ಭಾರತದಲ್ಲಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಲ್ಲೂ ರಾಯಲ್ ಎನ್‌ಫೀಲ್ಡ್ ಫೇಮಸ್ ಆಗಿದ್ದು ಹೇಗೆ?

ದೇಶಿ ಮಾರುಕಟ್ಟೆ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಲ್ಲೂ ಫೇಮಸ್ ಆಗಿರುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಕುರಿತಾದ ಕೆಲವು ಇಂಟ್ರಸ್ಟಿಂಗ್ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

By Praveen

ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಅಂದ್ರೆ ಯಾರಿಗೆ ತಾನೆ ಇಷ್ಟವಾಗವುದಿಲ್ಲ ಹೇಳಿ. ಅದರ ಗತ್ತು ಗಮ್ಮತ್ತು ಬೈಕ್ ಪ್ರಿಯರನ್ನು ಸೆಳೆಯದೇ ಇರಲಾರದು. ಇದೇ ಕಾರಣಕ್ಕೆ ರಾಯಲ್ ಎನ್ ಫೀಲ್ಡ್ ಬುಲೆಟ್ ಗಳನ್ನು ಖರೀದಿಸುವುದು ಪ್ರತಿಯೊಬ್ಬನ ಕನಸಾಗಿರುತ್ತದೆ. ಹೀಗಾಗಿಯೇ ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಲ್ಲೂ ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಇದೀಗ ಎಲ್ಲಿಲ್ಲದ ಬೇಡಿಕೆ ಸೃಷ್ಠಿಯಾಗಿರುವುದು.

ವಿದೇಶಿ ಮಾರುಕಟ್ಟೆಗಳಲ್ಲೂ ರಾಯಲ್ ಎನ್‌ಫೀಲ್ಡ್ ಫೇಮಸ್ ಆಗಿದ್ದು ಹೇಗೆ?

ರಾಯಲ್ ಎನ್ ಫೀಲ್ಡ್ ಬುಲೆಟ್ ಎಂದಾಕ್ಷಣ ವಾಹನ ಪ್ರೇಮಿಗಳು ಕ್ಲಾಸಿಕ್ 350 ಹಾಗೂ ಕ್ಲಾಸಿಕ್ 500 ಖರೀದಿಸಲು ಹೆಚ್ಚು ಆದ್ಯತೆ ಕೊಡುತ್ತಾರೆ. ಇದು ಭಾರತೀಯ ರಸ್ತೆಗಳಲ್ಲಿ ಮಾಡಿರುವ ಪರಿಣಾಮ ಇದನ್ನು ಬಿಂಬಿಸುತ್ತದೆ. ದೂರದಿಂದಲೇ ಬರುವಾಗ ಕಿವಿಯಲ್ಲಿ ಕೇಳಿಸುವ ಆ ಗುಡ ಗುಡ ಶಬ್ದ ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಇದರಿಂದಾಗಿಯೇ ದೇಶಿ ಮಾರುಕಟ್ಟೆ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಲ್ಲೂ ಫೇಮಸ್ ಆಗಿರುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಕುರಿತಾದ ಕೆಲವು ಇಂಟ್ರಸ್ಟಿಂಗ್ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ವಿದೇಶಿ ಮಾರುಕಟ್ಟೆಗಳಲ್ಲೂ ರಾಯಲ್ ಎನ್‌ಫೀಲ್ಡ್ ಫೇಮಸ್ ಆಗಿದ್ದು ಹೇಗೆ?

ಇತಿಹಾಸ

1955ರಲ್ಲಿ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಮದ್ರಾಸ್ ಮೋಟಾರ್ ಸಂಸ್ಥೆಯೊಂದಿಗೆ ತನ್ನ ವಾಣಿಜ್ಯ ಚಟುವಟಿಕೆ ಆರಂಭ ಮಾಡಿತ್ತು. ಈ ಮೂಲಕ 350ಸಿಸಿ 500 ಸಿಸಿ ಬೈಕ್‌ಗಳ ನಿರ್ಮಾಣ ಮತ್ತು ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿತ್ತು.

Recommended Video

EICMA 2017: Royal Enfield Interceptor And Continental GT Unveiled - DriveSpark
ವಿದೇಶಿ ಮಾರುಕಟ್ಟೆಗಳಲ್ಲೂ ರಾಯಲ್ ಎನ್‌ಫೀಲ್ಡ್ ಫೇಮಸ್ ಆಗಿದ್ದು ಹೇಗೆ?

