ಮೋಟಾರ್‌ಸೈಕಲ್‌ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ ಹಾರ್ಲೆ ಡೇವಿಡ್ಸನ್

Written By:

ಭಾರತದ ಐಷಾರಾಮಿ ಮೋಟಾರ್ ಸೈಕಲ್ ತಯಾರಕ ಸಂಸ್ಥೆಯಾಗಿರುವ ಹಾರ್ಲೆ ಡೇವಿಡ್ಸನ್ ತನ್ನ ಎರಡು ಉತ್ಪನ್ನಗಳ ಬೆಲೆಗಳನ್ನು ಕಡಿತಗೊಳಿಸಿದೆ. ಈ ಆಫರ್ ಬಗ್ಗೆ ಇಲ್ಲಿದೆ ಎಕ್ಸ್‌ಕ್ಲ್ಯೂಸಿವ್ ಸುದ್ದಿ.

ಮೋಟಾರ್‌ಸೈಕಲ್‌ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ ಹಾರ್ಲೆ ಡೇವಿಡ್ಸನ್

ಸದ್ಯದರಲ್ಲಿಯೇ ಹಾರ್ಲೆ ಡೇವಿಡ್ಸನ್ ಕಂಪನಿಯು ವಿನೂತನ ತಂತ್ರಜ್ಞಾನ ಪಡೆದ ಫ್ಯಾಟ್ ಬಾಯ್ ಮತ್ತು ಹೆರಿಟೇಜ್ ಸಾಫ್ಟೈಲ್ 2018 ಕ್ಲಾಸಿಕ್ ಮಾದರಿಗಳನ್ನು ಭಾರತೀಯ ಮಾರುಕಟ್ಟೆಗೆ ಭರ್ಜರಿಯಾಗಿ ಬಿಡುಗಡೆಗೊಳಿಸಲು ಮುಂದಾಗಿದ್ದು, ಈ ನಿಮ್ಮಿತ ತನ್ನ ಶ್ರೇಣಿಯ ಬೈಕ್‌ಗಳ ಮೇಲೆ ಭಾರಿ ಬೆಲೆ ಕಡಿತ ಘೋಷಣೆ ಮಾಡಿದೆ.

ಮೋಟಾರ್‌ಸೈಕಲ್‌ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ ಹಾರ್ಲೆ ಡೇವಿಡ್ಸನ್

ಅಮೆರಿಕದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾಗಿರುವ ಹಾರ್ಲೆ ಡೇವಿಡ್ಸನ್, ದೇಶದಲ್ಲಿರುವ ತನ್ನ ಜನಪ್ರಿಯ ಮೋಟರ್ ಸೈಕಲ್‌ಗಳ ಬೆಲೆಗಳ ಮೇಲೆ ಎರಡು ಲಕ್ಷ ರೂ.ಗಳವರೆಗೆ ಆಫರ್‌ ನೀಡಿದೆ.

ಮೋಟಾರ್‌ಸೈಕಲ್‌ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ ಹಾರ್ಲೆ ಡೇವಿಡ್ಸನ್

ಪ್ರಮುಖವಾಗಿಯೂ 2017 ಫಾಟ್ ಬಾಯ್ ಮತ್ತು ಹೆರಿಟೇಜ್ ಸಾಫ್ಟೈಲ್ ಕ್ಲಾಸಿಕ್ ಮಾದರಿಗಳಿಗೆ ಬೆಲೆ ಕಡಿತ ಘೋಷಿಸಲಾಗಿದೆ. ಈ ಮೂಲಕ ಸ್ಟೋಕ್ ಕ್ಲಿಯರ್ ಮಾಡುವ ಉದ್ದೇಶ ಹೊಂದಿದೆ ಎನ್ನಲಾಗಿದೆ.

