ಇದೀಗ ವಿವಿಧ ಬಣ್ಣದಲ್ಲಿ ಲಭ್ಯ ಬಜಾಜ್ ಡೋಮಿನಾರ್ 400 ಬೈಕ್

Written By:

ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುವ ಬಜಾಜ್ ಡೋಮಿನಾರ್ 400 ಬೈಕ್, ಇದೀಗ ಮತ್ತೊಂದು ಪ್ರಮಖ ಬಣ್ಣದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

To Follow DriveSpark On Facebook, Click The Like Button
ಇದೀಗ ವಿವಿಧ ಬಣ್ಣದಲ್ಲಿ ಲಭ್ಯ ಬಜಾಜ್ ಡೋಮಿನಾರ್ 400 ಬೈಕ್

373 ಸಿಸಿ ಸಿಂಗಲ್ ಸಿಲಿಂಡರ್ ಸೌಲಭ್ಯ ಹೊಂದಿರುವ ಬಜಾಜ್ ಡೋಮಿನಾರ್ 400, ಇದೀಗ ಮ್ಯಾಟೆ ಬ್ಲ್ಯಾಕ್ ಶೆಡ್ ಹೊಂದಿರುವ ಹೊಸ ಬೈಕ್ ಮಾದರಿಯೂ ಖರೀದಿಗೆ ಲಭ್ಯವಾಗಿದೆ.

ಇದೀಗ ವಿವಿಧ ಬಣ್ಣದಲ್ಲಿ ಲಭ್ಯ ಬಜಾಜ್ ಡೋಮಿನಾರ್ 400 ಬೈಕ್

ಈಗಾಗಲೇ ಬಜಾಜ್ ಶೋರಂಗಳಲ್ಲಿ ಮ್ಯಾಟೆ ಬ್ಲ್ಯಾಕ್ ಶೆಡ್ ಹೊಂದಿರುವ ಡೋಮಿನಾರ್ 400 ಲಭ್ಯವಿದ್ದು, ಸದ್ಯದಲ್ಲೇ ಹೊಸ ವಿನ್ಯಾಸ ಬೈಕ್ ಮಾರಾಟಕ್ಕೆ ಲಭ್ಯವಾಗಲಿದೆ.

ಇದೀಗ ವಿವಿಧ ಬಣ್ಣದಲ್ಲಿ ಲಭ್ಯ ಬಜಾಜ್ ಡೋಮಿನಾರ್ 400 ಬೈಕ್

ಅತ್ಯುತ್ತಮ ಕಾರ್ಯಕ್ಷಮತೆ ಹಿನ್ನೆಲೆ ಡೋಮಿನಾರ್ 400 ಮಾರಾಟ ಏರಿಕೆಯಾಗುತ್ತಿದ್ದು, ಪ್ರತಿ ತಿಂಗಳು ದೇಶಾದ್ಯಂತ 3500 ಬೈಕ್‌ಗಳು ಮಾರಾಟಗೊಳ್ಳುತ್ತಿವೆ. ಈ ಹಿನ್ನೆಲೆ ಬ್ಲ್ಯಾಕ್ ಶೆಡ್ ಬೈಕ್ ಮಾದರಿಗಳಿಗೂ ಭಾರೀ ಬೇಡಿಕೆ ಸೃಷ್ಠಿಯಾಗಿದೆ.

ಇದೀಗ ವಿವಿಧ ಬಣ್ಣದಲ್ಲಿ ಲಭ್ಯ ಬಜಾಜ್ ಡೋಮಿನಾರ್ 400 ಬೈಕ್

ಸದ್ಯ ಡೋಮಿನಾರ್ 400 ಬೈಕ್ ಆವೃತ್ತಿಯೂ ಮಿಡ್‌ನೈಟ್ ಬ್ಲ್ಯೂ, ಲೈಟ್ ಪ್ಲಮ್ ಮತ್ತು ಮೂನ್ ಲೈಟ್ ಬಣ್ಣಗಳಲ್ಲಿ ಲಭ್ಯವಿದ್ದು, ಇದೀಗ ಮ್ಯಾಟೆ ಬ್ಲ್ಯಾಕ್ ಶೆಡ್ ಬಣ್ಣವನ್ನು ಪಡೆದುಕೊಂಡಿದೆ.

ಇದೀಗ ವಿವಿಧ ಬಣ್ಣದಲ್ಲಿ ಲಭ್ಯ ಬಜಾಜ್ ಡೋಮಿನಾರ್ 400 ಬೈಕ್

ಕೆಲವು ವರದಿಗಳ ಪ್ರಕಾರ ಮುಂದಿನ 2-3 ದಿನಗಳಲ್ಲಿ ಡೋಮಿನಾರ್ 400 ಬ್ಲ್ಯಾಕ್ ಶೆಡ್ ಬೈಕ್ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಾಗಲಿದ್ದು, ಹೊಸ ಬಣ್ಣದ ಬೈಕ್ ಬಜಾಜ್ ಪ್ರಿಯರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

Read more on ಬಜಾಜ್ bajaj
English summary
Read in Kannada about Bajaj Dominar 400 now available in Matte Black color.
Story first published: Thursday, June 29, 2017, 11:13 [IST]
Please Wait while comments are loading...

Latest Photos