ಮಿನಿ ಎಲೆಕ್ಟ್ರಿಕ್ ಬೈಕ್‌ಗೆ ಮರು ಜೀವ ತುಂಬಿದ ಸುಜುಕಿ
ಜಪಾನ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆಯಾಗಿರುವ ಸುಜುಕಿ, ನೆನೆಗುದಿಗೆ ಬಿದ್ದಿರುವ ತನ್ನ ಮಹತ್ತರ ಎಕ್ಸ್ ಟ್ರಿಗರ್ (Suzuki Extrigger) ವಿದ್ಯುತ್ ಚಾಲಿತ ಮಿನಿ ಬೈಕ್‌ಗೆ ಮರು ಜೀವ ತುಂಬಲು ನಿರ್ಧರಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಸುಜುಕಿ ಎಕ್ಸ್ ಟ್ರಿಗರ್ ಎಲೆಕ್ಟ್ರಿಕ್ ಬೈಕ್ 2017ನೇ ಸಾಲಿನಲ್ಲಿ ಪಾದಾರ್ಪಣೆಗೈಯಲಿದೆ.
ಸುಜುಕಿಯ ಈ ದಿಟ್ಟ ನಡೆಯು ತನ್ನದೇ ದೇಶದ ಅನೇಕ ಪ್ರತಿಸ್ಪರ್ಧಿಗಳಲ್ಲಿ ಕಂಪನವನ್ನುಂಟು ಮಾಡಲಿದೆ. ಯಾಕೆಂದರೆ ಜಪಾನ್ ಮೂಲದವರೇ ಆಗಿರುವ ಹೋಂಡಾ, 2013ರಲ್ಲಿ 'ಗ್ರೂಮ್' ಎಂಬ ಎಲೆಕ್ಟ್ರಿಕ್ ಬೈಕನ್ನು ಪರಿಚಯಿಸಿತ್ತು.

ಹೋಂಡಾ ಗ್ರೂಮ್ ಎಲೆಕ್ಟ್ರಿಕ್ ಬೈಕ್ ಗೆ ವಿಶೇಷವಾಗಿಯೂ ದಕ್ಷಿಣ ಏಷ್ಯಾದಲ್ಲಿ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಕವಾಸಕಿ ನೂತನ ಝಡ್125 ಪ್ರೊ ಬೈಕನ್ನು ತಯಾರಿಸಿತ್ತು.

ಆದರೆ 2013 ಟೊಕಿಯೋ ಮೋಟಾರು ಶೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿರುವ ಹೊರತಾಗಿಯೂ ಸುಜುಕಿ ಎಕ್ಸ್ ಟ್ರಿಗರ್ ಗೆ ನಿರ್ಮಾಣ ಹಂತ ತಲುಪುವ ಅದೃಷ್ಟ ಲಭ್ಯವಾಗಿರಲಿಲ್ಲ.

ಪ್ರಸ್ತುತ ತನ್ನ ಯೋಜನೆಯನ್ನು ಮರು ಪರೀಶೀಲಿಸುತ್ತಿರುವ ಸುಜುಕಿ, ಚೀನಾ, ಯುರೋಪ್ ಮತ್ತು ಅಮೆರಿಕದಲ್ಲಿ ಸಣ್ಣದಾದ ಎಲೆಕ್ಟ್ರಿಕ್ ಮೋಟಾರು ಎಂಜಿನ್ ಗಾಗಿ ಹಕ್ಕು ಸ್ವಾಮ್ಯಕ್ಕಾಗಿ ಅರ್ಜಿಯನ್ನು ಸಲ್ಲಿಸಿದೆ.

ಚೊಕ್ಕದಾದ ವಿನ್ಯಾಸ ನೀತಿಯೇ ಇತರೆ ವಿದ್ಯುತ್ ಚಾಲಿತ ಬೈಕ್ ಗಳಿಂದ ಸುಜುಕಿ ಎಕ್ಸ್ ಟ್ರಿಗರನ್ನು ಪ್ರತ್ಯೇಕಿಸುತ್ತದೆ. ಇದು ನಗರ ಚಾಲನೆಗೆ ಹೆಚ್ಚು ಹೊಂದಿಕೆಯಾಗಲಿದೆ.

0.58 ಕೆಡಬ್ಲ್ಯುಎಚ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುವ ಸುಜುಕಿ ಎಕ್ಸ್ ಟ್ರಿಗರ್ ಒಮ್ಮೆ ಚಾರ್ಜ್ ಮಾಡಿಸಿದ್ದಲ್ಲಿ 32 ಕೀ.ಮೀ. ವ್ಯಾಪ್ತಿಯ ವರೆಗೆ ಚಲಿಸಬಹುದಾಗಿದೆ. ಹಾಗೆಯೇ ಗಂಟೆಗೆ ಗರಿಷ್ಠ 30 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಸುಜುಕಿ ಎಕ್ಸ್ ಟ್ರಿಗರ್ 2017ನೇ ಸಾಲಿನಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪಲಿದೆ. ಆದರೆ ನಿಕಟ ಭವಿಷ್ಯದಲ್ಲಂತೂ ಭಾರತವನ್ನು ಪ್ರವೇಶಿಸುವ ಯಾವುದೇ ನಿರೀಕ್ಷೆಯನ್ನಿಟ್ಟುಕೊಳ್ಳಬೇಡಿರಿ.


Click it and Unblock the Notifications








