ಇದೇ ಮೊದಲ ಬಾರಿಗೆ ಬದಲಾಯ್ತು ಎನ್‌ಫೀಲ್ಡ್ 'ಹಿಮಾಲಯನ್'

Written By:

ಯಾವುದೇ ಒಂದು ಹೊಸ ಉತ್ಪನ್ನ ಮಾರುಕಟ್ಟೆಗಿಳಿದರೆ ಅದನ್ನು ನಕಲಿ ಮಾಡುವುದು ವಾಹನ ಜಗತ್ತಿನಲ್ಲಿ ಬಹಳ ಹಿಂದಿನಿಂದಲೇ ಕಂಡುಬಂದಿರುವ ಜಾಯಮಾನ. ಇನ್ನು ಜನಪ್ರಿಯ ಮಾದರಿಗಳನ್ನು ವಿಶಿಷ್ಟವಾಗಿ ಮಾರ್ಪಾಡುಗೊಳಿಸುವ ಸಂಪ್ರದಾಯವನ್ನು ವಾಹನ ಪ್ರೇಮಿಗಳು ರೂಢಿಸಿಕೊಂಡು ಬಂದಿದ್ದಾರೆ. ಇದಕ್ಕೀಗ ರಾಯಲ್ ಎನ್ ಫೀಲ್ಡ್ ನ ನೂತನ ಹಿಮಾಲಯನ್ ಆಫ್ ರೋಡ್ ಅಡ್ವೆಂಚರ್ ಬೈಕ್ ಸೇರ್ಪಡೆಯಾಗಿದೆ.

ಇದೇ ಮೊದಲ ಬಾರಿಗೆ ಬದಲಾಯ್ತು ಎನ್‌ಫೀಲ್ಡ್ 'ಹಿಮಾಲಯನ್'

ರಾಯಲ್ ಎನ್ ಫೀಲ್ಡ್ ಗೆ ಸೇರಿದ ಬಹುತೇಕ ಎಲ್ಲ ಬುಲೆಟ್ ಗಳನ್ನು ಮಾರ್ಪಾಡುಗೊಳಿಸಿರುವ ಸುದ್ದಿಯನ್ನು ನಾವು ಕೇಳಿರುತ್ತೇವೆ. ಈಗ ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಹಿಮಾಲಯನ್ ಬೈಕ್ ಗೂ ಕಸ್ಟಮೈಸ್ಡ್ ಟಚ್ ನೀಡಲಾಗಿದೆ.

ಇದೇ ಮೊದಲ ಬಾರಿಗೆ ಬದಲಾಯ್ತು ಎನ್‌ಫೀಲ್ಡ್ 'ಹಿಮಾಲಯನ್'

ಇನ್ ಲೈನ್ 3 ಕಸ್ಟಮ್ ಮೋಟಾರ್ ಸೈಕಲ್ಸ್ ಸಂಸ್ಥೆಯು ಹಿಮಾಲಯನ್ ಬೈಕನ್ನು ವಿಶಿಷ್ಟವಾಗಿ ಮಾರ್ಪಾಡುಗೊಳಿಸಿದ್ದು, 'ಸಾಲ್ಟ್ ರೇಸರ್' ಎಂದು ಹೆಸರಿಸಿಕೊಂಡಿದೆ.

ಇದೇ ಮೊದಲ ಬಾರಿಗೆ ಬದಲಾಯ್ತು ಎನ್‌ಫೀಲ್ಡ್ 'ಹಿಮಾಲಯನ್'

ದೆಹಲಿಯಲ್ಲಿ ಸ್ಥಿತಗೊಂಡಿರುವ ರಾಯಲ್ ಎನ್ ಫೀಲ್ಡ್ ನ ಅತಿ ದೊಡ್ಡ ಡೀಲರ್ ಶಿಪ್ ಸೌತ್ ದೆಹಲಿ ಮೋಟಾರ್ ಸೈಕಲ್ಸ್ ಗಾಗಿ ಈ ವಿನೂತನ ಹಿಮಾಲಯನ್ ಬೈಕ್ ನಿರ್ಮಿಸಲಾಗಿದೆ.

ಇದೇ ಮೊದಲ ಬಾರಿಗೆ ಬದಲಾಯ್ತು ಎನ್‌ಫೀಲ್ಡ್ 'ಹಿಮಾಲಯನ್'

ಇಲ್ಲಿ ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದ್ದು, ಹಳೆಯ ವಿಂಟೇಜ್ ಶೈಲಿಯನ್ನು ಪ್ರದಾನ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಬದಲಾಯ್ತು ಎನ್‌ಫೀಲ್ಡ್ 'ಹಿಮಾಲಯನ್'

ಸಾಲ್ಟ್ ರೇಸರ್ ಗೆ ತಕ್ಕುದಾಗಿ ಇದರಲ್ಲಿ ಚಾಲನಾ ಎತ್ತರವನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ಇನ್ನು ಒಟ್ಟಾರೆ ತೂಕದಲ್ಲೂ 20 ಕೆ.ಜಿ.ಗಳಷ್ಟು ಇಳಿಕೆ ಕಂಡುಬಂದಿದೆ.

ಇದೇ ಮೊದಲ ಬಾರಿಗೆ ಬದಲಾಯ್ತು ಎನ್‌ಫೀಲ್ಡ್ 'ಹಿಮಾಲಯನ್'

ಇದರಲ್ಲಿ ಅಲ್ಯೂಮಿನಿಯಂ ಅತಿ ಹೆಚ್ಚು ಬಳಕೆ ಮಾಡಲಾಗಿದ್ದು, ವಾಹನಕ್ಕೆ ವಿಚಿತ್ರ ಲುಕ್ ನೀಡುವಂತಾಗಿದೆ. ಇನ್ನು ದಪ್ಪವಾದ ಫೈರ್ ಸ್ಟೋನ್ ಚಕ್ರವನ್ನು ಬಳಕೆ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಬದಲಾಯ್ತು ಎನ್‌ಫೀಲ್ಡ್ 'ಹಿಮಾಲಯನ್'

ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್ 411 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತಿದ್ದು, 32 ಎನ್ ಎಂ ತಿರುಗುಬಲದಲ್ಲಿ 24.5 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಚಾಸೀ ಮತ್ತು ಸಸ್ಪೆನ್ಷನ್

ಚಾಸೀ ಮತ್ತು ಸಸ್ಪೆನ್ಷನ್

ವಿಧ: ಹಾಲ್ಪ್ ಡುಪ್ಲೆಕ್ಸ್ ವಿಭಜಿತ ಕ್ರಾಡಲ್ ಫ್ರೇಮ್

ಮುಂಭಾಗ: ಟೆಲಿಸ್ಕಾಪಿಕ್, 41 ಎಂಎಂ ಫಾರ್ಕ್, 200 ಎಂಎಂ ಟ್ರಾವೆಲ್,

ಹಿಂಭಾಗ: ಮೊನೊಶಾಕ್ ಜೊತೆ ಲಿಂಕೇಜ್, 180 ಎಂಎಂ ವೀಲ್ ಟ್ರಾವೆಲ್.

ಆಯಾಮ (ಎಂಎಂ )

ಆಯಾಮ (ಎಂಎಂ )

ಚಕ್ರಾಂತರ: 1465

ಗ್ರೌಂಡ್ ಕ್ಲಿಯರನ್ಸ್: 220

ಉದ್ದ: 2190

ಅಗಲ: 840

ಸೀಟು ಎತ್ತರ: 800

ಎತ್ತರ: 1360

ಭಾರ: 182

ಇಂಧನ ಸಾಮರ್ಥ್ಯ: 15 + 0.5 ಲೀಟರ್

ಬ್ರೇಕ್ ಮತ್ತು ಚಕ್ರಗಳು

ಬ್ರೇಕ್ ಮತ್ತು ಚಕ್ರಗಳು

ಮುಂಭಾಗ: 90/90-21

ಹಿಂಭಾಗ : 120/90 - 17

ಇದೇ ಮೊದಲ ಬಾರಿಗೆ ಬದಲಾಯ್ತು ಎನ್‌ಫೀಲ್ಡ್ 'ಹಿಮಾಲಯನ್'

ಫ್ರಂಟ್ ಬ್ರೇಕ್: 300 ಎಂಎಂ ಡಿಸ್ಕ್, 2 ಪಿಸ್ತಾನ್ ಪ್ಲೋಟಿಂಗ್ ಕ್ಯಾಲಿಪರ್

ರಿಯರ್ ಬ್ರೇಕ್: 240 ಎಂಎಂ ಡಿಸ್ಕ್, ಸಿಂಗಲ್ ಪಿಸ್ತಾನ್ ಪ್ಲೋಟಿಂಗ್ ಕ್ಯಾಲಿಪರ್

English summary
This Royal Enfield Himalayan Is A Perfect Salt Racer
Story first published: Friday, November 18, 2016, 13:18 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark