ರಾಯಲ್ ಎನ್‌ಫೀಲ್ಡ್ ಟಂಡರ್ ಬರ್ಡ್ ಹಿಂದಿಕ್ಕುತ್ತಾ ಬಜಾಜ್ ಅವೆಂಜರ್ 400 ಕ್ರೂಜರ್?

ಇತ್ತೀಚೆಗೆ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿಯಾಗಿ ಹಲವು ಬೈಕ್‌ಗಳನ್ನು ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಇದೀಗ ಬಜಾಜ್ ಅವೆಂಜರ್ 400 ಕ್ರೂಜರ್‌ನ ಸರದಿ.

By Praveen

ಕ್ಲಾಸಿಕಲ್ ಮಾದರಿಯ ಬೈಕ್ ಆವೃತ್ತಿಗಳಲ್ಲಿ ರಾಯಲ್ ಎನ್‌ಫೀಲ್ಡ್ ಉತ್ಪನ್ನಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಆದ್ರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿಯಾಗಿ ಹಲವು ಬೈಕ್‌ಗಳನ್ನು ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಇದೀಗ ಬಜಾಜ್ ಅವೆಂಜರ್ 400 ಕ್ರೂಜರ್‌ನ ಸರದಿ.

ರಾಯಲ್ ಎನ್‌ಫೀಲ್ಡ್ ಟಂಡರ್ ಬರ್ಡ್ ಹಿಂದಿಕ್ಕುತ್ತಾ ಬಜಾಜ್ ಅವೆಂಜರ್ 400 ಕ್ರೂಜರ್?

ರಾಯಲ್ ಎನ್‌ಫೀಲ್ಡ್ ಮಾದರಿಗಳಿಗೆ ಪ್ರತಿಸ್ಪರ್ಧಿ ಹಲವು ಬೈಕ್‌ಗಳು ಇದೀಗ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಸದ್ಯ ಬಜಾಜ್ ಸಂಸ್ಥೆಯು ನಿರ್ಮಾಣ ಮಾಡುತ್ತಿರುವ ಹೊಚ್ಚ ಹೊಸ ಉತ್ಪನ್ನವಾದ ಅವೆಂಜರ್ 400 ಕ್ರೂಜರ್ ಬೈಕ್ ಟಂಡರ್ ಬರ್ಡ್ 350 ಮತ್ತು 500 ಆವೃತ್ತಿಗಳನ್ನು ಹಿಂದಿಕ್ಕಲು ಹವಣಿಸುತ್ತಿದೆ.

ರಾಯಲ್ ಎನ್‌ಫೀಲ್ಡ್ ಟಂಡರ್ ಬರ್ಡ್ ಹಿಂದಿಕ್ಕುತ್ತಾ ಬಜಾಜ್ ಅವೆಂಜರ್ 400 ಕ್ರೂಜರ್?

ಏಕೆಂದರೆ ಇದಕ್ಕೂ ಕಾರಣವಿದೆ. ಬಜಾಜ್ ನಿರ್ಮಾಣ ಮಾಡುತ್ತಿರುವ ಅವೆಂಜರ್ 400 ಕೂಡಾ ವಿಶೇಷ ವಿನ್ಯಾಸಗಳ ಮೂಲಕ ಬಲಿಷ್ಠ ಎಂಜಿನ್ ಪಡೆದುಕೊಂಡಿದ್ದು, ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಂತಲೂ ಅಗ್ಗದ ಬೆಲೆಗೆ ಉತ್ತಮ ಕಾರ್ಯಕ್ಷಮತೆ ಪ್ರದರ್ಶಿಸುವ ನೀರಿಕ್ಷೆ ಹೊಂದಿವೆ.

Recommended Video

Benelli 300 TNT ABS Now Avaliable In India - DriveSpark
ರಾಯಲ್ ಎನ್‌ಫೀಲ್ಡ್ ಟಂಡರ್ ಬರ್ಡ್ ಹಿಂದಿಕ್ಕುತ್ತಾ ಬಜಾಜ್ ಅವೆಂಜರ್ 400 ಕ್ರೂಜರ್?

ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಟಂಡರ್ ಬರ್ಡ್ ಅಷ್ಟೇ ಅಲ್ಲದೇ ಮತ್ತೊಂದು ಬೈಕ್ ಆವೃತ್ತಿಯಾದ ಯುಎಂ ರೆನೆಗೆಡ್ ಬೈಕ್‌ಗಳನ್ನು ಕೂಡಾ ಹಿಂದಿಕ್ಕುವ ಇರಾದೆಯಲ್ಲಿರುವ ಅವೆಂಜರ್ 400 ಕ್ರೂಜರ್ ಆವೃತ್ತಿಯು, ಡಾಮಿನಾರ್ 400 ಬೈಕಿನ ಎಂಜಿನ್ ಎರವಲು ಪಡೆದಿದೆ.

