ಜಿಎಸ್‌ಟಿ ಜಾರಿ ನಂತರ ಡುಕಾಟಿ ಬೆಲೆಗಳಲ್ಲಿ ಭಾರೀ ಏರಿಕೆ

ಜುಲೈ 1ರಿಂದ ಜಾರಿಯಾದ ಜಿಎಸ್‌ಟಿಯಿಂದಾಗಿ ದುಬಾರಿಯ ಬೆಲೆಯ ಡುಕಾಟಿ ಸೂಪರ್ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಕೆಯಾಗಿದ್ದು, ಇಂದಿನಿಂದಲೇ ಹೊಸ ದರಗಳು ಅನ್ವಯವಾಗುವಂತೆ ಹೊಸ ದರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.

By Praveen

ಡುಕಾಟಿ ಉತ್ಪಾದನೆಯ ಪ್ರಮುಖ ಬೈಕ್ ಮಾದರಿಯಾದ ಎಕ್ಸ್ ಡಯಾವೆಲ್ ಮೇಲೆ ರೂ.18 ಸಾವಿರ ಏರಿಕೆಯಾಗಿದ್ದು, ಸದ್ಯ ಎಕ್ಸ್ ಡಯಾವೆಲ್ ಬೆಲೆಯೂ ರೂ.19.93 ಲಕ್ಷ ತಲುಪಿದೆ. ಅಂತೆಯೇ ಡುಕಾಟಿ 959 ಪ್ಯಾನಿಗಾಲೆ ಬೈಕ್ ಬೆಲೆಯಲ್ಲಿ ಅಲ್ಪ ಪ್ರಮಾಣದ ಬೆಲೆ ಕಡಿತ ಮಾಡಲಾಗಿದ್ದು, ಸದ್ಯದ ದರ ರೂ.14.58 ಲಕ್ಷಕ್ಕೆ ಲಭ್ಯವಾಗಲಿದೆ.

ಜಿಎಸ್‌ಟಿ ಜಾರಿ ನಂತರ ಡುಕಾಟಿ ಬೆಲೆಗಳಲ್ಲಿ ಭಾರೀ ಏರಿಕೆ

ಡುಕಾಟಿ ಮೋನಾಸ್ಟರ್ 1200ಎಸ್ ಮಾದರಿಯ ಬೆಲೆಯಲ್ಲಿ ಅತಿ ಹೆಚ್ಚು ಏರಿಕೆಯಾಗಿದ್ದು, ರೂ.78 ಸಾವಿರ ಏರಿಕೆಯಿಂದಾಗಿ ಸದ್ಯದ ಬೆಲೆ ರೂ.28 ಲಕ್ಷಕ್ಕೆ ತಲುಪಿದೆ. ಅಂತೆಯೇ ಸ್ಟ್ಯಾಂಡರ್ಡ್ ಮೋನಾಸ್ಟರ್ 1200 ಮಾದರಿಯ ಬೆಲೆ ರೂ.68 ಸಾವಿರ ಏರಿಕೆಯಿಂದ ಸದ್ಯದ ಬೆಲೆ ರೂ.23.02 ಲಕ್ಷಕ್ಕೆ ಏರಿಕೆಯಾಗಿದೆ.

ಜಿಎಸ್‌ಟಿ ಜಾರಿ ನಂತರ ಡುಕಾಟಿ ಬೆಲೆಗಳಲ್ಲಿ ಭಾರೀ ಏರಿಕೆ

ಇನ್ನೊಂದು ಪ್ರಮುಖ ವಿಚಾರವೆಂದರೇ ಡುಕಾಟಿ ಆರಂಭಿಕ ಬೈಕ್ ಆವೃತ್ತಿಗಳ ಬೆಲೆಯೂ ಕೂಡಾ ಏರಿಕೆಯಾಗಿದ್ದು, ಸೂಪರ್ ಬೈಕ್ ಪ್ರಿಯರಿಗೆ ಜಿಎಸ್‌ಟಿ ಬೆಲೆಗಳು ಶಾಕ್ ನೀಡವುದರಲ್ಲಿ ಯಾವುದೇ ಸಂದೇಹವಿಲ್ಲ.

ಜಿಎಸ್‌ಟಿ ಜಾರಿ ನಂತರ ಡುಕಾಟಿ ಬೆಲೆಗಳಲ್ಲಿ ಭಾರೀ ಏರಿಕೆ

ಡುಕಾಟಿ ಬೈಕ್‌ಗಳ ಹೊಸ ದರಗಳು

ಮೋನಾಸ್ಟರ್ 797 ರೂ. 7.77 ಲಕ್ಷ ರೂ. 8.05 ಲಕ್ಷ ರೂ. 28,000
ಸ್ಕ್ಯಾಂಬಲರ್ ಐಕಾನ್ ರೆಡ್ ರೂ. 6.97 ಲಕ್ಷ ರೂ.7.23 ಲಕ್ಷ ರೂ. 26,000
ಸ್ಕ್ಯಾಂಬಲರ್ ಐಕಾನ್ ಯಲ್ಲೊ ರೂ. 7.07 ಲಕ್ಷ ರೂ. 7.33 ಲಕ್ಷ ರೂ. 26,000
ಸ್ಕ್ಯಾಂಬಲರ್ ಕ್ಲಾಸಿಕ್ ರೂ. 8.18 ಲಕ್ಷ ರೂ. 8.48 ಲಕ್ಷ ರೂ. 30,000
ಮೋನಾಸ್ಟರ್ 1200ಎಸ್ ರೂ. 27.34 ಲಕ್ಷ ರೂ. 28.12 ಲಕ್ಷ ರೂ. 78,000
ಮೋನಾಸ್ಟರ್ 1200 ರೂ. 22.34 ಲಕ್ಷ ರೂ. 23.02 ಲಕ್ಷ ರೂ. 68,000
ಮಲ್ಟಿಸ್ಟಾರ್ಡ್ 950 ರೂ. 12.60 ಲಕ್ಷ ರೂ. 12.82 ಲಕ್ಷ ರೂ. 22,000
ಮಲ್ಟಿಸ್ಟಾರ್ಡ್ 1200 ರೂ. 14.85 ಲಕ್ಷ ರೂ. 15.38 ಲಕ್ಷ ರೂ. 53,000
ಮಲ್ಟಿಸ್ಟಾರ್ಡ್ 1200 ಎಸ್ ರೂ. 16.91 ಲಕ್ಷ ರೂ. 17.51 ಲಕ್ಷ ರೂ. 60,000
ಮಲ್ಟಿಸ್ಟಾರ್ಡ್ ಎನ್‌ಡ್ಯೂರ್ ರೂ. 17.44 ಲಕ್ಷ ರೂ. 18.05 ಲಕ್ಷ ರೂ. 61,000

ಜಿಎಸ್‌ಟಿ ಜಾರಿ ನಂತರ ಡುಕಾಟಿ ಬೆಲೆಗಳಲ್ಲಿ ಭಾರೀ ಏರಿಕೆ

ಇದೀಗ ಜಿಎಸ್‌ಟಿ ಜಾರಿಗೊಂಡ ಹಿನ್ನೆಲೆ ಡುಕಾಟಿ ಬೆಲೆಗಳು ಏರಿಕೆಯಾಗಿದ್ದು, ಹೊಸ ನೀತಿಯ ಪ್ರಕಾರ 350 ಸಿಸಿ ಮೇಲ್ಪಟ್ಟ ಐಷಾರಾಮಿ ಬೈಕ್ ಉತ್ಪಾದನೆ ಮತ್ತು ಮಾರಾಟ ಮೇಲಿನ ತೆರಿಗೆಗಳನ್ನು ಏರಿಕೆ ಮಾಡಿದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.

Most Read Articles

Kannada
English summary
Read in Kannada about Ducati India Announces Prices After GST.
Story first published: Wednesday, July 19, 2017, 19:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X