ಮತ್ತೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಮೊದಮೊದಲು ಭಾರತೀಯ ಸೇನೆಗಾಗಿ ಮಾತ್ರ ಮೋಟಾರ್ ಸೈಕಲ್‌ಗಳನ್ನು ನಿರ್ಮಾಣ ಮಾಡುತ್ತಿದ್ದ ರಾಯಲ್ ಎನ್‌ಫೀಲ್ಡ್ ತದನಂತರ ಮೋಟಾರ್ ಸೈಕಲ್‌ಗಳಿಗೆ ಬೇಡಿಕೆ ಸೃಷ್ಟಿಯಾದ ಹಿನ್ನೆಲೆ 1962ರಿಂದ ಗ್ರಾಹಕರಿಗಾಗಿ ವಿವಿಧ ಶೈಲಿಯ ಬೈಕ್‌ಗಳನ್ನು ಅಭಿವೃದ್ಧಿ ಮಾಡತೊಡಗಿತು.

ವಿದೇಶಿ ಮಾರುಕಟ್ಟೆಗಳಲ್ಲೂ ರಾಯಲ್ ಎನ್‌ಫೀಲ್ಡ್ ಫೇಮಸ್ ಆಗಿದ್ದು ಹೇಗೆ?

ಇದಾದ ಕೆಲವೇ ವರ್ಷಗಳಲ್ಲಿ ಬೃಹತ್ ಪ್ರಮಾಣದ ಮಾರಾಟ ಜಾಲವನ್ನು ಹೊಂದಿದ ರಾಯಲ್ ಎನ್‌ಫೀಲ್ಡ್, 80ರ ದಶಕದ ವೇಳೆಗೆ ಸೂಪರ್ ಮಾಡೆಲ್ ಬೈಕ್ ಎಂಬ ಹೆಗ್ಗಳಿಕೆಯೊಂದಿಗೆ ನಗರಪ್ರದೇಶಗಳಲ್ಲಿ ಸದ್ದು ಮಾಡಿದ್ದನ್ನು ಎಂದಿಗೂ ಮರೆಯಲಾಗುದಿಲ್ಲ.

ವಿದೇಶಿ ಮಾರುಕಟ್ಟೆಗಳಲ್ಲೂ ರಾಯಲ್ ಎನ್‌ಫೀಲ್ಡ್ ಫೇಮಸ್ ಆಗಿದ್ದು ಹೇಗೆ?

ಹೀಗಾಗಿಯೇ ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ರಾಯಲ್ ಎನ್‌ಫೀಲ್ಡ್, ಭಾರತ ನಂತರ ಆಸ್ಟ್ರೇಲಿಯಾ, ಇಂಗ್ಲೆಂಡ್, ಥಾಯ್ಲೆಂಡ್ ಸೇರಿದಂತೆ ಪ್ರಮುಖ ರಾಷ್ಟ್ರಗಳಲ್ಲಿ ಭಾರೀ ಪ್ರಮಾಣದ ಮಾರಾಟ ಜಾಲ ಹೊಂದಿರುವುದು ಅದರ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ.

ವಿದೇಶಿ ಮಾರುಕಟ್ಟೆಗಳಲ್ಲೂ ರಾಯಲ್ ಎನ್‌ಫೀಲ್ಡ್ ಫೇಮಸ್ ಆಗಿದ್ದು ಹೇಗೆ?

ಇದಲ್ಲದೇ ಭಾರತ ನಂತರ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಮಾರಾಟ ಪ್ರಮಾಣ ದಾಖಲಿಸಿರುವ ರಾಯಲ್ ಎನ್‌ಫೀಲ್ಡ್, 500 ಸಿಸಿ ಸಾಮರ್ಥ್ಯದ ಕ್ಲಾಸಿಕ್ ಬೈಕ್ ಮಾರಾಟ ಮುಂಚೂಣಿ ಕಾಯ್ದುಕೊಳ್ಳುವ ಮೂಲಕ ಭಾರತೀಯ ಗ್ರಾಹಕರೊಂದಿಗೆ ಅಭಿನಾಭಾವ ಬಾಂಧವ್ಯ ಹೊಂದಿದೆ ಎನ್ನಬಹುದು.

ವಿದೇಶಿ ಮಾರುಕಟ್ಟೆಗಳಲ್ಲೂ ರಾಯಲ್ ಎನ್‌ಫೀಲ್ಡ್ ಫೇಮಸ್ ಆಗಿದ್ದು ಹೇಗೆ?

