2017ರ ಇಂಡಿಯನ್ ಸ್ಕೌಟ್ ಬಾಬ್ಬರ್ ಖರೀದಿಗೆ ಬುಕ್ಕಿಂಗ್ ಶುರು
ಅಮೆರಿಕದ ಪ್ರತಿಷ್ಠಿತ ಐಷಾರಾಮಿ ಬೈಕ್ ಉತ್ಪಾದನಾ ಸಂಸ್ಥೆಯಾದ ಇಂಡಿಯನ್ ಮೋಟಾರ್‌ಸೈಕಲ್ ಸದ್ಯದಲ್ಲೇ 2017ರ ಸ್ಕೌಟ್ ಬಾಬ್ಬರ್ ಆವೃತ್ತಿಯನ್ನು ಸುಧಾರಿತ ತಂತ್ರಜ್ಞಾನದೊಂದಿಗೆ ಪರಿಚಯಿಸುತ್ತಿದ್ದು, ಇದೀಗ ಬುಕ್ಕಿಂಗ್ ಕೂಡಾ ಆರಂಭಿಸಿದೆ.
ಅಮೆರಿಕದ ಪ್ರತಿಷ್ಠಿತ ಐಷಾರಾಮಿ ಬೈಕ್ ಉತ್ಪಾದನಾ ಸಂಸ್ಥೆಯಾದ ಇಂಡಿಯನ್ ಮೋಟಾರ್‌ಸೈಕಲ್ ಸದ್ಯದಲ್ಲೇ 2017ರ ಸ್ಕೌಟ್ ಬಾಬ್ಬರ್ ಆವೃತ್ತಿಯನ್ನು ಸುಧಾರಿತ ತಂತ್ರಜ್ಞಾನದೊಂದಿಗೆ ಪರಿಚಯಿಸುತ್ತಿದ್ದು, ಇದೀಗ ಬುಕ್ಕಿಂಗ್ ಕೂಡಾ ಆರಂಭಿಸಿದೆ.

ಯುರೋಪಿನ ಕೆಲವು ದೇಶಗಳಲ್ಲಿ ಈಗಾಗಲೇ ಭರ್ಜರಿ ಮಾರಾಟವಾಗುತ್ತಿರುವ 2017ರ ಇಂಡಿಯನ್ ಸ್ಕೌಟ್ ಬಾಬ್ಬರ್ ಭಾರತೀಯ ಮಾರುಕಟ್ಟೆಯ ಮೇಲೂ ಭಾರೀ ನೀರಿಕ್ಷೆಯೊಂದಿಗೆ ಪರಿಚಯಿಸುತ್ತಿದ್ದು, ಆಸಕ್ತ ಗ್ರಾಹಕರು ರೂ.50 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಮಾಡಬಹುದಾಗಿದೆ.

ಬೈಕ್ ಮುಂಭಾಗದ ವಿನ್ಯಾಸದಲ್ಲಿ ಹಿಂದಿನ ಮಾದರಿಗಿಂತ ಭಿನ್ನತೆ ಹೊಂದಿರುವ 2017ರ ಸ್ಕೌಟ್ ಬಾಬ್ಬರ್, ಕತ್ತರಿಸಿದ ಫೆಂಡರ್‌ಗಳನ್ನು ಹೊಂದಿದೆ. ಜೊತೆಗೆ ಬಾಬ್ಬರ್ ಥೀಮ್‌ಗಳು ಸ್ಕೌಟ್ ಬೈಕ್ ಅಂದವನ್ನು ಹೆಚ್ಚಿಸಿದ್ದು, ಇದನ್ನು ನಸೆಲ್ ಎಂದು ಕರೆಯಲಾಗುತ್ತದೆ.

ಇಂಡಿಯನ್ ಮೋಟಾರ್ ಸೈಕಲ್ ಮಾದರಿಗಳಲ್ಲೇ ಅತಿಹೆಚ್ಚು ಬೇಡಿಕೆ ಹೊಂದಿರುವ ಸ್ಕೌಟ್ ಬಾಬ್ಬರ್ ಕ್ಲಾಸಿಕ್ ಶ್ರೇಣಿಗಳಿಂದಲೇ ಹೆಚ್ಚು ಜನಪ್ರಿಯತೆ ಹೊಂದಿದ್ದು, ಟ್ಯಾಂಕರ್ ಬದಿಯಲ್ಲಿ ಇಂಡಿಯನ್ ಫಾಂಟ್ ಅನ್ನು ಬ್ಲಾಕ್ ಅಕ್ಷರಗಳಲ್ಲಿ ಬದಲಾಯಿಸಿದೆ.

ಅದಲ್ಲದೇ ಸ್ಕೌಟ್ ಬಾಬ್ಬರ್ ಹ್ಯಾಂಡ್‌ಗಳು ಹೊಸ ಟ್ರ್ಯಾಕರ್ ಶೈಲಿಯ ವಿನ್ಯಾಸಗಳೊಂದಿಗೆ ಬಾರ್ ಎಂಡ್ ಕನ್ನಡಿಗಳನ್ನು ಇರಿಸಲಾಗಿದ್ದು, ಅಕ್ರಣಕಾರಿ ಸವಾರಿಗೆ ಪೂರಕವಾಗುವಂತೆ ಸೀಟುಗಳನ್ನು ವಿಶೇಷವಾಗಿ ವಿನ್ಯಾಸ ಕೈಗೊಳ್ಳಲಾಗಿದೆ.

ಇಂಡಿಯನ್ ಸ್ಕೌಟ್ ಬಾಬ್ಬರ್ ಬೈಕ್ ಮಾದರಿಯೂ 1,133-ಸಿಸಿ ಲಿಕ್ವಿಡ್ ಕೂಲ್ಡ್ ವಿ-ಟ್ವಿನ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ಜೊತೆಗೆ 100-ಬಿಎಚ್‌ಪಿ ಮತ್ತು 97.7-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಇಂಡಿಯನ್ ಸ್ಕೌಟ್ ಮಾದರಿಯ ಜೊತೆ ಹೊಲಿಕೆ ಮಾಡಿದರೆ ಸ್ಕೌಟ್ ಬಾಬ್ಬರ್ ಆವೃತ್ತಿ ಉತ್ತಮವಾಗಿದ್ದು, ಒಟ್ಟು ವಿವಿಧ ಬಣ್ಣಗಳಲ್ಲಿ ಲಭ್ಯದೊಂದಿಗೆ ಸುರಕ್ಷೆಗಾಗಿ ಎಬಿಎಸ್ ಸೇರಿದಂತೆ ಹಲವು ತಂತ್ರಜ್ಞಾನಗಳನ್ನು ಒದಗಿಸಲಾಗಿದೆ.


Click it and Unblock the Notifications








