ಜುಲೈ 1ರಿಂದ ಜಿಎಸ್‌ಟಿ ಜಾರಿ ಹಿನ್ನೆಲೆ ಕೆಟಿಎಂ ಬೆಲೆಗಳಲ್ಲಿ ಭಾರೀ ಏರಿಕೆ

Written By:

ಜುಲೈ 1ರಿಂದ ದೇಶಾದ್ಯಂತ ಜಿಎಸ್‌ಟಿ ಜಾರಿ ಬರುತ್ತಿರುವ ಹಿನ್ನೆಲೆ ಕೆಟಿಎಂ ಬೈಕ್ ಬೆಲೆಗಳಲ್ಲಿ ಭಾರೀ ಏರಿಕೆಯಾಗಿದ್ದು, ಯಾವ ಬೈಕ್ ಬೆಲೆ ಎಷ್ಟು ಏರಿಕೆ ಎಂಬ ಮಾಹಿತಿ ಇಲ್ಲಿದೆ.

ಜುಲೈ 1ರಿಂದ ಜಿಎಸ್‌ಟಿ ಜಾರಿ ಹಿನ್ನೆಲೆ ಕೆಟಿಎಂ ಬೆಲೆಗಳಲ್ಲಿ ಭಾರೀ ಏರಿಕೆ

ದೇಶದಲ್ಲಿ ಜಿಎಸ್‌ಟಿ(ಏಕ ರೂಪದ ತೆರಿಗೆ ನೀತಿ) ಜಾರಿಯಾಗುತ್ತಿರುವುದು ಆಟೋಮೊಬೈಲ್ ಉದ್ಯಮದ ಮೇಲೂ ಹತ್ತಾರು ಪರಿಣಾಮಗಳನ್ನುಂಟು ಮಾಡಿದ್ದು, ಬೆಲೆ ಏರಿಕೆ ಮತ್ತು ಇಳಿಕೆ ಕಂಡುಬರುತ್ತಿದೆ.

ಜುಲೈ 1ರಿಂದ ಜಿಎಸ್‌ಟಿ ಜಾರಿ ಹಿನ್ನೆಲೆ ಕೆಟಿಎಂ ಬೆಲೆಗಳಲ್ಲಿ ಭಾರೀ ಏರಿಕೆ

ಸದ್ಯ ಆಸ್ಟ್ರಿಯಾ ಮೂಲದ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆ ಕೆಟಿಎಂ ಕೂಡಾ ತನ್ನ ಪ್ರಮುಖ ಬೈಕ್ ಮಾದರಿಗಳ ಮೇಲಿನ ಬೆಲೆ ಹೆಚ್ಚಳ ಮಾಡಿದ್ದು, ಜುಲೈ 1ರಿಂದ ಏರಿಕೆಯಾದ ಹೊಸ ದರಗಳು ಅನ್ವಯವಾಗಲಿವೆ.

ಜುಲೈ 1ರಿಂದ ಜಿಎಸ್‌ಟಿ ಜಾರಿ ಹಿನ್ನೆಲೆ ಕೆಟಿಎಂ ಬೆಲೆಗಳಲ್ಲಿ ಭಾರೀ ಏರಿಕೆ

ಕೆಲವು ವರದಿಗಳ ಪ್ರಕಾರ ಕೆಟಿಎಂ ಬೈಕ್ ಬೆಲೆಗಳು ರೂ.5,500 ರಿಂದ ರೂ.6 ಸಾವಿರ ವರೆಗೆ ಬೆಲೆ ಹೆಚ್ಚಳವಾಗುವ ಸಾಧ್ಯತೆಗಳಿದ್ದು, ಜಿಎಸ್‌ಟಿ ಜಾರಿ ನಂತರವಷ್ಟೇ ಪೂರ್ಣ ಪ್ರಮಾಣದ ದರ ಪಟ್ಟಿ ಲಭ್ಯವಾಗಲಿದೆ.

ಜುಲೈ 1ರಿಂದ ಜಿಎಸ್‌ಟಿ ಜಾರಿ ಹಿನ್ನೆಲೆ ಕೆಟಿಎಂ ಬೆಲೆಗಳಲ್ಲಿ ಭಾರೀ ಏರಿಕೆ

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 200, ಡ್ಯೂಕ್ 250 ಮತ್ತು ಡ್ಯೂಕ್ 390 ಬೈಕ್ ಮಾದರಿಗಳಿಗೆ ಅತಿಹೆಚ್ಚು ಬೇಡಿಕೆಯಿದ್ದು, ಕೆಟಿಎಂ ಗ್ರಾಹಕರಿಗೆ ಬೆಲೆ ಬಿಸಿ ತಟ್ಟಲಿದೆ.

ಜುಲೈ 1ರಿಂದ ಜಿಎಸ್‌ಟಿ ಜಾರಿ ಹಿನ್ನೆಲೆ ಕೆಟಿಎಂ ಬೆಲೆಗಳಲ್ಲಿ ಭಾರೀ ಏರಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಜಿಎಸ್‌ಟಿ ಜಾರಿಗೂ ಮುನ್ನ ಭಾರತದಲ್ಲಿ ಹತ್ತಾರು ವಾಹನ ಉತ್ಪಾದನಾ ಸಂಸ್ಥೆಗಳು ಬೆಲೆಗಳನ್ನು ಕಡಿತ ಮಾಡಿ ಇಗಾಗಲೇ ಭಾರೀ ಸದ್ದು ಮಾಡುತ್ತಿವೆ. ಆದ್ರೆ ಕೆಲವು ಸಂಸ್ಥೆಗಳು ಮಾತ್ರ ಬೆಲೆಗಳನ್ನು ಏರಿಕೆ ಮಾಡಿ ಹೊಸ ಚರ್ಚೆ ಹುಟ್ಟುಹಾಕಿವೆ.

English summary
Read in Kannada about KTM India Increases Prices Across The Range.
Story first published: Thursday, June 29, 2017, 16:50 [IST]
Please Wait while comments are loading...

Latest Photos