ಕುಸಿತ ಕಂಡ ಹೋಂಡಾ ನವಿ ವಾಹನದ ಮಾರಾಟ
ಬೈಕು ಮತ್ತು ಸ್ಕೂಟರ್‌ನ ಕ್ರಾಸ್ಒವರ್ ಆವೃತಿಯಾದ ಹೋಂಡಾ ನವಿ ದ್ವಿಚಕ್ರ ವಾಹನದ ಮಾರಾಟ ಗಣನೀಯವಾಗಿ ಇಳಿಕೆಯಾಗಿದೆ.
ಬೈಕು ಮತ್ತು ಸ್ಕೂಟರ್‌ನ ಕ್ರಾಸ್ಒವರ್ ಆವೃತಿಯಾದ ಹೋಂಡಾ ನವಿ ದ್ವಿಚಕ್ರ ವಾಹನದ ಮಾರಾಟ ಗಣನೀಯವಾಗಿ ಇಳಿಕೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಪ್ರಸಿದ್ಧ ಗ್ರೂಮ್ ಮೋಟಾರ್ ಸೈಕಲ್ ಹೋಂಡಾದ ಈ ಮಿನಿ ಬೈಕ್ ಡಿಸೈನ್ ಮಾಡಿದ್ದು, ಹೋಂಡಾ ಸಂಸ್ಥೆ ಈ ದ್ವಿಚಕ್ರವನ್ನು 2016ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಮಾಡಿತ್ತು. ಈ ವಾಹನದ ಮಾರಾಟ ಬಹಳಷ್ಟು ಕಡಿಮೆಯಾಗಿದೆ.

2016 ಮಾರ್ಚ್‌ನಲ್ಲಿ ಪ್ರಾರಂಭವಾದ ಸಮಯದಿಂದ ಕಂಪನಿಯು 2016ರ ಅಕ್ಟೋಬರ್‌ವರೆಗೆ ಸುಮಾರು 50,000ಕ್ಕೂ ಹೆಚ್ಚು ನವಿ ಮಾರಾಟ ಮಾಡಲಾಗಿತ್ತು.

ಈ ಸಮಯದಲ್ಲಿ ಹೋಂಡಾ ಸಂಸ್ಥೆಯು ತಿಂಗಳಿಗೆ ಹೆಚ್ಚು ಕಡಿಮೆ 7000 ಬೈಕುಗಳನ್ನು ಮಾರಾಟ ಮಾಡಿದೆ ಎನ್ನವುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.

ದುರದೃಷ್ಟವಶಾತ್, ನವೆಂಬರ್ 2016ರಿಂದ ಮಾರ್ಚ್ 2017ರವರೆಗೂ, ಹೋಂಡಾ 10,000 ವಾಹನಗಳನ್ನು ಮಾತ್ರ ಮಾರಾಟ ಮಾಡಲು ಸಾಧ್ಯವಾಯಿತು, ತದನಂತರ ಮಾರಾಟ ಗಣನೀಯವಾಗಿ ಇಳಿಕೆ ಕಂಡಿದ್ದು, ಮಾರ್ಚ್ 2016ರಿಂದ ಮಾರ್ಚ್ 2017ವರೆಗೆ ಒಟ್ಟು 60,000 ಘಟಕಗಳನ್ನು ಮಾರಾಟ ಮಾಡಿದೆ.

ನಾಲ್ಕು ತಿಂಗಳಲ್ಲಿ ಹೋಂಡಾ ನವಿಯ ಮಾರಾಟ ಸುಮಾರು 2000 ಯೂನಿಟ್‌ಗಳಿಂದ 300 ಯೂನಿಟ್‌ಗೆ ಇಳಿಕೆ ಕಂಡು ಗ್ರಾಹಕರೇ ಇಲ್ಲದಂತಾಗಿದೆ.

ಈ ದ್ವಿಚಕ್ರ ವಾಹನದ ಬಗ್ಗೆ :
ಹೋಂಡಾ ನವಿ ಎಂಬ 'ಮಿನಿ ಬೈಕ್' ಆಕ್ಟಿವಾ ಸ್ಕೂಟರ್ ಹೊಂದಿರುವ ಪರೀಕ್ಷೆ ಮಾಡಿದ 110ಸಿಸಿ ನಾಲ್ಕು ಸ್ಟ್ರೋಕ್ ಎಂಜಿನ್ ಹೊಂದಿದ್ದು, 9 ಏನ್ಎಂ ತಿರುಗುಬಲದಲ್ಲಿ 8 ಅಶ್ವಶಕ್ತಿ ಉತ್ಪಾದಿಸಲಿದೆ.

ಈ ಬೈಕ್ 3.8 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ ಮತ್ತು 60 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಬೈಕು ಮತ್ತು ಸ್ಕೂಟರ್‌ನ ಈ ಕ್ರಾಸ್ಒವರ್ ಆವೃತಿಯು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್s ಹೊಂದಿದೆ.

ಹೋಂಡಾ ಸಂಸ್ಥೆ ಈ ಮಿಶ್ರ ತಳಿಯ ದ್ವಿಚಕ್ರ ವಾಹನವನ್ನು 'ಕ್ರೋಮ್ ಎಡಿಷನ್' ಮತ್ತು 'ಅಡ್ವೆಂಚರ್ ಎಡಿಷನ್' ಎಂಬ ಎರಡು ಹೊಸ ರೂಪಾಂತರಗಳಲ್ಲಿ ಬಿಡುಗಡೆಗೊಳಿಸಿತ್ತು.

ಅದೇನೇ ಇದ್ದರೂ, ನಾವಿವನ್ನು ಪ್ರಾರಂಭಿಸುವ ಮೂಲಕ ಮಿನಿ ದ್ವಿಚಕ್ರ ವಾಹನ ವಿಭಾಗದಲ್ಲಿ ಅಭಿವೃದ್ಧಿ ತರುವ ಪ್ರಯತ್ನವನ್ನು ಹೋಂಡಾ ಮಾಡಿತು, ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕು.


Click it and Unblock the Notifications