ಮಹೀಂದ್ರ ಹೊರ ತರುತ್ತಿದೆ ಅತಿ ನೂತನ 155 ಸಿಸಿ ಬೈಕ್
ಮೊಜೊ 300 ಸಿಸಿ ಬೈಕ್ ಅನ್ನು ಪರಿಚಯಿಸಿರುವ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಮಹೀಂದ್ರ ಟು ವೀಲರ್ಸ್, ಮಗದೊಂದು ನೂತನ ಎಂಜಿನ್ ಟೆಸ್ಟಿಂಗ್ ಹಂತದಲ್ಲಿ ತೊಡಗಿಸಿದೆ. ಮಹೀಂದ್ರದ ನೂತನ 155 ಸಿಸಿ ಎಂಜಿನ್ ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಪ್ರಿಯರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ.
Also Read: ಬ್ರ್ಯಾಂಡ್ ಅಲ್ಲ ಗುಣಮಟ್ಟ ಮುಖ್ಯ - ಓದಿ ಮಹೀಂದ್ರ ಮೊಜೊ ಟೆಸ್ಟ್ ಡ್ರೈವ್ ರಿವ್ಯೂ
ದ್ವಿಚಕ್ರ ವಾಹನದ ಎಲ್ಲ ವಿಭಾಗದಲ್ಲೂ ತನ್ನ ಸಾನಿಧ್ಯ ವ್ಯಕ್ತಪಡಿಸಲು ಇರಾದೆ ಹೊಂದಿರುವ ಮಹೀಂದ್ರ ನಿಕಟ ಭವಿಷ್ಯದಲ್ಲೇ 160 ಸಿಸಿ ವಿಭಾಗದೊಳಗೆ ಎಂಟ್ರಿ ಕೊಡಲಿದೆ. ಈಗ ಟೆಸ್ಟಿಂಗ್ ಹಂತದಲ್ಲಿರುವ ಬೈಕ್ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿವೆ.

ಮಹಾರಾಷ್ಟ್ರದ ಪುಣೆಯಲ್ಲಿ ರಸ್ತೆ ಸಂಚಾರ ಪ್ರಯೋಗದ ವೇಳೆ ಮಹೀಂದ್ರ ನೂತನ 155ಸಿಸಿ ಸಿಂಗಲ್ ಸಿಲಿಂಡರ್ ಎಸ್‌ಒಎಚ್‌ಸಿ ಏರ್ ಕೂಲ್ಡ್ ಎಂಜಿನ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ.

ಮಹೀಂದ್ರದ ಅಧ್ಯಯನ ಮತ್ತು ಅಭಿವೃದ್ಧಿ ಘಟಕದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, 15ರಷ್ಟು ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಉಪಯುಕ್ತ ಬೈಕ್ ವಿನ್ಯಾಸವನ್ನು ಕಾಪಾಡಿಕೊಂಡಿರುವ ನೂತನ ಮಹೀಂದ್ರ ಬೈಕ್ ಸಾಂಪ್ರದಾಯಿಕ ಶೈಲಿಯೊಂದಿಗೆ ಪ್ರತ್ಯಕ್ಷಗೊಂಡಿದೆ. ಇದರಲ್ಲಿ ಅತಿ ಸರಳವಾದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಲಗತ್ತಿಸಲಾಗಿದೆ.

ಕ್ರೀಡಾತ್ಮಕ ವಿನ್ಯಾಸಗಿಂತಲೂ ವಿರುದ್ಧವಾಗಿ ಇಲ್ಲಿ ಕ್ಲಾಸಿಕ್ ವಿನ್ಯಾಸದತ್ತ ಮಹೀಂದ್ರ ಹೆಚ್ಚು ಗಮನ ಹರಿಸಿದೆ. ಇದು ಅಪ್ಪಟ್ಟ ಬೈಕ್ ಪ್ರೇಮಿಗಳನ್ನು ಹೆಚ್ಚೆಚ್ಚು ಆಕರ್ಷಿಸಲಿದೆ.

ಅಂತೆಯೇ ವೃತ್ತಾಕಾರದ ಟೈಲ್ ಲ್ಯಾಂಪ್, ಟೈಲ್ ಲ್ಯಾಂಪ್ ಮತ್ತು ಎರಡು ಬದಿಗಳಲ್ಲೂ ಇಂಡಿಕೇಟರ್ ಗಳು ಹೆಚ್ಚು ಗಮನಕ್ಕೆ ಪಾತ್ರವಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.
ಚಿತ್ರ ಕೃಪೆ: car and bike


Click it and Unblock the Notifications








