ಎಲ್ಲೆಂದ್ರಲ್ಲಿ ಬೈಕ್ ಪಾರ್ಕ್ ಮಾಡುವ ಮುನ್ನ ತಪ್ಪದೇ ಈ ವಿಡಿಯೋ ನೋಡಿ
ವಾಹನ ಸವಾರರೇ ನಿಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುವ ಮುನ್ನ ಹತ್ತಾರು ಬಾರಿ ಪರಿಶೀಲನೆ ಮಾಡಿ ವಾಹನ ನಿಲ್ಲಿಸಿ. ಇಲ್ಲವಾದ್ರೆ ನಿಮ್ಮ ಬೈಕ್, ಕಾರುಗಳಿಗಷ್ಟೇ ಅಲ್ಲ ನಿಮ್ಮ ಪ್ರಾಣಕ್ಕೂ ಸಂಚಕಾರ ಬರೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ವಾಹನ ಸವಾರರೇ ನಿಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುವ ಮುನ್ನ ಹತ್ತಾರು ಬಾರಿ ಪರಿಶೀಲನೆ ಮಾಡಿ ವಾಹನ ನಿಲ್ಲಿಸಿ. ಇಲ್ಲವಾದ್ರೆ ನಿಮ್ಮ ಬೈಕ್, ಕಾರುಗಳಿಗಷ್ಟೇ ಅಲ್ಲ ನಿಮ್ಮ ಪ್ರಾಣಕ್ಕೂ ಸಂಚಕಾರ ಬರೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಬೆಂಗಳೂರಿನಲ್ಲಿ ಮೊದಲೇ ಸ್ಥಳದ ಅಭಾವ ಸಾಕಷ್ಛಿದೆ. ಅದರಲ್ಲೂ ಜನದಟ್ಟಣೆ ಪ್ರದೇಶಗಳಂತೂ ವಾಹನಗಳಿಗೆ ಪಾರ್ಕಿಂಗ್ ಸಮಸ್ಯೆಯನ್ನು ಹೇಳತಿರದು. ಹಾಗಾಂತ ಸಿಕ್ಕಸಿಕ್ಕಲ್ಲಿ ಬೈಕ್, ಕಾರುಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದ್ರೆ ನೀವು ಪಾರ್ಕಿಂಗ್ ಸ್ಥಳದ ಬಗ್ಗೆ ಮುನ್ನಚ್ಚೆರಿಕೆ ವಹಿಸದೇ ಹೋದ್ರೆ ಅಪಾಯ ತಪ್ಪಿದ್ದಲ್ಲ.

ಯಾಕೇಂದ್ರೆ ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಇಂತಹ ಅನುಮಾನಕ್ಕೆ ಎಡೆ ಮಾಡಿದ್ದು, ದಿನಸಿ ಅಂಗಡಿ ಬಳಿ ಬೈಕ್ ಸವಾರನೊಬ್ಬ ಪಾರ್ಕ್ ಮಾಡುವ ವೇಳೆ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾನೆ.
Recommended Video


ಅಂಗಡಿಯೊಂದರ ಮುಂಭಾಗದಲ್ಲಿ ಬೈಕ್ ಪಾರ್ಕ್ ಮಾಡಲು ಹೋದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಎಲ್ಲಾ ದೃಶ್ಯಗಳು ಅಂಡಗಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದನ್ನ ನೋಡಿದ್ರೆ ನಿಜ್ಕಕ್ಕೂ ಗಾಬರಿಯಾಗುತ್ತೆ.

ಇನ್ನು ಘಟನಾ ಸ್ಥಳದಲ್ಲಿ ಅದಾಗಲೇ ಒಂದು ಬೈಕ್ ಅನ್ನು ನಿಲ್ಲಿಸಲಾಗಿತ್ತು. ಅದರ ಪಕ್ಕ ಇವರ ಬೈಕ್ ನಿಲ್ಲಿಸಲು ಮುಂದಾಗಿದ್ದು, ಈ ವೇಳೆ ಆಯತಪ್ಪಿ ಬೈಕ್ ಸಮೇತ ಕೆಳಗೆ ಬಿದಿದ್ದಾರೆ. ಆದ್ರೆ ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳನ್ನು ಹೊರತುಪಡಿಸಿ ಏನು ತೊಂದರೆಯಾಗಿಲ್ಲ.

ವ್ಯಕ್ತಿ ಕೆಳಗೆ ಬಿದ್ದ ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು ದೌಡಾಯಿಸಿ ಬೈಕ್ ಸವಾರನನ್ನು ರಕ್ಷಿಸಲು ಪ್ರಯತ್ನಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದ್ದು, ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ.
ಇದಲ್ಲದೇ ಘಟನೆ ಕುರಿತಂತೆ ರಸ್ತೆ ಸುರಕ್ಷತೆ ಮತ್ತು ಸಂಚಾರ ಆಯುಕ್ತರಾದ ಡಿ ರೂಪಾ ಅವರು ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಬೈಕ್‍ಗಳನ್ನು ಸುರಕ್ಷಿತವಾದ ಸ್ಥಳದಲ್ಲಿ ಪಾರ್ಕ್ ಮಾಡಿ ಎಂದು ಮನವಿ ಮಾಡಿದ್ದಾರೆ.
Trending On DriveSpark Kannada:
ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!


Click it and Unblock the Notifications








