ಪುಣೆಯಲ್ಲಿ ತನ್ನ ಮೊದಲ ವರ್ಸಿಸ್-ಎಕ್ಸ್ 300 ಬೈಕನ್ನು ಮಾರಾಟ ಮಾಡಿದ ಕವಾಸಕಿ

Written By:

ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಕವಾಸಕಿ ಸಂಸ್ಥೆಯ ಪ್ರಸಾದ್ ಕಾಮತ್ ಎಂಬ ಹೆಸರಿನ ಗ್ರಾಹಕರಿಗೆ ತನ್ನ ಭಾರತದ ಮೊದಲ ವರ್ಸಿಸ್-ಎಕ್ಸ್ 300 ವಾಹನವನ್ನು ಪುಣೆಯ ಶೋರೂಂನಲ್ಲಿ ಮಾರಾಟ ಮಾಡಿದೆ.

ಪುಣೆಯಲ್ಲಿ ತನ್ನ ಮೊದಲ ವರ್ಸಿಸ್-ಎಕ್ಸ್ 300 ಬೈಕನ್ನು ಮಾರಾಟ ಮಾಡಿದ ಕವಾಸಕಿ

ಈ ಮೂಲಕ ಶ್ರೀ ಪ್ರಸಾದ್ ಕಾಮತ್ ಅವರು ಜಪಾನ್ ವಾಹನ ಉತ್ಪಾದಕರಿಂದ ಖರೀದಿಸಿದ ಮೊದಲ ಗ್ರಾಹಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಕವಾಸಕಿ ಮೋಟಾರ್ಸ್ ಕಂಪನಿಯು ಭಾರತದಲ್ಲಿ ವರ್ಸಿಸ್-ಎಕ್ಸ್ 300 ಎಂಬ ಹೆಸರಿನ ಪ್ರವೇಶ ಮಟ್ಟದ ಸಾಹಸ ಮೋಟಾರ್ ಸೈಕಲ್ ಬಿಡುಗಡೆಗೊಳಿಸಿತ್ತು.

ಪುಣೆಯಲ್ಲಿ ತನ್ನ ಮೊದಲ ವರ್ಸಿಸ್-ಎಕ್ಸ್ 300 ಬೈಕನ್ನು ಮಾರಾಟ ಮಾಡಿದ ಕವಾಸಕಿ

ಭಾರತೀಯ ರಸ್ತೆ ಪರಿಸ್ಥಿತಿಗಳಿಗೆ ಸೂಕ್ತವೆನ್ನಿಸುವ ರೀತಿಯಲ್ಲಿ ಉತ್ಪಾದನೆ ಮಾಡಲಾಗಿರುವ ಈ ದ್ವಿಚಕ್ರ ವಾಹನವು ರೂ.4.60 ಲಕ್ಷ ಎಕ್ಸ್ ಶೋರೂಂ(ದೆಹಲಿ) ದರದಲ್ಲಿ ಲಭ್ಯವಿದೆ.

ಪುಣೆಯಲ್ಲಿ ತನ್ನ ಮೊದಲ ವರ್ಸಿಸ್-ಎಕ್ಸ್ 300 ಬೈಕನ್ನು ಮಾರಾಟ ಮಾಡಿದ ಕವಾಸಕಿ

ವರ್ಸಿಸ್-ಎಕ್ಸ್ 300 ಬೈಕ್, 17 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಬ್ರೇಕ್ ಕರ್ತವ್ಯಗಳ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 290 ಮಿ.ಮೀ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಮಿ.ಮೀ ಡಿಸ್ಕ್ ಒಳಗೊಂಡಿದೆ.

ಪುಣೆಯಲ್ಲಿ ತನ್ನ ಮೊದಲ ವರ್ಸಿಸ್-ಎಕ್ಸ್ 300 ಬೈಕನ್ನು ಮಾರಾಟ ಮಾಡಿದ ಕವಾಸಕಿ

ಪ್ರವಾಸಕ್ಕೆ ಹೇಳಿ ಮಾಡಿಸಿದ ಬೈಕ್ ಇದಾಗಿದ್ದು, ಪ್ರಬಲ ವೇಗವರ್ಧನೆಗೆ ಟ್ಯೂನ್ ಮಾಡಿರುವಂತಹ ಸಾಹಸ ಮೋಟಾರ್ ಸೈಕಲ್ ಇದಾಗಿದ್ದು, ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮಾನೊಶಾಕ್ ಸಸ್ಪೆನ್‌ಷನ್ ಇರಿಸಲಾಗಿದೆ.

ಪುಣೆಯಲ್ಲಿ ತನ್ನ ಮೊದಲ ವರ್ಸಿಸ್-ಎಕ್ಸ್ 300 ಬೈಕನ್ನು ಮಾರಾಟ ಮಾಡಿದ ಕವಾಸಕಿ

ಹೊಸ ಕವಾಸಕಿ ವರ್ಸಿಸ್-ಎಕ್ಸ್ 300 ಬೈಕ್, ಝೆಡ್300ನ ಕೊಳವೆಯಾಕಾರದ ಫ್ಲಾಟ್‌ಫಾರಂ ಆಧರಿಸಿದೆ. ಈ ಬೈಕಿನ ಎಂಜಿನ್ ಹೆಚ್ಚು ಮೃದು, ಕಡಿಮೆ ಮತ್ತೆ ಮಧ್ಯಮ ಶಕ್ತಿಯಲ್ಲಿ ಸರಿಯಾದ ರೀತಿಯಲ್ಲಿ ಶಕ್ತಿ ವಿತರಣೆಯ ಅಪ್ಡೇಟ್ ಪಡೆದಿದೆ.

ಪುಣೆಯಲ್ಲಿ ತನ್ನ ಮೊದಲ ವರ್ಸಿಸ್-ಎಕ್ಸ್ 300 ಬೈಕನ್ನು ಮಾರಾಟ ಮಾಡಿದ ಕವಾಸಕಿ

ಈ ಸಾಹಸ ಮೋಟಾರ್ ಸೈಕಲ್ 386 ಬಿಎಚ್‌ಪಿ ಮತ್ತು 27 ಎನ್‌ಎಂ ಟಾರ್ಕ್ ಉತ್ಪಾದಿಸುವ 296 ಸಿಸಿ ಲಿಕ್ವಿಡ್ ಕೋಲ್ಡ್, ಪ್ಯಾರಲಲ್-ಟ್ವಿನ್ ಎಂಜಿನ್ ಆಯ್ಕೆ ಹೊಂದಿದೆ ಹಾಗು ಡುಯಲ್-ಚಾನಲ್ ಎಬಿಎಸ್ ಆಯ್ಕೆಯಾಗಿ ನೀಡಲಾಗಿದೆ.

ಪುಣೆಯಲ್ಲಿ ತನ್ನ ಮೊದಲ ವರ್ಸಿಸ್-ಎಕ್ಸ್ 300 ಬೈಕನ್ನು ಮಾರಾಟ ಮಾಡಿದ ಕವಾಸಕಿ

ಶಾಖ ನಿರ್ವಹಣಾ ತಂತ್ರಜ್ಞಾನ ಅಳವಡಿಸಲಾಗಿದ್ದು, ಇದು ಎಂಜಿನ್‌ನಲ್ಲಿ ಉತ್ಪಾದನೆಯಾಗುವ ಬಿಸಿ ಗಾಳಿಯನ್ನು ಹೊರಹಾಕುತ್ತದೆ ಮತ್ತು ಹೆಚ್ಚಿನ ತಾಪಮಾನವನ್ನು ಕಡಿಮೆಗೊಳಿಸಿ ಆರಾಮದಾಯಕ ಸವಾರಿಗೆ ಕಾರಣವಾಗುತ್ತದೆ.

English summary
Inda’s First Kawasaki Versys X-300 Adventure Motorcycle Delivered In Pune.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark