ಬೆಂಗಳೂರಿನಲ್ಲಿ ಮಾತ್ರ ಲಭ್ಯ ಬ್ಲ್ಯಾಕ್ ಪೇಂಟ್ ಎಡಿಷನ್ ಕೆಟಿಎಂ ಡ್ಯೂಕ್ 390

ಡ್ಯೂಕ್ 390 ಬೈಕ್ ಮಾದರಿಯನ್ನು ಪ್ರದರ್ಶನ ಮಾಡಿ ಬಿಡುಗಡೆಗೊಳಿಸಿದ್ದ ಕೆಟಿಎಂ, ಕೇವಲ ಆರೇಂಜ್ ಬಣ್ಣದ ಆಯ್ಕೆಯನ್ನು ಒದಗಿಸಿತ್ತು.

By Praveen

ಈ ಹಿಂದೆ ಇಐಸಿಎಂಎ ಮೋಟಾರ್ ಶೋನಲ್ಲಿ ಡ್ಯೂಕ್ 390 ಬೈಕ್ ಮಾದರಿಯನ್ನು ಪ್ರದರ್ಶನ ಮಾಡಿ ಬಿಡುಗಡೆಗೊಳಿಸಿದ್ದ ಕೆಟಿಎಂ, ಕೇವಲ ಆರೇಂಜ್ ಬಣ್ಣದ ಆಯ್ಕೆಯನ್ನು ಒದಗಿಸಿತ್ತು. ಆದ್ರೆ ಅದೇ ಆವೃತ್ತಿಯನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬೆಂಗಳೂರಿನಲ್ಲಿ ಬ್ಲ್ಯಾಕ್ ಪೇಂಟ್ ಆವೃತ್ತಿಯನ್ನು ಸಿದ್ಧಗೊಳಿಸಿ ಮಾರಾಟ ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿ ಮಾತ್ರ ಲಭ್ಯ ಬ್ಲ್ಯಾಕ್ ಪೇಂಟ್ ಎಡಿಷನ್ ಕೆಟಿಎಂ ಡ್ಯೂಕ್ 390

ಯಾಕೇಂದ್ರೆ ಸೂಪರ್ ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಕೆಟಿಎಂ ಸಂಸ್ಥೆಯು ಡ್ಯೂಕ್ 390 ಮಾದರಿಯನ್ನು ಆರೇಂಜ್ ಪೇಂಟ್‌ನಲ್ಲಿ ಮಾತ್ರ ಪರಿಚಯಿಸುತ್ತಿದ್ದು, ಈ ಹಿನ್ನಲೆ ಬ್ಲ್ಯಾಕ್ ಪೇಂಟ್ ಇಷ್ಟ ಪಡುವ ಗ್ರಾಹಕರಿಗಾಗಿ ಬೆಂಗಳೂರಿನ ಕೆಟಿಎಂ ಶೋರಂ ಹೊಸ ಆಯ್ಕೆಯನ್ನು ಒದಗಿಸುತ್ತಿದೆ.

ಬೆಂಗಳೂರಿನಲ್ಲಿ ಮಾತ್ರ ಲಭ್ಯ ಬ್ಲ್ಯಾಕ್ ಪೇಂಟ್ ಎಡಿಷನ್ ಕೆಟಿಎಂ ಡ್ಯೂಕ್ 390

ಅಂದಹಾಗೆ ಬ್ಲ್ಯಾಕ್ ಪೇಂಟ್ ಆವೃತ್ತಿಯು ಬೆಂಗಳೂರಿನ ಮೆಖ್ರಿ ವೃತ್ತದ ಬಳಿ ಇರುವ ಕೆಟಿಎಂ ಅಧಿಕೃತ ಡೀಲರ್ ಬಳಿ ಲಭ್ಯವಾಗುತ್ತಿದ್ದು, ಗ್ರಾಹಕರ ಬೇಡಿಕೆ ಅನುಗುಣವಾಗಿ ಹೊಸ ಬಣ್ಣದ ಬೈಕ್ ಮಾದರಿಯನ್ನು ಸಿದ್ಧಗೊಳಿಸುತ್ತಿದ್ದಾರೆ.

Recommended Video

2017 Tokyo Motor Show: Yamaha Reveals The Niken - DriveSpark
ಬೆಂಗಳೂರಿನಲ್ಲಿ ಮಾತ್ರ ಲಭ್ಯ ಬ್ಲ್ಯಾಕ್ ಪೇಂಟ್ ಎಡಿಷನ್ ಕೆಟಿಎಂ ಡ್ಯೂಕ್ 390

ಹೀಗಾಗಿ ಮಾರುಕಟ್ಟೆಯಲ್ಲಿರುವ ಆರೇಂಜ್ ಬಣ್ಣದ ಡ್ಯೂಕ್ 390 ಮಾದರಿಗಿಂತ ರೂ.10 ಸಾವಿರ ಹೆಚ್ಚುವರಿ ಪಡೆಯಲಾಗುತ್ತಿದ್ದು, ಬೇಡಿಕೆ ಆಧಾರದ ಮೇಲೆ ಬ್ಲ್ಯಾಕ್ ಪೇಂಟಿಂಗ್ ಆವೃತ್ತಿಗಳನ್ನು ಒದಗಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ಮಾತ್ರ ಲಭ್ಯ ಬ್ಲ್ಯಾಕ್ ಪೇಂಟ್ ಎಡಿಷನ್ ಕೆಟಿಎಂ ಡ್ಯೂಕ್ 390

ಇದರಿಂದಾಗಿ ಬ್ಲ್ಯಾಕ್ ಬಣ್ಣದ ಬೈಕ್ ಇಷ್ಟ ಪಡುವ ಗ್ರಾಹಕರಿಗೆ ಇದು ಖರೀದಿ ಮಾಡಲು ಸಹಕಾರಿಯಾಗಿದ್ದು, ವಿನೂತನ ಮಾದರಿಯ ಬೈಕ್ ಖರೀದಿಗೆ ನೂರಾರು ಗ್ರಾಹಕರು ಬುಕ್ಕಿಂಗ್ ಕೂಡಾ ಮಾಡುತ್ತಿರುವುದು ಅದರ ಬೇಡಿಕೆ ಎಷ್ಟಿದೆ ಎಂಬುವುದನ್ನು ಗೊತ್ತಾಗುತ್ತದೆ.

ಬೆಂಗಳೂರಿನಲ್ಲಿ ಮಾತ್ರ ಲಭ್ಯ ಬ್ಲ್ಯಾಕ್ ಪೇಂಟ್ ಎಡಿಷನ್ ಕೆಟಿಎಂ ಡ್ಯೂಕ್ 390

ಎಂಜಿನ್ ಸಾಮರ್ಥ್ಯ

373.20 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಸಾಮರ್ಥ್ಯವನ್ನು ಹೊಂದಿರುವ ಕೆಟಿಎಂ ಡ್ಯೂಕ್ 390 ಆವೃತ್ತಿಯು 42-ಬಿಎಚ್‌ಪಿ ಹಾಗೂ 37-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

ತಪ್ಪದೇ ಓದಿ-ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಬೆಂಗಳೂರಿನಲ್ಲಿ ಮಾತ್ರ ಲಭ್ಯ ಬ್ಲ್ಯಾಕ್ ಪೇಂಟ್ ಎಡಿಷನ್ ಕೆಟಿಎಂ ಡ್ಯೂಕ್ 390

ಈ ಮೂಲಕ 6 ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಡ್ಯೂಕ್ 390 ಮಾದರಿಯು ಡೀಜಿಟಲ್ ಸ್ಪೀಡೋ ಮೀಟರ್ ಜೊತೆ ಉತ್ತಮ ಇಂಧನ ಕಾರ್ಯಕ್ಷಮತೆಯನ್ನು ಪಡೆದುಕೊಂಡಿರುವ ಮತ್ತೊಂದು ವಿಶೇಷ ಎನ್ನಬಹುದು.

ಬೆಂಗಳೂರಿನಲ್ಲಿ ಮಾತ್ರ ಲಭ್ಯ ಬ್ಲ್ಯಾಕ್ ಪೇಂಟ್ ಎಡಿಷನ್ ಕೆಟಿಎಂ ಡ್ಯೂಕ್ 390

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ಸಂಸ್ಥೆಯು ಡ್ಯೂಕ್ 390 ಆವೃತ್ತಿಯನ್ನು ಆರೇಂಜ್ ಬಣ್ಣದಲ್ಲಿ ಮಾತ್ರ ಪರಿಚಯಿಸುತ್ತಿದ್ದು, ಇದು ಕೆಲವು ಗ್ರಾಹಕರಿಗೆ ಇಷ್ಟವಾಗುತ್ತಿಲ್ಲ. ಈ ಹಿನ್ನೆಲೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬ್ಲ್ಯಾಕ್ ಪೇಂಟ್ ಆವೃತ್ತಿಯನ್ನು ಹೆಚ್ಚುವರಿ ಶುಲ್ಕದೊಂದಿಗೆ ಡೀಲರ್‌ಗಳೇ ಅಭಿವೃದ್ಧಿ ಮಾಡುತ್ತಿದ್ದಾರೆ.

Trending On DriveSpark Kannada:

ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ರಾಯಲ್ ಎನ್‌ಫೀಲ್ಡ್ ಟಂಡರ್ ಬರ್ಡ್ ಹಿಂದಿಕ್ಕುತ್ತಾ ಬಜಾಜ್ ಅವೆಂಜರ್ 400 ಕ್ರೂಜರ್?

Most Read Articles

Kannada
Read more on ktm ಕೆಟಿಎಂ
English summary
Read in Kannada about KTM Duke 390 Spotted With Stealth Black Paint Job.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X