ದಿಗ್ಗಜರ ವಿರುದ್ಧ ಪೈಪೋಟಿಗೆ ಸಜ್ಜಾಗುತ್ತಿರುವ ರಾಯಲ್ ಎನ್‌ಫೀಲ್ಡ್

Written By:

ಭಾರತದ ಐಕಾನಿಕ್ ರಾಯಲ್ ಎನ್ ಫೀಲ್ಡ್ ಸಂಸ್ಥೆಯು ಜಾಗತಿಕ ಮಟ್ಟದಲ್ಲೂ ತನ್ನ ವಹಿವಾಟು ಕುದುರಿಸಿಕೊಳ್ಳುವ ಇರಾದೆಯಲ್ಲಿದೆ. ಈ ಮುಖಾಂತರ ಪ್ರಖ್ಯಾತ ಬ್ರಾಂಡ್ ಗಳ ವಿರುದ್ಧ ಪೈಪೋಟಿಗೆ ಸಜ್ಜಾಗುತ್ತಿದೆ.

ಇದಕ್ಕೆ ಪೂರಕವಾದ ಬೆಳವಣಿಗೆಯಂತೆಯೇ ಬ್ರಿಟನ್ ನಲ್ಲಿ ಸ್ಥಿತಗೊಂಡಿರುವ ಸಂಸ್ಥೆಯ ಅಧ್ಯಯನ ಮತ್ತು ಅಭಿವೃದ್ಧಿ ಫಟಕದಲ್ಲಿ 600ರಿಂದ 650ಸಿಸಿ ವರೆಗಿನ ದ್ವಿಚಕ್ರ ವಾಹನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

To Follow DriveSpark On Facebook, Click The Like Button
ದಿಗ್ಗಜರ ವಿರುದ್ಧ ಪೈಪೋಟಿಗೆ ಸಜ್ಜಾಗುತ್ತಿರುವ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್ ಫೀಲ್ಡ್ ನೂತನ ನೀತಿಯು ವಿಶ್ವ ಪ್ರಸಿದ್ಧ ಹಾರ್ಲೆ ಡೇವಿಡ್ಸನ್ ಮತ್ತು ಟ್ರಯಂಪ್ ಗಳಂತಹ ಪ್ರಖ್ಯಾತ ಸಂಸ್ಥೆಗಳ ವಿರುದ್ಧ ಜಿದ್ದಾಜಿದ್ದಿನ ಹಣಾಹಣಿಗೆ ವೇದಿಕೆಯೊದಗಿಸಲಿದೆ.

ದಿಗ್ಗಜರ ವಿರುದ್ಧ ಪೈಪೋಟಿಗೆ ಸಜ್ಜಾಗುತ್ತಿರುವ ರಾಯಲ್ ಎನ್‌ಫೀಲ್ಡ್

ನೂತನ 600 ಮತ್ತು 650 ಸಿಸಿ ಬುಲೆಟ್ ಗಳು ಪ್ರಮುಖವಾಗಿಯೂ ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಳ್ಳಲಿದೆ.

ದಿಗ್ಗಜರ ವಿರುದ್ಧ ಪೈಪೋಟಿಗೆ ಸಜ್ಜಾಗುತ್ತಿರುವ ರಾಯಲ್ ಎನ್‌ಫೀಲ್ಡ್

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಅಭಿವೃದ್ಧಿ ಹಂತದಲ್ಲಿರುವ ನೂತನ ರಾಯಲ್ ಎನ್ ಫೀಲ್ಡ್ ಬುಲೆಟ್ ಗಳು ಮುಂದಿನ ವರ್ಷದ ವೇಳೆಯಾಗುವಾಗ ಮಾರುಕಟ್ಟೆ ಪ್ರವೇಶಿಸಲಿದೆ.

ದಿಗ್ಗಜರ ವಿರುದ್ಧ ಪೈಪೋಟಿಗೆ ಸಜ್ಜಾಗುತ್ತಿರುವ ರಾಯಲ್ ಎನ್‌ಫೀಲ್ಡ್

ಒಟ್ಟಾರೆಯಾಗಿ ವಿಶ್ವದಲ್ಲೇ 200 ಸಿಸಿ ವಿಭಾಗದಿಂದ ಹಿಡಿದು 750 ಸಿಸಿ ವರೆಗಿನ ವಿಭಾಗದಲ್ಲಿ ನಂ.1 ಎನಿಸಿಕೊಳ್ಳುವುದು ರಾಯಲ್ ಎನ್ ಫೀಲ್ಡ್ ಇರಾದೆಯಾಗಿದೆ. ಭಾರತದಲ್ಲಿ ದೊರಕಿರುವ ಯಶಸ್ಸು ಇಲ್ಲಿ ಪ್ರತಿಬಿಂಬಿಸಲಿದೆ.

ದಿಗ್ಗಜರ ವಿರುದ್ಧ ಪೈಪೋಟಿಗೆ ಸಜ್ಜಾಗುತ್ತಿರುವ ರಾಯಲ್ ಎನ್‌ಫೀಲ್ಡ್

ಅಂದ ಹಾಗೆ ನೂತನ ಬುಲೆಟ್ ಹೆಸರೇನು ಬಹಿರಂಗವಾಗಿಲ್ಲ. ಆದರೆ ಇದು 'ಪಿ61' ಎಂಬ ಕೋಡ್ ಪಡೆದಿದೆ.

ದಿಗ್ಗಜರ ವಿರುದ್ಧ ಪೈಪೋಟಿಗೆ ಸಜ್ಜಾಗುತ್ತಿರುವ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್ ಫೀಲ್ಡ್ ಒಡೆತನದ ಈಚರ್ ಮೋಟಾರ್ಸ್ ಇತ್ತೀಚೆಗಷ್ಟೇ ಭಾರತದಲ್ಲಿ ಅತಿ ನೂತನ ಹಿಮಾಲಯನ್ ಅಡ್ವೆಂಚರ್ ಟೂರರ್ ಬೈಕ್ ಬಿಡುಗಡೆಗೊಳಿಸಿತ್ತು. ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ.

ದಿಗ್ಗಜರ ವಿರುದ್ಧ ಪೈಪೋಟಿಗೆ ಸಜ್ಜಾಗುತ್ತಿರುವ ರಾಯಲ್ ಎನ್‌ಫೀಲ್ಡ್

ಇವೆಲ್ಲದರ ಹೊರತಾಗಿ ಕ್ಲಾಸಿಕ್ ಮತ್ತು ಥಂಡರ್ ಬರ್ಡ್ ಆವೃತ್ತಿಗಳ ದೊಡ್ಡ ಆವೃತ್ತಿಯ ಅಭಿವೃದ್ಧಿಯು ತೆರೆಮರೆಯಲ್ಲಿ ನಡೆಯುತ್ತಿದೆ. ಇವೆರಡು ಅನುಕ್ರಮವಾಗಿ ಡಿ41 ಮತ್ತು ಡಿ61 ಎಂಬ ಕೋಡ್ ಪಡೆದಿದೆ.

English summary
Royal Enfield Is Developing A 600-650cc Twin-cylinder Motorcycle
Story first published: Monday, March 28, 2016, 12:15 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark