ಭಾರತದಲ್ಲಿ ಹಸ್ಕ್‌ವರ್ನ ಬೈಕುಗಳನ್ನು ಬಿಡುಗಡೆಗೊಳಿಸಲು ಯೋಜನೆ ಸಿದ್ದಪಡಿಸಿದ ಕೆಟಿಎಂ

Written By:

ಆಸ್ಟ್ರಿಯನ್ ಕ್ರೀಡಾ ಬೈಕ್ ಉತ್ಪಾದಕ ಕಂಪೆನಿಯಾದ ಕೆಟಿಎಂ 2020ರ ವೇಳೆಗೆ ಭಾರತದಲ್ಲಿ ಹಸ್ಕ್‌ವರ್ನ ಬ್ರ್ಯಾಂಡ್ ಹೊರತರುವುದಾಗಿ ದೃಢಪಡಿಸಿದೆ.

ಭಾರತದಲ್ಲಿ ಹಸ್ಕ್‌ವರ್ನ ಬೈಕುಗಳನ್ನು ಬಿಡುಗಡೆಗೊಳಿಸಲಿದೆ ಯೋಜನೆ ಸಿದ್ದಪಡಿಸಿದ ಕೆಟಿಎಂ

2019ರ ಅಂತ್ಯದ ವೇಳೆಗೆ ಹಸ್ಕ್‌ವರ್ನ ಬ್ರ್ಯಾಂಡ್ ದ್ವಿಚಕ್ರ ಉತ್ಪಾದನೆಯನ್ನು ತನ್ನ ಪಾಲುದಾರರಾದ ಬಜಾಜ್ ಆಟೋ ಸಂಸ್ಥೆಯ ಚಾಕನ್ ಸ್ಥಾವರದಲ್ಲಿ ಪ್ರಾರಂಭಿಸಲು ಕಂಪನಿ ಉದೇಶಿಸಿದೆ. ಬಜಾಜ್ ಕಂಪನಿಯ ಚಾಕನ್ ಸ್ಥಾವರದಲ್ಲಿ 1 ಲಕ್ಷ ಕೆ.ಟಿ.ಎಂ ದ್ವಿಚಕ್ರ ವಾಹನವನ್ನು ತಯಾರಿಸಲು ಕೆಟಿಎಂ ಸಂಸ್ಥೆಗೆ ಸ್ಥಳಾವಕಾಶವಿದೆ.

ಭಾರತದಲ್ಲಿ ಹಸ್ಕ್‌ವರ್ನ ಬೈಕುಗಳನ್ನು ಬಿಡುಗಡೆಗೊಳಿಸಲಿದೆ ಯೋಜನೆ ಸಿದ್ದಪಡಿಸಿದ ಕೆಟಿಎಂ

ಈ ಸ್ಥಾವರದಲ್ಲೇ ಹಸ್ಕ್‌ವರ್ನ ಬ್ರಾಂಡ್ ವಾಹನಗಳನ್ನು ಸಹ ಉತ್ಪಾದನೆ ಮಾಡಲು ಕಂಪನಿ ನಿರ್ಧರಿಸಿದ್ದು, ಇದರ ಫಲವಾಗಿ ಈ ಘಟಕವು 1 ಲಕ್ಷ ಬೈಕುಗಳನ್ನು ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಿದೆ.

ಭಾರತದಲ್ಲಿ ಹಸ್ಕ್‌ವರ್ನ ಬೈಕುಗಳನ್ನು ಬಿಡುಗಡೆಗೊಳಿಸಲಿದೆ ಯೋಜನೆ ಸಿದ್ದಪಡಿಸಿದ ಕೆಟಿಎಂ

ಇದರೊಂದಿಗೆ, ಬಜಾಜ್ ಚಾಕನ್ ಸ್ಥಾವರದಲ್ಲಿ ವರ್ಷಕ್ಕೆ 2 ಲಕ್ಷ ಬೈಕುಗಳನ್ನು ಕೆಟಿಎಂ ಉತ್ಪಾದಿಸಲಿದೆ ಹಾಗು ಕಂಪನಿಯು ಹಸ್ಕ್‌ವರ್ನ ಬ್ರ್ಯಾಂಡ್ ವೈಟ್ ಅರೊ ಮತ್ತು ಬ್ಲಾಕ್ ಅರೊ ವಿಭಾಗದಿಂದ ಉತ್ಪನ್ನಗಳನ್ನು ಬಿಡುಗಡೆ ಮಾಡಲಿದೆ.

