ ಪ್ರಿಯರಿಗಾಗಿ ಮೊಜೊ ಟೂರರ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಇದು ಆರು ಎಕ್ಸ್ ಕ್ಲೂಸಿವ್ ಟೂರರ್ ಕಿಟ್ ಗಳನ್ನು ಗಿಟ್ಟಿಸಿಕೊಂಡಿದೆ.
ಮಹೀಂದ್ರ ಮೊಜೊ ಟೂರರ್ ಎಡಿಷನ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 1,88,850 ರುಪಾಯಿಗಳಷ್ಟು ಬೆಲೆ ಬಾಳಲಿದೆ. ಅಂದರೆ ಮಾರಾಟದಲ್ಲಿರುವ ಮೊಜೊ ಸ್ಟ್ಯಾಂಡರ್ಡ್ ಆವೃತ್ತಿಗಿಂತಲೂ 19,000 ರು.ಗಳಷ್ಟು ಹೆಚ್ಚು ದುಬಾರಿ ಎನಿಸಿಕೊಳ್ಳಲಿದೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಗರಿಷ್ಠ ತಂತ್ರಗಾರಿಕೆಗಳೊಂದಿಗೆ ಮಹೀಂದ್ರ ಮೊಜೊ ದೇಶದ ರಸ್ತೆಗೆ ಪ್ರವೇಶಿಸಿತ್ತು. ಈಗ ಮೊದಲನೇ ವರ್ಷದ ಸಂಭ್ರಮದ ಅಂಗವಾಗಿ ಮೊಜೊ ಟೂರರ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಸವಾರ ಪ್ರಿಯರಿಗಾಗಿ ಅತ್ಯಂತ ಅವಶ್ಯಕತೆಯಾಗಿರುವ ಆರು ಆಕ್ಸೆಸರಿಗಳನ್ನು ಮಹೀಂದ್ರ ಮೊಜೊ ಟೂರರ್ ಎಡಿಷನ್ ನಲ್ಲಿ ನೀಡಲಾಗುತ್ತಿದೆ.

ಅವುಗಳೆಂದರೆ,
ಮ್ಯಾಗ್ನೆಟಿಕ್ ಟ್ಯಾಂಕ್ ಬ್ಯಾಗ್, (13 ಲೀಟರ್)
ಸ್ಯಾಡಲ್ ಬ್ಯಾಗ್ ಹಾಗೂ ಕ್ಯಾರಿಯರ್, (38 ಲೀಟರ್)
ಮೊಬೈಲ್ ಹೋಲ್ಡರ್,
ಫ್ರಂಟ್ ಗಾರ್ಡ್,
ಪ್ಯಾನಿಯರ್ ಮೌಂಟ್,
ಫಾಗ್ ಲ್ಯಾಂಪ್

ಇವೆಲ್ಲದರ ಹೊರತಾಗಿ ಮಹೀಂದ್ರ ಸಂಸ್ಥೆಯು ಪರಿಚಯಾತ್ಮಕವಾಗಿ ಟೂರಿಂಗ್ ಜಾಕೆಟ್ ಸಹ ಆಫರ್ ಮಾಡುತ್ತಿದೆ.

ದ್ವಿಚಕ್ರ ವಾಹನ ವಿಭಾಗದಲ್ಲಿ ಮಹೀಂದ್ರ ಮೊಜೊ 300 ಸಿಸಿ ಬೈಕ್ ಹೊಸ ಕ್ರಾಂತಿಯನ್ನು ಹಬ್ಬಿಸಿತ್ತಲ್ಲದೆ ಸಾಹಸ ಸವಾರಿಗೆ ಉತ್ತೇಜನವನ್ನು ತುಂಬಿಕೊಂಡಿದೆ.

ಮೊಜೊ ಮಾಲಿಕರಿಗಾಗಿ 'ಮೊಜೊ ಟ್ರೈಬ್' ಎಂಬ ರೈಡಿಂಗ್ ಕ್ಲಬ್ ರಚಿಸಲಾಗಿದೆ. ಇವೆಲ್ಲವೂ ಈ ಟೂರರ್ ಬೈಕ್ ಸವಾರಿಯನ್ನು ಮತ್ತಷ್ಟು ಆನಂದಿಸಲು ನೆರವಾಗಿತ್ತು.

295 ಸಿಸಿ ಸಿಂಗಲ್ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಮಹೀಂದ್ರ ಮೊಜೊ 30 ಎನ್ ಎಂ ತಿರುಗುಬಲದಲ್ಲಿ 27 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಆರು ಸ್ಪೀಡ್ ಗೇರ್ ಬಾಕ್ಸ್ ಪಡೆದಿದೆ.

ಇನ್ನುಳಿದಂತೆ ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಫಾರ್ಕ್, ಮೊನೊಶಾಕ್ ರಿಯರ್ ಸಸ್ಪೆನ್ಷನ್, ಪೈರಲ್ಲಿ ಚಕ್ರಗಳು, ಡಿಸ್ಕ್ ಬ್ರೇಕ್, ಡ್ಯುಯಲ್ ಎಕ್ಸಾಸ್ಟ್, ಟ್ವಿನ್ ಹೆಡ್ ಲ್ಯಾಂಪ್, ಡಿಜಿಯಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 21 ಲೀಟರ್ ಇಂಧನ ಟ್ಯಾಂಕ್ ಇತ್ಯಾದಿ ಸೌಲಭ್ಯಗಳಿರಲಿದೆ.


Click it and Unblock the Notifications