ಮೋಟಾರ್‌ಸೈಕಲ್‌ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ ಹಾರ್ಲೆ ಡೇವಿಡ್ಸನ್

ಈ ಎರಡು ಬೈಕ್‌ಗಳ ಮೇಲೆ ವಿಶೇಷ ಇಎಂಐ ಸೌಲಭ್ಯವನ್ನೂ ಸಹ ಹಾರ್ಲೆ ಡೇವಿಡ್ಸನ್ ಘೋಷಣೆ ಮಾಡಿದ್ದು, ಇದರಂತೆ ಫಾಟ್ ಬಾಯ್‌ಗೆ ಪ್ರತಿ ಮಾಸಿಕ 14,999 ರೂ. ಮತ್ತು ಹೆರಿಟೇಜ್ ಸಾಫ್ಟೈಲ್ ಕ್ಲಾಸಿಕ್ ಮಾಸಿಕ 15,999 ರೂ.ಗಳಿಗೆ ನೀಡಲಾಗುತ್ತದೆ.

ಮೋಟಾರ್‌ಸೈಕಲ್‌ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ ಹಾರ್ಲೆ ಡೇವಿಡ್ಸನ್

ಈ ಮೊದಲು, ಹಾರ್ಲೆ ಡೇವಿಡ್ಸನ್ ಫಾಟ್ ಬಾಯ್ ಮಾದರಿ ರೂ.17,01,000 ಲಕ್ಷ ದೆಹಲಿ ಎಕ್ಸ್ ಷೋರೂಂ ಬೆಲೆ ಇದ್ದು, 2017 ಹಾರ್ಲೆ ಡೇವಿಡ್ಸನ್ ಫಾಟ್ ಬಾಯ್ ಬೈಕ್ ಇದೀಗ ರೂ. 14,99,990 ರೂ.ಗಳಿಗೆ ಖರೀದಿಸಬಹುದಾಗಿದೆ. ಈ ಮೋಟಾರ್ ಸೈಕಲ್ 1690 ಸಿಸಿ ಟ್ವಿನ್ ಕ್ಯಾಮ್ 103ಬಿ ವಿಟ್ವಿನ್ ಏರ್‌ಕೂಲ್ಡ್ ಎಂಜಿನ್‌ ಆಯ್ಕೆ ಹೊಂದಿದ್ದು, 125 ಎನ್‌ಎಂ(3500rpm) ತಿರುಗುಬಲ ಉತ್ಪಾದಿಸಲಿದೆ.

ಮೋಟಾರ್‌ಸೈಕಲ್‌ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ ಹಾರ್ಲೆ ಡೇವಿಡ್ಸನ್

ಇನ್ನು ಹೆರಿಟೇಜ್ ಸಾಫ್ಟೈಲ್ ಕ್ಲಾಸಿಕ್ ಮಾದರಿಯ ಬಗ್ಗೆ ಹೇಳುವುದಾದರೆ, ದೆಹಲಿ ಎಕ್ಸ್ ಶೋ ರೂಂ ಪ್ರಕಾರ 18,50,000 ರೂ.ಗಳಷ್ಟು ಬೆಲೆ ಬಾಳುವ 2017 ಹೆರಿಟೇಜ್ ಸಾಫ್ಟೈಲ್ ಕ್ಲಾಸಿಕ್ 15,99,990 ರೂ.ಗಳಿಗೆ ಲಭ್ಯವಾಗಲಿದೆ.

ಮೋಟಾರ್‌ಸೈಕಲ್‌ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ ಹಾರ್ಲೆ ಡೇವಿಡ್ಸನ್

ಇದರಲ್ಲಿರುವ 1690 ಸಿಸಿ ಟ್ವಿ ಕ್ಯಾಮ್ 103ಬಿ ಏರ್ ಕೂಲ್ಡ್ ವಿ ಟ್ವಿನ್ ಎಂಜಿನ್ 124 ಎನ್ಎಂ (2500rpm) ತಿರುಗುಬಲವನ್ನು ಉತ್ಪಾದಿಸುತ್ತದೆ.

English summary
Harley-Davidson India has slashed the prices of the Fat Boy and Heritage Softail Classic models in India. Post price reduction, the Harley-Davidson Fat Boy will now cost Rs 14,99,990 and the Heritage Softail Classic will cost Rs 15,99,990.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark