ಇಂಡಿಯನ್ ಮೋಟಾರ್‌ಸೈಕಲ್ ಆಫ್ ದಿ ಇಯರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಕೆಟಿಎಂ 390 ಡ್ಯೂಕ್

ಭಾರತದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಕೆಟಿಎಂನ ಡ್ಯೂಕ್ 390 ಬೈಕ್, ಇಂಡಿಯನ್ ಮೋಟಾರ್‌ಸೈಕಲ್ ಆಫ್ ದಿ ಇಯರ್ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ.

By Girish

ಹೌದು, 2017ರಲ್ಲಿ ಬಿಡುಗಡೆಯಾದ ಸುಮಾರು 12 ಖ್ಯಾತ ಮೋಟಾರ್ ಸೈಕಲ್‌ಗಳ ಪಟ್ಟಿಯಲ್ಲಿ ಕೆಟಿಎಂನ ಡ್ಯೂಕ್ 390 ಬೈಕ್ ಸಹ ಸ್ಥಾನ ಪಡೆಯಲು ಯಶಸ್ವಿಯಾಗಿತ್ತು. ತದನಂತರ ನೆಡೆದ ಪರೀಕ್ಷೆಯಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ್ದು ಕೆಟಿಎಂ 390 ಡ್ಯೂಕ್ ಬೈಕ್ ಪ್ರಥಮ ಸ್ಥಾನವನ್ನು ಗಳಿಸಿದೆ.

ಇಂಡಿಯನ್ ಮೋಟಾರ್‌ಸೈಕಲ್ ಆಫ್ ದಿ ಇಯರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಕೆಟಿಎಂ 390 ಡ್ಯೂಕ್

ಕೆಟಿಎಂನ ಡ್ಯೂಕ್ 390 ಬೈಕ್, 107 ಪಾಯಿಂಟ್‌ಗಳನ್ನು ಗಳಿಸಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ ಹಾಗು ರನ್ನರ್ ಅಪ್ ಆಗಿ ಯಮಹಾ ಸಂಸ್ಥೆಯ ಎಫ್‌ಝೆಡ್ 25 ಹೊರಹೊಮ್ಮಿದ್ದು, ಈ ಬೈಕ್ ಕೇವಲ 77 ಪಾಯಿಂಟ್ ಗಳಿಸಿಕೊಂಡಿದೆ.

ಇಂಡಿಯನ್ ಮೋಟಾರ್‌ಸೈಕಲ್ ಆಫ್ ದಿ ಇಯರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಕೆಟಿಎಂ 390 ಡ್ಯೂಕ್

2017ರ ಕೆಟಿಎಂನ ಡ್ಯೂಕ್ 390 ಬೈಕ್ ಹೆಚ್ಚಿನ ನವೀಕರಣವನ್ನು ಪಡೆದಿದೆ. ಈ ಮೋಟಾರ್ ಸೈಕಲ್ ಸಂಪೂರ್ಣವಾಗಿ ವಿಭಿನ್ನವಾಗಿದೆ ಮತ್ತು ಕೆಟಿಎಂ 1290 ಸೂಪರ್ ಡ್ಯೂಕ್ ಆರ್ ಬೈಕಿನಿಂದ ವಿನ್ಯಾಸ ಸ್ಫೂರ್ತಿಯನ್ನು ಪಡೆಯುತ್ತದೆ.

ಇಂಡಿಯನ್ ಮೋಟಾರ್‌ಸೈಕಲ್ ಆಫ್ ದಿ ಇಯರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಕೆಟಿಎಂ 390 ಡ್ಯೂಕ್

ಭಾರತದಲ್ಲಿ ಅಧಿಕೃತವಾಗಿ ಲಭ್ಯವಿರುವ ಅತ್ಯಂತ ಶಕ್ತಿಶಾಲಿ ಕೆಟಿಎಂ ಬೈಕ್ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ ಕೆಟಿಎಂನ ಡ್ಯೂಕ್ 390 ಬೈಕ್, ಹೊಸ ಸಬ್-ಫ್ರೇಮ್‌ನೊಂದಿಗೆ ಹಿಂದಿನ ಆವೃತಿಯ ಚಾರ್ಸಿ ಪಡೆಯುತ್ತದೆ. ಈ ಬೈಕ್ ಗಾತ್ರದಲ್ಲಿ ದೊಡ್ಡದಾಗಿದೆ ಮತ್ತು ಸಾಕಷ್ಟು ವೈಶಿಷ್ಟ್ಯಗಳ ಅಳವಡಿಕೆಯನ್ನು ಕಂಡಿದೆ.

ಇಂಡಿಯನ್ ಮೋಟಾರ್‌ಸೈಕಲ್ ಆಫ್ ದಿ ಇಯರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಕೆಟಿಎಂ 390 ಡ್ಯೂಕ್

ಡಿಆರ್‌ಎಲ್ ಗಳಂತೆ ಕಾರ್ಯನಿರ್ವಹಿಸುವ ಬೈಕ್ ಎಲ್ಇಡಿ ಹೆಡ್ ಲ್ಯಾಂಪ್‌ಗಳನ್ನು ಹೊಂದಿರುವಕೆಟಿಎಂನ ಡ್ಯೂಕ್ 390 ಬೈಕಿನ ಟ್ಯಾಂಕ್ ದೊಡ್ಡದಾಗಿದೆ ಮತ್ತು ಆಕ್ರಮಣಶೀಲ ಟ್ಯಾಂಕ್ ವಿಸ್ತರಣೆಗಳನ್ನು ಪಡೆಯುತ್ತದೆ.

ಇಂಡಿಯನ್ ಮೋಟಾರ್‌ಸೈಕಲ್ ಆಫ್ ದಿ ಇಯರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಕೆಟಿಎಂ 390 ಡ್ಯೂಕ್

ಯಾಂತ್ರಿಕವಾಗಿ, ಈ ಬೈಕಿನಲ್ಲಿ 373.2 ಸಿಸಿ ಎಂಜಿನ್ ಜೋಡಣೆಯಾಗಿದೆ. ಈ ಶಕ್ತಿಶಾಲಿ ಎಂಜಿನ್, 43 ಬಿಎಚ್‌ಪಿ ಮತ್ತು 37 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಎಕ್ಸ್‌ಸಾಸ್ಟ್ ವ್ಯವಸ್ಥೆ, ರೈಡ್-ಬೈ-ವೈರ್ ತಂತ್ರಜ್ಞಾನ, ಸ್ಲಿಪ್ಪರ್ ಕ್ಲಚ್ 6-ಸ್ಪೀಡ್ ಟ್ರಾನ್ಸ್‌ಮಿಷನ್ ಪಡೆಯುತ್ತದೆ.

ಇಂಡಿಯನ್ ಮೋಟಾರ್‌ಸೈಕಲ್ ಆಫ್ ದಿ ಇಯರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಕೆಟಿಎಂ 390 ಡ್ಯೂಕ್

ನಿಖರವಾಗಿ, ರೂ.2.29 ಲಕ್ಷ ದೆಹಲಿ ಎಕ್ಸ್ ಶೋರೂಂ ಬೆಲೆ ಪಡೆದುಕೊಂಡಿರುವ ಈ ಬೈಕ್, ಸದ್ಯ ಇಂಡಿಯನ್ ಮೋಟಾರ್‌ಸೈಕಲ್ ಆಫ್ ದಿ ಇಯರ್ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದ್ದು, ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

Most Read Articles

Kannada
Read more on ktm ಕೆಟಿಎಂ
English summary
KTM Duke 390 is ‘Indian Motorcycle Of the Year 2017’
Story first published: Thursday, December 14, 2017, 15:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X