ಭಾರತದಲ್ಲಿ ಹಸ್ಕ್‌ವರ್ನ ಬೈಕುಗಳನ್ನು ಬಿಡುಗಡೆಗೊಳಿಸಲಿದೆ ಯೋಜನೆ ಸಿದ್ದಪಡಿಸಿದ ಕೆಟಿಎಂ

"ಭಾರತದಲ್ಲಿ 2020ರ ಹೊತ್ತಿಗೆ ಹಸ್ಕ್‌ವರ್ನ ಬ್ರ್ಯಾಂಡ್ ಅಡಿಯಲ್ಲಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಬೇಕಾಗಿದೆ. ಅಂದರೆ ನಾವು ನಿರ್ಧಾರವನ್ನು ಬದಲಾಯಿಸಿದ್ದು, 2019ರ ಅಂತ್ಯದ ವೇಳೆಗೆ ಉತ್ಪಾದನೆಯನ್ನು ಚಾಕನ್ ಸ್ಥಾವರದಲ್ಲಿ ಪ್ರಾರಂಭವಾಗಲಿದೆ" ಎಂದು ಕೆಟಿಎಂ ಸಿಇಒ ಸ್ಟೆಫಾನ್ ಪಿಯಾರೆರ್ ತಿಳಿಸಿದ್ದಾರೆ.

ಭಾರತದಲ್ಲಿ ಹಸ್ಕ್‌ವರ್ನ ಬೈಕುಗಳನ್ನು ಬಿಡುಗಡೆಗೊಳಿಸಲಿದೆ ಯೋಜನೆ ಸಿದ್ದಪಡಿಸಿದ ಕೆಟಿಎಂ

ಮೂಲಗಳ ಪ್ರಕಾರ ಕೆಫೆ ರೇಸರ್ ಡಿಸೈನ್ ಲ್ಯಾಂಗ್ವೇಜ್ ಆಧರಿಸಿರುವ ಹಸ್ಕ್‌ವರ್ನ ವಿಟಪಿಲಿನ್ 401 ಮತ್ತು ಸ್ವರ್ತ್‌ಪಿಲಿನ್ 401 ಎಂಬ ಹೆಸರಿನ ಎರಡೂ ದ್ವಿಚಕ್ರ ವಾಹನಗಳನ್ನು ಆಧುನಿಕ ವ್ಯಾಖ್ಯಾನದ ಅಡಿಯಲ್ಲಿ ಕೆಟಿಎಂ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಭಾರತದಲ್ಲಿ ಹಸ್ಕ್‌ವರ್ನ ಬೈಕುಗಳನ್ನು ಬಿಡುಗಡೆಗೊಳಿಸಲಿದೆ ಯೋಜನೆ ಸಿದ್ದಪಡಿಸಿದ ಕೆಟಿಎಂ

ಹಸ್ಕ್‌ವರ್ನ ವಿಟಪಿಲಿನ್ 401 ಮತ್ತು ಸ್ವರ್ತ್‌ಪಿಲಿನ್ 401 ವಾಹನಗಳು, 375 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್ ಸಹಾಯದಿಂದ ಚಲಿಸಲಿದ್ದು, ಈ ಎಂಜಿನ್ 43 ಬಿಎಚ್‌ಪಿ ಮತ್ತು 37 ಎನ್ಎಂ ಟಾರ್ಕ್ ಉತ್ಪಾದಿಸಲಿವೆ ಮತ್ತು 6-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಹೊಂದಲಿವೆ.

Read more on ktm ಕೆಟಿಎಂ
English summary
Austrian sports bike manufacturer, KTM has confirmed that it will roll out Husqvarna brand in India by 2020.
Story first published: Monday, November 13, 2017, 20:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark