ಅಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿವೆ ಎಪ್ರಿಲಿಯಾ ವಿನೂತನ ಬೈಕ್‌ಗಳು

Written By:

ಇಟಾಲಿಯನ್ ಮೂಲದ ಎಪ್ರಿಲಿಯಾ ಸಂಸ್ಥೆಯ ಬಹುನೀರಿಕ್ಷಿತ ಶಿವರ್ 900 ಮತ್ತು ಡೊರ್ಸೊಡ್ಯುರೊ 900 ಬಿಡುಗಡೆಗೆ ಸಜ್ಜುಗೊಂಡಿದ್ದು, ಹೊಸ ಬೈಕ್ ವಿಶೇಷ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿವೆ.

To Follow DriveSpark On Facebook, Click The Like Button
ಅಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿವೆ ಎಪ್ರಿಲಿಯಾ ವಿನೂತನ ಬೈಕ್‌ಗಳು

ಅಗಸ್ಟ್ ಅಂತ್ಯಕ್ಕೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಶಿವರ್ 900 ಮತ್ತು ಡೊರ್ಸೊಡ್ಯುರೊ 900 ಬೈಕ್ ಮಾದರಿಗಳು ಹೊಸ ಭರವಸೆಯ ನೀರಿಕ್ಷೆಯಲ್ಲಿವೆ.

ಅಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿವೆ ಎಪ್ರಿಲಿಯಾ ವಿನೂತನ ಬೈಕ್‌ಗಳು

ಶಿವರ್ 900 ಮತ್ತು ಡೊರ್ಸೊಡ್ಯುರೊ 900 ಬೈಕ್ ಮಾದರಿಗಳು ವಿಭಿನ್ನ ವಿನ್ಯಾಸಗಳನ್ನು ಹೊಂದಿದ್ದು, ಡೊರ್ಸೊಡ್ಯುರೊ ಬೈಕ್ ಮಾದರಿಯೂ ಸಾಹಸಿ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ.

ಅಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿವೆ ಎಪ್ರಿಲಿಯಾ ವಿನೂತನ ಬೈಕ್‌ಗಳು

ಎಂಜಿನ್ ಸಾಮರ್ಥ್ಯ

ಈ ಹಿಂದೆ ಭಾರತೀಯ ಮಾರುಕಟ್ಟೆ ಬಿಡುಗಡೆಯಾಗಿದ್ದ ಡೊರ್ಸೊಡ್ಯುರೊ 900 ಬೈಕ್, 1200 ಸಿಸಿ ಸಾಮರ್ಥ್ಯ ಹೊಂದಿತ್ತು. ಆದ್ರೆ ಇದೀಗ ಸಿಸಿ ಸಾಮರ್ಥ್ಯ ಕಡಿಮೆ ಮಾಡಲಾಗಿದ್ದು, ಎರಡು ಮಾದರಿಗಳನ್ನು 700 ಸಿಸಿ ಸಾಮರ್ಥ್ಯದೊಂದಿದೆ ಅಭಿವೃದ್ಧಿ ಪಡಿಸಲಾಗಿದೆ.

ಅಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿವೆ ಎಪ್ರಿಲಿಯಾ ವಿನೂತನ ಬೈಕ್‌ಗಳು

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಡೊರ್ಸೊಡ್ಯುರೊ 900 ಬೈಕ್ ಮಾದರಿ ದುಬಾರಿ ಎನ್ನಿಸಿದರು ಮಾರಾಟದಲ್ಲಿ ಭಾರೀ ಪ್ರಮಾಣ ದಾಖಲೆ ಕಂಡಿತ್ತು.

ಅಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿವೆ ಎಪ್ರಿಲಿಯಾ ವಿನೂತನ ಬೈಕ್‌ಗಳು

ಇದೀಗ ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಸುಧಾರಿತ ಡೊರ್ಸೊಡ್ಯುರೊ 900 ಮತ್ತು ವಿನೂತನ ಶಿವರ್ 900 ಬೈಕ್ ಬಿಡುಗಡೆಯಾಗುತ್ತಿವೆ.

ಅಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿವೆ ಎಪ್ರಿಲಿಯಾ ವಿನೂತನ ಬೈಕ್‌ಗಳು

ಹೊಸ ಮಾದರಿಗಳಲ್ಲಿ ಎಬಿಎಸ್ ತಂತ್ರಜ್ಞಾನ ಅಳವಡಿಕೆ ಇದ್ದು, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಅಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿವೆ ಎಪ್ರಿಲಿಯಾ ವಿನೂತನ ಬೈಕ್‌ಗಳು

ಇನ್ನು ಈ ಮಾದರಿಗಳನ್ನು ಇಟಾಲಿಯನ್ ಮಾರುಕಟ್ಟೆಯಿಂದಲೇ ಆಮದು ಮಾಡಿಕೊಳ್ಳಲಾಗುತ್ತಿದ್ದು, ಪ್ರಸ್ತುತ ದುಕಾಟಿ ಸಂಸ್ಥೆಯ ಮೋನಾಸ್ಟರ್ 821 ಮತ್ತು ಹೈಪರ್‌ಮೋಟಾರ್ಡ್ 939 ಮಾದರಿಗಳಿಗೆ ತೀವ್ರ ಸ್ವರ್ಧೆ ಒಡಲಿವೆ.

ಅಗಸ್ಟ್ ಅಂತ್ಯಕ್ಕೆ ಬಿಡುಗಡೆಯಾಗಲಿವೆ ಎಪ್ರಿಲಿಯಾ ವಿನೂತನ ಬೈಕ್‌ಗಳು

ಬೆಲೆಗಳು

ಸುಧಾರಿತ ತಂತ್ರಜ್ಞಾನ ವ್ಯವಸ್ಥೆ ಹೊಂದಿರುವ ಹಿನ್ನೆಲೆ ಬೆಲೆಗಳು ದುಬಾರಿ ಎನ್ನಿಸಲಿದ್ದು, ಶಿವರ್ 900 ಮತ್ತು ಡೊರ್ಸೊಡ್ಯುರೊ 900 ಕ್ರಮವಾಗಿ ರೂ.13 ಲಕ್ಷ ಹಾಗೂ ರೂ.14 ಲಕ್ಷಕ್ಕೆ(ದೆಹಲಿ ಎಕ್ಸ್‌ಶೋರಂ) ಲಭ್ಯವಿರಲಿವೆ.

English summary
Italian motorcycle manufacturer Aprilia will be launching two motorcycles in the Indian market.
Story first published: Tuesday, May 9, 2017, 16:49 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark