ಸುಜುಕಿ ಕ್ರೀಡಾ ಬೈಕ್ ಜಿಎಸ್ಎಕ್ಸ್ 250ಆರ್ ಅನಾವರಣ

ಸುಜುಕಿ ಜಿಎಸ್‌ಎಕ್ಸ್ 250ಆರ್ ಕ್ರೀಡಾ ಬೈಕ್ ಭಾರತಕ್ಕೂ ಬರುವುದೇ ಎಂಬುದು ಬಹಳಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

By Nagaraja

ಸಾಕಷ್ಟು ಊಹಾಪೋಹಗಳ ಬಳಿಕ ಚೀನಾದ ಬೀಜಿಂಗ್ ನಲ್ಲಿ ಅತಿ ನೂತನ ಸುಜುಕಿ ಜಿಎಸ್ ಎಕ್ಸ್250-ಆರ್ ಬೈಕ್ ಭರ್ಜರಿಯಾಗಿ ಅನಾವರಣಗೊಂಡಿದೆ. ನಿಕಟ ಭವಿಷ್ಯದಲ್ಲಿ ಈ ಬಹುನಿರೀಕ್ಷಿತ ಭಾರತವನ್ನು ತಲುಪಲಿದೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಸುಜುಕಿ ಜಿಎಸ್ ಎಕ್ಸ್-ಆರ್1000 ರೇಸಿಂಗ್ ಬೈಕ್ ನಿಂದ ಸ್ಪೂರ್ತಿ ಪಡೆದುಕೊಂಡು ಇದನ್ನು ರಚಿಸಲಾಗಿದೆ.

ಸುಜುಕಿ ಕ್ರೀಡಾ ಬೈಕ್ ಜಿಎಸ್ಎಕ್ಸ್ 250ಆರ್ ಅನಾವರಣ

ಸುಜುಕಿ ಜಿಎಸ್ ಎಕ್ಸ್ 250ಆರ್ ಒಂದು ಫುಲ್ ಫೇರ್ಡ್ ಬೈಕಾಗಿದ್ದು, 248 ಸಿಸಿ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು 23.3 ಎನ್ ಎಂ ತಿರುಗುಬಲದಲ್ಲಿ 24.7 ಅಶ್ವಶಕ್ತಿ ಉತ್ಪಾದಿಸುತ್ತಿದ್ದು, ಆರು ಸ್ಪೀಡ್ ಗೇರ್ ಬಾಕ್ಸ್ ಪಡೆದಿದೆ.

ಸುಜುಕಿ ಕ್ರೀಡಾ ಬೈಕ್ ಜಿಎಸ್ಎಕ್ಸ್ 250ಆರ್ ಅನಾವರಣ

ಕ್ರೀಡಾತ್ಮಕ ವಿನ್ಯಾಸ, ದೊಡ್ಡದಾದ ವಿಂಡ್ ಸ್ಕ್ರೀನ್, ರಿಯರ್ ವ್ಯೂ ಮಿರರ್, ಕ್ಲಿಪ್ ಆನ್ ಹ್ಯಾಂಡಲ್ ಬಾರ್, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ದೊಡ್ದದಾದ ಇಂಧನ ಟ್ಯಾಂಕ್, ವಿಭಜಿತ ಸೀಟು ಸೇವೆಗಳಿರಲಿದೆ.

ಸುಜುಕಿ ಕ್ರೀಡಾ ಬೈಕ್ ಜಿಎಸ್ಎಕ್ಸ್ 250ಆರ್ ಅನಾವರಣ

ಹೊಸತಾದ ಹೆಡ್ ಲೈಟ್ ಸಹ ಕೊಡಲಾಗಿದ್ದು, ಎಲ್ ಇಡಿ ಪೈಲಟ್ ಲ್ಯಾಂಪ್ ಮತ್ತು ಎಲ್ ಇಡಿ ಟೈಲ್ ಲ್ಯಾಂಪ್ ಕೂಡಾ ಇರುತ್ತದೆ.

ಸುಜುಕಿ ಕ್ರೀಡಾ ಬೈಕ್ ಜಿಎಸ್ಎಕ್ಸ್ 250ಆರ್ ಅನಾವರಣ

15 ಲೀಟರ್ ಗಳ ಶಕ್ತಿಯುತ ಇಂಧನ ಟ್ಯಾಂಕ್ ಅತ್ಯುತ್ತಮ ಸ್ವಭಾವ ನೀಡಲಿದೆ. ಮುಂದುಗಡೆ ಕನ್ವೆನ್ಷನಲ್ ಟೆಲಿಸ್ಕಾಪಿಕ್ ಸಸ್ಷೆನ್ಷನ್ ಮತ್ತು ಹಿಂದುಗಡೆ ಏಳು ವಿಧಗಳಲ್ಲಿ ಹೊಂದಾಣಿಸಬಹುದಾದ ಮೊನೊಶಾಕ್ ಸಸ್ಷೆನ್ಷನ್ ವ್ಯವಸ್ಥೆಯಿರಲಿದೆ.

ಸುಜುಕಿ ಕ್ರೀಡಾ ಬೈಕ್ ಜಿಎಸ್ಎಕ್ಸ್ 250ಆರ್ ಅನಾವರಣ

ಅಂತೆಯೇ ನಿಖರ ಬ್ರೇಕಿಂಗ್ ಗಾಗಿ ಮುಂದುಗಡೆ 290 ಎಂಎಂ ಸಿಂಗಲ್ ಪೆಡಲ್ ಡಿಸ್ಕ್ ಜೊತೆ ಟ್ವಿನ್ ಪಿಸ್ತಾನ್ ಕ್ಯಾಲಿಪರ್ ಮತ್ತು ಹಿಂದುಗಡೆ 240 ಎಂಎಂ ಪೆಡಲ್ ಡಿಸ್ಕ್ ಜೊತೆ ಸಿಂಗಲ್ ಪಿಸ್ತಾನ್ ಕ್ಯಾಲಿಪರ್ ಇರಲಿದೆ.

ಸುಜುಕಿ ಕ್ರೀಡಾ ಬೈಕ್ ಜಿಎಸ್ಎಕ್ಸ್ 250ಆರ್ ಅನಾವರಣ

2085 ಎಂಎಂ ಉದ್ದ, 740 ಎಂಎಂ ಅಗಲ ಮತ್ತು 1110 ಎಂಎಂ ಎತ್ತರವಿರಲಿದೆ. ಇದರ ಸೀಟು ಎತ್ತರ 790 ಎಂಎಂ ಆಗಿರಲಿದೆ.

ಸುಜುಕಿ ಕ್ರೀಡಾ ಬೈಕ್ ಜಿಎಸ್ಎಕ್ಸ್ 250ಆರ್ ಅನಾವರಣ

178 ಕೆ.ಜಿ ಭಾರದ ಸುಜುಕಿ ಜಿಎಸ್ಎಕ್ಸ್ 250ಆರ್ ಐಚ್ಛಿಕ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಸುರಕ್ಷಾ ವೈಶಿಷ್ಟ್ಯವನ್ನು ಪಡೆದಿದೆ.

ಸುಜುಕಿ ಕ್ರೀಡಾ ಬೈಕ್ ಜಿಎಸ್ಎಕ್ಸ್ 250ಆರ್ ಅನಾವರಣ

ಹಾಗೊಂದು ವೇಳೆ ಭಾರತಕ್ಕೆ ಪ್ರವೇಶಿಸುವುದಲ್ಲಿ ನೂತನ ಬೈಕ್ ಜಿಕ್ಸರ್ ಜಿಎಸ್‌ಎಕ್ಸ್-ಆರ್250 ಎಂಬ ಹೆಸರಿನಿಂದ ಅರಿಯಲ್ಪಡುವ ಸಾಧ್ಯತೆಯಿದೆ.

More from DriveSpark

Article Published On: Friday, October 21, 2016, 13:03 [IST]
English summary
Suzuki Unveils Its Quarter Litre Sportsbike, The GSX-250R
Read more on ಸುಜುಕಿ suzuki
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+