ರಾಯಲ್ ಎನ್‌ಫೀಲ್ಡ್ ಟಂಡರ್ ಬರ್ಡ್ ಹಿಂದಿಕ್ಕುತ್ತಾ ಬಜಾಜ್ ಅವೆಂಜರ್ 400 ಕ್ರೂಜರ್?

ಇದರ ಜೊತೆಗೆ ಸದ್ಯ ಮಾರುಕಟ್ಟೆಯಲ್ಲಿರುವ ಅವೆಂಜರ್ 150 ಮತ್ತು 220 ಆವೃತ್ತಿಗಳು ಕೂಡಾ ಹೊಸ ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಲಿದ್ದು, ಅವೆಂಜರ್ 400 ಕ್ರೂಜರ್ ಆವೃತ್ತಿಯು 35-ಬಿಎಚ್‌ಪಿ ಮತ್ತು 35-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿವೆ.

ರಾಯಲ್ ಎನ್‌ಫೀಲ್ಡ್ ಟಂಡರ್ ಬರ್ಡ್ ಹಿಂದಿಕ್ಕುತ್ತಾ ಬಜಾಜ್ ಅವೆಂಜರ್ 400 ಕ್ರೂಜರ್?

ಇದಲ್ಲದೇ 400 ಸಿಸಿ ಎಂಜಿನ್ ಪಡೆದುಕೊಂಡಿರುವ ಅವೆಂಜರ್ 400 ಕ್ರೂಜರ್ ಆವೃತ್ತಿಯು ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಡಾಮಿನರ್ 400 ಮಾದರಿಯಂತೆ ಲಿಕ್ವಿಡ್ ಕೂಲ್ಡ್, ಟ್ರಿಪ್ಲಲ್ ಸ್ಪಾರ್ಕ್ ಪ್ಲಗ್, ಫ್ಯೂಲ್ ಇಂಜಕ್ಷನ್ ವ್ಯವಸ್ಥೆಯನ್ನು ಹೊಂದಿರಲಿವೆ.

ರಾಯಲ್ ಎನ್‌ಫೀಲ್ಡ್ ಟಂಡರ್ ಬರ್ಡ್ ಹಿಂದಿಕ್ಕುತ್ತಾ ಬಜಾಜ್ ಅವೆಂಜರ್ 400 ಕ್ರೂಜರ್?

ಇನ್ನು ಕೆಲವು ವರದಿಗಳ ಪ್ರಕಾರ ಅವೆಂಜರ್ 400 ಕ್ರೂಜರ್ ಮಾದರಿಗಳು ದೇಶಿಯ ಮಾರುಕಟ್ಟೆಯಲ್ಲಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗೂ ರಫ್ತು ಮಾಡುವ ಉದ್ದೇಶವಿದೆ ಎನ್ನಲಾಗಿದ್ದು, ಆಪ್ ರೋಡ್ ಕೌಶಲ್ಯ ಪ್ರದರ್ಶನಗಳಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಹೊರ ವಿನ್ಯಾಸಗಳನ್ನು ಕೈಗೊಳ್ಳಲಾಗಿದೆ.

ರಾಯಲ್ ಎನ್‌ಫೀಲ್ಡ್ ಟಂಡರ್ ಬರ್ಡ್ ಹಿಂದಿಕ್ಕುತ್ತಾ ಬಜಾಜ್ ಅವೆಂಜರ್ 400 ಕ್ರೂಜರ್?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಬಜಾಜ್ ಸಂಸ್ಥೆಯು ಈಗಾಗಲೇ ಪ್ರಯಾಣಿಕ ಬೈಕ್ ಉತ್ಪನ್ನಗಳ ಮಾರಾಟದಲ್ಲಿ ಜನಪ್ರಿಯಗೊಂಡಿದ್ದು, ಅವೆಂಜರ್ ಆವೃತ್ತಿಗಳ ಮಾರಾಟದಲ್ಲೂ ಹೊಸ ದಾಖಲೆ ಮಾಡುತ್ತಿದೆ. ಈ ನಡುವೆ ರಾಯಲ್ ಎನ್‌ಫೀಲ್ಡ್‌ಗೆ ಪ್ರತಿಸ್ಪರ್ಧಿಯಾಗಿ ಅವೆಂಜರ್ 400 ಕ್ರೂಸರ್ ಬೈಕ್ ಪರಿಚಯಿಸುತ್ತಿರುವ ಭಾರೀ ಚರ್ಚೆಗೆ ಕಾರಣವಾಗಿದೆ.

Most Read Articles

Kannada
English summary
Read in Kannad: Bajaj Avenger 400 Cruiser In The Works; Should Royal Enfield Be Worried?
Story first published: Tuesday, October 24, 2017, 17:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X