ವಿನ್ಯಾಸ

ಹೆಸರಲ್ಲೇ ಸೂಚಿಸಿರುವಂತೆಯೇ ಆಧುನಿಕ ಎಂಜಿನಿಯರಿಂಗ್ ತಂತ್ರಗಾರಿಕೆಯೊಂದಿಗೆ ಕ್ಲಾಸಿಕ್ ಅನುಭವವನ್ನು ನೀಡಲಿದೆ. ಇದರ ದಿಟ್ಟತನದ ನೋಟ ಪ್ರಮುಖ ಆಕರ್ಷಣೆಯಾಗಿದೆ. ಜೊತೆಗೆ ಎದೆಗಾರಿಕೆಯನ್ನು ಬಿಂಬಿಸುವಂತಹ ದೃಢವಾದ ಟ್ಯಾಂಕ್ ಮುಂಭಾಗದಲ್ಲಿ ಎದ್ದು ಕಾಣಿಸಲಿದೆ. ಇನ್ನು ನಿರ್ಮಾಣ ಗುಣಮಟ್ಟತೆ ಬಗ್ಗೆ ಪ್ರಶ್ನೆಯೇ ಎತ್ತುವಂತಿಲ್ಲ.

ವಿದೇಶಿ ಮಾರುಕಟ್ಟೆಗಳಲ್ಲೂ ರಾಯಲ್ ಎನ್‌ಫೀಲ್ಡ್ ಫೇಮಸ್ ಆಗಿದ್ದು ಹೇಗೆ?

ಬದಿಯಲ್ಲಿ ಲಗತ್ತಿಸಲಾಗಿರುವ ಬಾಕ್ಸ್ ವಿ ಆಕಾರವನ್ನು ಪಡೆದಿದೆ. ನೂರು ವರ್ಷಗಳಿಗೂ ಹಿಂದೆಯೇ ಇದರ ನಿರ್ಮಾಣ ಆರಂಭವಾಗಿದ್ದು, ಈಗಲೂ ವಾಹನ ಪ್ರೇಮಿಗಳ ನೆಚ್ಚಿನ ಬೈಕ್ ಎನಿಸಿಕೊಂಡಿದೆ.

ವಿದೇಶಿ ಮಾರುಕಟ್ಟೆಗಳಲ್ಲೂ ರಾಯಲ್ ಎನ್‌ಫೀಲ್ಡ್ ಫೇಮಸ್ ಆಗಿದ್ದು ಹೇಗೆ?

ಹೆಡ್ ಲ್ಯಾಂಪ್ ಮತ್ತು ಮಿರರ್ ಗಳು ವೃತ್ತಕಾರದೊಂದಿಗೆ ಹೆಚ್ಚು ಮನ ಸೆಳೆಯುತ್ತಿದೆ. ಇನ್ನು ಟೈಲ್ ಲೈಟ್ ಮತ್ತು ಇಂಡಿಕೇಟರ್ ಗಳು ಸಹ ವೃತ್ತಕಾರದ ವಿನ್ಯಾಸವನ್ನೇ ಕಾಪಾಡಿಕೊಂಡಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಬಣ್ಣಗಳಲ್ಲಿ ಲಭ್ಯವಿರುವುದು ಮಾರಾಟ ಹೆಚ್ಚಳಕ್ಕೆ ಮತ್ತೊಂದು ಪ್ಲಸ್ ಪಾಯಿಂಟ್.

ವಿದೇಶಿ ಮಾರುಕಟ್ಟೆಗಳಲ್ಲೂ ರಾಯಲ್ ಎನ್‌ಫೀಲ್ಡ್ ಫೇಮಸ್ ಆಗಿದ್ದು ಹೇಗೆ?

ಅಷ್ಟೇ ಯಾಕೆ ಸಿಂಗಲ್ ಸೀಟಿನ ಆಯ್ಕೆಗಳಲ್ಲೂ ಲಭ್ಯವಾಗುತ್ತಿರುವುದು ಮತ್ತಷ್ಟು ರಮ್ಯತೆಯ ಅನುಭವ ನೀಡಲಿದ್ದು, ರೀ ಸೇಲ್ ವ್ಯಾಲ್ಯೂ‌ನಲ್ಲೂ ಇತರೆ ಬೈಕ್ ಮಾದರಿಗಳಿಂತ ಮುಂದಿರುವ ರಾಯಲ್ ಎನ್‌ಫೀಲ್ಡ್‌ಗಳು ಅತಿಹೆಚ್ಚು ಜನಪ್ರಿಯತೆಗೆ ಮತ್ತೊಂದು ಉದಾಹರಣೆ.

ಡ್ರೈವ್ ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟ್ರೆಂಡಿಂಗ್ ವಿಡಿಯೋ ಇಲ್ಲಿದೆ ನೋಡಿ.

Most Read Articles

Kannada
English summary
Royal Enfield Motorcycles Famous Outside India. Click for Details...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X