ಹಳೆಯ ಮಾದರಿಗಳ ಬದಲಾಗಿ ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಹೋಂಡಾ

Written By:

ಜಪಾನ್ ದ್ವಿಚಕ್ರ ವಾಹನ ತಯಾರಕ ಕಂಪೆನಿಯಾದ ಹೋಂಡಾ ಇತ್ತೀಚೆಗೆ ತನ್ನ ಪ್ರಮುಖ ಉತ್ಪನ್ನಗಳಾದ ಸಿಬಿಆರ್ 150 ಆರ್ ಮತ್ತು ಸಿಬಿಆರ್ 250ಆರ್ ಬೈಕುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.

ಹಳೆಯ ಮಾದರಿಗಳ ಬದಲಾಗಿ ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಹೋಂಡಾ

ಬಿಎಸ್-IV ನಿಯಮಾವಳಿಗಳಿಗನುಗುಣವಾಗಿ ಈ ಸಿಬಿಆರ್ 150 ಆರ್ ಮತ್ತು ಸಿಬಿಆರ್ 250ಆರ್ ಮೋಟಾರ್ ಸೈಕಲ್‌ಗಳನ್ನು ನವೀಕರಿಸುವ ಬದಲು, ಹೊಚ್ಚ ಹೊಸ ಮತ್ತು ಉತ್ತೇಜನಕಾರಿ ಉತ್ಪನ್ನಗಳೊಂದಿಗೆ ಈ ದ್ವಿಚಕ್ರಗಳನ್ನು ಬದಲಿಸಲು ಹೋಂಡಾ ಸಂಸ್ಥೆಯು ನಿರ್ಧರಿಸಿದೆ.

ಹಳೆಯ ಮಾದರಿಗಳ ಬದಲಾಗಿ ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿ ಈ ವರ್ಷದ ಕಳೆದ ಏಪ್ರಿಲ್ 1ರಿಂದ ಎರಡೂ ಮಾದರಿಗಳ ಒಂದೂ ಬೈಕನ್ನು ಸಹ ತಯಾರಿಸಿಲ್ಲ ಎಂದು ಮನಿ ಕಾಂಟ್ರೋಲ್ ವರದಿ ಮಾಡಿದ್ದನ್ನು ನಾವು ಗಮನಿಸಬಹುದು.

ಹಳೆಯ ಮಾದರಿಗಳ ಬದಲಾಗಿ ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಹೋಂಡಾ

ಹೋಂಡಾ ಕಂಪನಿಯು ಪ್ರಸಕ್ತ ಆರ್ಥಿಕ ವರ್ಷದೊಳಗೆ ಹೊಸ ಉತ್ಪನ್ನಗಳಲ್ಲಿ ಒಂದನ್ನು ಆರಂಭಿಸಲು ಯೋಜನೆ ರೂಪಿಸಿದ್ದು, ಈ ವಿಚಾರವನ್ನು ಈ ಹಿಂದೆ, ಹೋಂಡಾ ಕಂಪನಿ ಎಂ.ಡಿ ಮಿನೊರು ಕ್ಯಾಟೊ ಹೊಸ ಉತ್ಪನ್ನಗಳನ್ನು ಪರಿಚಯಿಸುವ ಬಗ್ಗೆ ಹೇಳಿಕೆ ನೀಡುವ ಸಂದರ್ಭದಲ್ಲಿ ಬಹಿರಂಗಪಡಿಸಿದ್ದರು.

ಹಳೆಯ ಮಾದರಿಗಳ ಬದಲಾಗಿ ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಹೋಂಡಾ

ಹೊಸ ಬಣ್ಣದ ಯೋಜನೆಯನ್ನು ಹೊರತುಪಡಿಸಿ ಸಿಬಿಆರ್ 150 ಆರ್ ಮತ್ತು ಸಿಬಿಆರ್ 250 ಆರ್ ಎರಡೂ ಬೈಕುಗಳು ಯಾವುದೇ ರೀತಿಯ ಪ್ರಮುಖ ನವೀಕರಣಗಳಿಲ್ಲದೆ ಕೆಲವು ತಿಂಗಳುಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿವೆ. ಈಗಾಗಲೇ, ಜಾಗತಿಕ ಮಾರುಕಟ್ಟೆಗಳಲ್ಲಿ ಸಿಬಿಆರ್ 250 ಆರ್ ಬೈಕಿನ ಬದಲಾಗಿ ಹೊಸ ಸಿಬಿಆರ್ 300 ಆರ್ ಮೋಟಾರ್ ಸೈಕಲ್ ಮಾರಾಟಗೊಳ್ಳುತ್ತಿದೆ.

ಹಳೆಯ ಮಾದರಿಗಳ ಬದಲಾಗಿ ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಹೋಂಡಾ

ಈಗಾಗಲೇ ಹೋಂಡಾ ಕಂಪನಿ, ಆಫ್ರಿಕಾದಲ್ಲಿ ಟ್ವಿನ್ ಮತ್ತು ಕ್ಲಿಕ್ ಸ್ಕೂಟರಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ ಮತ್ತು ಮುಂಬರುವ ಉತ್ಪನ್ನಗಳ ಪೈಕಿ ಒಂದು ಉತ್ಪನ್ನವು ಸ್ಕೂಟರ್ ಪ್ಲಾಟ್‌ಫಾರಂ ಆಧರಿಸಿದೆ. ಕಂಪನಿ ಈ ವರ್ಷಕ್ಕೆ ಕೇವಲ ಒಂದು ಉತ್ಪನ್ನವನ್ನು ಮಾತ್ರ ಬಿಡುಗಡೆ ಮಾಡಲಿದೆ.

ಹಳೆಯ ಮಾದರಿಗಳ ಬದಲಾಗಿ ಹೊಸ ಉತ್ಪನ್ನಗಳನ್ನು ಪರಿಚಯಿಸಲಿದೆ ಹೋಂಡಾ

ಕೊನೆಗೂ ಹೋಂಡಾ ಕಂಪನಿ ಭಾರತದಲ್ಲಿ ಹೊಸ ಸಿಬಿಆರ್ ವಾಹನದ ಬಗ್ಗೆ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ಹೋಂಡಾ ಸಿಬಿಆರ್ 300 ಆರ್ ಬಿಡುಗಡೆಗೊಂಡಿರೆ ಈ ವಾಹನವು ಕೆಟಿಎಂ ಆರ್‌ಸಿ390, ಬೆನೆಲ್ಲಿ 302 ಆರ್ ಮತ್ತು ಮುಂಬರುವ ಟಿವಿಎಸ್ ಅಪಾಚೆ ಆರ್‌ಟಿಆರ್ 310 ಎಸ್ ದ್ವಿಚಕ್ರ ವಾಹನಗಳ ಜೊತೆ ಪ್ರತಿಸ್ಪರ್ಧೆ ಎದುರಿಸಲಿದೆ.

Read more on ಹೋಂಡಾ honda
English summary
Japanese two-wheeler manufacturer Honda recently halted the production of its flagship products, the CBR 150R and CBR 250R in India.
Story first published: Wednesday, October 4, 2017, 15:40 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark