ಎಕ್ಸ್‌ಕ್ಲೂಸಿವ್-2018 ಹೋಂಡಾ ಸಿಬಿಆರ್ 1000ಆರ್‌ಆರ್ ಮತ್ತು ಗೋಲ್ಡ್ ವಿಂಗ್ ಬಿಡುಗಡೆಗೆ ದಿನಗಣನೆ

ಹೋಂಡಾ ನಿರ್ಮಾಣದ ಐಷಾರಾಮಿ ಬೈಕ್ ಮಾದರಿಗಳಾದ 2018ರ ಸಿಬಿಆರ್ 1000ಆರ್‌ಆರ್ ಫೈರ್ ಬ್ಲೇಡ್ ಮತ್ತು 2018ರ ಗೋಲ್ಡ್ ವಿಂಗ್ ಬಿಡುಗಡೆಗೆ ಸಿದ್ಧಗೊಂಡಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡುವ ಬಗ್ಗೆ ಸುಳಿವು ನೀಡಿವೆ.

By Praveen

ಹೋಂಡಾ ನಿರ್ಮಾಣದ ಐಷಾರಾಮಿ ಬೈಕ್ ಮಾದರಿಗಳಾದ 2018ರ ಸಿಬಿಆರ್ 1000ಆರ್‌ಆರ್ ಫೈರ್ ಬ್ಲೇಡ್ ಮತ್ತು 2018ರ ಗೋಲ್ಡ್ ವಿಂಗ್ ಬಿಡುಗಡೆಗೆ ಸಿದ್ಧಗೊಂಡಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡುವ ಬಗ್ಗೆ ಸುಳಿವು ನೀಡಿವೆ.

ಹೋಂಡಾ ಸಿಬಿಆರ್ 1000ಆರ್‌ಆರ್ ಮತ್ತು ಗೋಲ್ಡ್ ವಿಂಗ್ ಬಿಡುಗಡೆಗೆ ಸಜ್ಜು

2017ರ ಕೊನೆಯಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಯಾಗರುವ 2018ರ ಸಿಬಿಆರ್ 1000ಆರ್‌ಆರ್ ಫೈರ್ ಬ್ಲೇಡ್ ಮತ್ತು 2018ರ ಗೋಲ್ಡ್ ವಿಂಗ್, 2018ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಗ್ರಾಹಕರ ಕೈ ಸೇರುವ ತವಕದಲ್ಲಿವೆ.

ಹೋಂಡಾ ಸಿಬಿಆರ್ 1000ಆರ್‌ಆರ್ ಮತ್ತು ಗೋಲ್ಡ್ ವಿಂಗ್ ಬಿಡುಗಡೆಗೆ ಸಜ್ಜು

2018ರ ಸಿಬಿಆರ್ 1000ಆರ್‌ಆರ್ ಫೈರ್ ಬ್ಲೇಡ್ ಮತ್ತು 2018ರ ಗೋಲ್ಡ್ ವಿಂಗ್ ಮಾದರಿಗಳ ಭಾರೀ ನೀರಿಕ್ಷೆ ಇಟ್ಟುಕೊಂಡಿರುವ ಹೋಂಡಾ ಸಂಸ್ಥೆಯು ಎರಡು ಮಾದರಿಗಳನ್ನು ಸುಧಾರಿತ ತಂತ್ರಜ್ಞಾನಗಳ ಜೊತೆ ಜೊತೆಗೆ ಕ್ರಿಮ್ ಲೆಯರ್ ಅಭಿವೃದ್ದಿ ಹೊಂದಿವೆ.

ಹೋಂಡಾ ಸಿಬಿಆರ್ 1000ಆರ್‌ಆರ್ ಮತ್ತು ಗೋಲ್ಡ್ ವಿಂಗ್ ಬಿಡುಗಡೆಗೆ ಸಜ್ಜು

ಹಾರ್ಲೇ ಡೇವಿಡ್‌ಸನ್ ಸಿವಿಒ ಲಿಮಿಟೆಡ್ ಮತ್ತು ಇಂಡಿಯನ್ ರೋಡ್ ಮಾಸ್ಟರ್ ಬೈಕ್ ಪ್ರತಿಸ್ಪರ್ಧಿಯಾಗಿ 2018ರ ಹೋಂಡಾ ಗೋಲ್ಡ್ ವಿಂಗ್ ಸಿದ್ಧಗೊಂಡಿದ್ದು, 1,832 ಸಿಸಿ ಫ್ಯಾಟ್ ಸಿಕ್ಸ್ ಸಿಲಿಂಡರ್ ಎಂಜಿನ್‌ ವ್ಯವಸ್ಥೆ ಪಡೆದುಕೊಂಡಿವೆ.

ಹೋಂಡಾ ಸಿಬಿಆರ್ 1000ಆರ್‌ಆರ್ ಮತ್ತು ಗೋಲ್ಡ್ ವಿಂಗ್ ಬಿಡುಗಡೆಗೆ ಸಜ್ಜು

ಇದರ ಜೊತೆ 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದ್ದು, 117ಬಿಎಚ್‌ಪಿ ಮತ್ತು 167ಎಂಎನ್ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ. ಅದಲ್ಲದೇ ಬಲಿಷ್ಠ ಹೊರ ನೋಟವನ್ನು ಹೊಂದಿರುವ 2018ರ ಗೋಲ್ಡ್ ವಿಂಗ್ ಬರೋಬ್ಬರಿ 362 ಕೆಜಿ ಭಾರ ಹೊಂದಿದೆ.

ಹೋಂಡಾ ಸಿಬಿಆರ್ 1000ಆರ್‌ಆರ್ ಮತ್ತು ಗೋಲ್ಡ್ ವಿಂಗ್ ಬಿಡುಗಡೆಗೆ ಸಜ್ಜು

ಆಪ್ ರೋಡಿಂಗ್ ಹಾಗೂ ಕ್ಲಾಸಿಕಲ್ ರೈಡಿಂಗ್‌ಗೆ ಅನುಕೂಲಕರವಾಗುವಂತೆ ವಿಶೇಷ ಸೀಟುಗಳ ಅಳವಡಿಯಿದ್ದು, ನೆವಿಗೆಷನ್ ಸೇರಿದಂತೆ ಹತ್ತಾರು ಬಗೆಯ ಮುಂದುವರಿದ ತಂತ್ರಜ್ಞಾನಗಳ ವ್ಯವಸ್ಥೆಯನ್ನು ಹೊಸ ಬೈಕ್‌ನಲ್ಲಿ ಇರಿಸಲಾಗಿದೆ.

ಹೋಂಡಾ ಸಿಬಿಆರ್ 1000ಆರ್‌ಆರ್ ಮತ್ತು ಗೋಲ್ಡ್ ವಿಂಗ್ ಬಿಡುಗಡೆಗೆ ಸಜ್ಜು

ಇನ್ನು 2018ರ ಸಿಬಿಆರ್ 1000ಆರ್‌ಆರ್ ಫೈರ್ ಬ್ಲೇಡ್ ಕೂಡಾ ಅತ್ಯುತ್ತಮ ಹೊರ ವಿನ್ಯಾಸಗಳನ್ನು ಪಡೆದುಕೊಳ್ಳುವ ಮೂಲಕ ಮೋಟಾರ್ ಸ್ಪೋಟ್ಸ್ ವಿಭಾಗದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ್ದು, 1000ಸಿಸಿ ಎಂಜಿನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಹೋಂಡಾ ಸಿಬಿಆರ್ 1000ಆರ್‌ಆರ್ ಮತ್ತು ಗೋಲ್ಡ್ ವಿಂಗ್ ಬಿಡುಗಡೆಗೆ ಸಜ್ಜು

ಹಿಂದಿನ ಮಾದರಿಗಿಂತ ಗರಿಷ್ಠ ಮಟ್ಟದ 200-ಬಿಎಚ್‌ಪಿ ಉತ್ಪಾದನಾ ಶಕ್ತಿ ಹೊಂದಿರುವ 2018ರ ಸಿಬಿಆರ್ 1000ಆರ್‌ಆರ್ ಫೈರ್ ಬ್ಲೇಡ್, 9.1 ಎಂಪಿ ಎಬಿಎಸ್ ತಂತ್ರಜ್ಞಾನವನ್ನ ಪಡೆದುಕೊಂಡಿದೆ.

ಹೋಂಡಾ ಸಿಬಿಆರ್ 1000ಆರ್‌ಆರ್ ಮತ್ತು ಗೋಲ್ಡ್ ವಿಂಗ್ ಬಿಡುಗಡೆಗೆ ಸಜ್ಜು

ಐಎಂಯು, ಟ್ರಾನಷನ್ ಕಂಟ್ರೋಲರ್, ಸೆಮಿ ಆ್ಯಂಟಿ ಸಸ್ಪೆಷನ್ ಸೇರಿದಂತೆ ಇಸಿ ಸೆಮಿ ಆಕ್ಟಿವ್ ಸಸ್ಫೆಷನ್ ತಂತ್ರಜ್ಞಾನಗಳು 2018ರ ಸಿಬಿಆರ್ 1000ಆರ್‌ಆರ್ ಫೈರ್ ಬ್ಲೇಡ್ ಮತ್ತು 2018ರ ಗೋಲ್ಡ್ ವಿಂಗ್‌ನಲ್ಲಿ ಲಭ್ಯವಿವೆ.

ಹೋಂಡಾ ಸಿಬಿಆರ್ 1000ಆರ್‌ಆರ್ ಮತ್ತು ಗೋಲ್ಡ್ ವಿಂಗ್ ಬಿಡುಗಡೆಗೆ ಸಜ್ಜು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಐಷಾರಾಮಿ ಮತ್ತು ಮೋಟಾರ್ ಸ್ಪೋರ್ಟ್ಸ್ ವಿಭಾಗದಲ್ಲಿ 2018ರ ಸಿಬಿಆರ್ 1000ಆರ್‌ಆರ್ ಫೈರ್ ಬ್ಲೇಡ್ ಮತ್ತು 2018ರ ಗೋಲ್ಡ್ ವಿಂಗ್ ವಿಶೇಷ ಬೇಡಿಕೆಯನ್ನು ಹೊಂದಿದ್ದು, ಇದೀಗ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ.

Most Read Articles

Kannada
Read more on ಹೋಂಡಾ honda
English summary
Read in Kannada about 2018 Honda CBR 1000RR and 2018 Honda Goldwing Launch Dates Revealed.
Story first published: Saturday, July 29, 2017, 19:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X