ಹೊಸ ಬೊನ್‌ವಿಲ್ಲೆ ಭಾರತಕ್ಕೆ; ಟ್ರಯಂಪ್ ಬುಕ್ಕಿಂಗ್ ಆರಂಭ
ಬ್ರಿಟನ್‌ನ ಅತಿ ದೊಡ್ಡ ಮೋಟಾರ್ ಸೈಕಲ್ ತಯಾರಿಕ ಸಂಸ್ಥೆ ಟ್ರಯಂಪ್ ಮುಂಬರುವ ಪ್ರತಿಷ್ಠಿತ 2016 ಆಟೋ ಎಕ್ಸ್ ಪೋದಲ್ಲಿ ಅತಿ ನೂತನ ಬೊನ್ ವಿಲ್ಲೆ ಶ್ರೇಣಿಯ ಬೈಕ್ ಗಳನ್ನು ಬಿಡುಗಡೊಳಿಸಲಿದೆ. ಇದರಂತೆ ಈ ಐಕಾನಿಕ್ ಸಂಸ್ಥೆಯು ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದೆ.
ದೇಶದಲ್ಲಿ ಸ್ಥಿತಗೊಂಡಿರುವ 12 ಎಕ್ಸ್ ಕ್ಲೂಸಿವ್ ಡೀಲರ್ ಶಿಪ್ ಗಳ ಮುಖಾಂತರ ಟ್ರಯಂಪ್ ಬೈಕ್ ಗಳು ಮಾರಾಟವಾಗಲಿದೆ. ವರದಿಗಳ ಪ್ರಕಾರ ಟ್ರಯಂಪ್ ನ ಎಲ್ಲ ಶ್ರೇಣಿಯ ಬೈಕ್ ಗಳು ವಾಹನ ಪ್ರದರ್ಶನ ಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿರಲಿದೆ.

ಹೊಸದಾಗಿ ಅಭಿವೃದ್ಧಿಪಡಿಸಲಾಗಿರುವ ಎರಡು ಹೊಸ ಎಂಜಿನ್ ಗಳು ಬೊನ್ ವಿಲ್ಲೆ ಶ್ರೇಣಿಯ ಬೈಕ್ ಗಳಲ್ಲಿ ಆಳವಡಿಸಲಾಗುವುದು. ಇದು 900 ಹಾಗೂ 1200 ಸಿಸಿ ಎಂಜಿನ್ ಗಳನ್ನು ಪಡೆಯಲಿದೆ.
ಬೊನ್ ವಿಲ್ಲೆ ಶ್ರೇಣಿಯ ಬೈಕ್ ಗಳು
- ಸ್ಟ್ರೀಟ್ ಟ್ವಿನ್,
- ಟಿ120,
- ಟಿ120 ಬ್ಲ್ಯಾಕ್,
- ಥ್ರಕ್ಸ್ಟನ್,
- ಥ್ರಕ್ಸ್ಟನ್ ಆರ್
ಈ ಪೈಕಿ ಸ್ಟ್ರೀಟ್ ಟ್ವಿನ್ ಬೈಕ್ ಗೆ 900 ಸಿಸಿ ಹಾಗೂ ಟಿ120, ಟಿ120 ಬ್ಲ್ಯಾಕ್, ಥ್ರಕ್ಸ್ಟನ್ ಹಾಗೂ ಥ್ರಕ್ಸ್ಟನ್ ಆರ್ ಬೈಕ್ ಗಳಿಗೆ 1200 ಸಿಸಿ ಎಂಜಿನ್ ಗಳು ಆಳವಡಿಕೆಯಾಗಲಿದೆ.
ಈ ಎಲ್ಲ ಐದು ಬೈಕ್ ಗಳು ನಿಕಟ ಭವಿಷ್ಯದಲ್ಲೇ ಭಾರತವನ್ನು ತಲುಪುವ ಸಾಧ್ಯತೆಯಿದೆ. ಮೊದಲ ಹಂತವಾಗಿ ಸ್ಟ್ರೀಟ್ ಟ್ವಿನ್, ಟಿ120 ಹಾಗೂ ಥ್ರಕ್ಸ್ಟನ್ ಪ್ರವೇಶ ಪಡೆಯಲಿದೆ ಎಂದು ಆಟೋ ವಲಯಗಳು ತಿಳಿಸಿವೆ.


Click it and Unblock the Notifications








