ಬಹುನೀರಿಕ್ಷಿತ ಸುಜುಕಿ ಹೊಸ ಬೈಕ್ ಇನ್‌ಟ್ರುಡರ್ 150 ಸ್ಪೆಷಲ್ ಏನು?
ಸುಜುಕಿಯು ಮುಂಬರುವ ದಿನಗಳಲ್ಲಿ ಹೊಸ ಹೊಸ ಬೈಕ್ ಆವೃತ್ತಿಗಳನ್ನು ಪರಿಚಯಿಸುತ್ತಿದ್ದು, ಸದ್ಯ ಬಿಡುಗಡೆ ಹಂತದಲ್ಲಿರುವ ಇನ್‌ಟ್ರುಡರ್ 150 ಬೈಕ್ ರಹಸ್ಯ ಚಿತ್ರಗಳು ಸೋರಿಕೆಯಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಜಪಾನ್ ಮೂಲದ ಪ್ರತಿಷ್ಠಿತ ವಾಹನ ಉತ್ಪಾದನಾ ಸಂಸ್ಥೆಯಾದ ಸುಜುಕಿಯು ಮುಂಬರುವ ದಿನಗಳಲ್ಲಿ ಹೊಸ ಹೊಸ ಬೈಕ್ ಆವೃತ್ತಿಗಳನ್ನು ಪರಿಚಯಿಸುತ್ತಿದ್ದು, ಸದ್ಯ ಬಿಡುಗಡೆ ಹಂತದಲ್ಲಿರುವ ಇನ್‌ಟ್ರುಡರ್ 150 ಬೈಕ್ ರಹಸ್ಯ ಚಿತ್ರಗಳು ಸೋರಿಕೆಯಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಇದಕ್ಕೆ ಕಾರಣ ಭಾರತೀಯ ಮಾರುಕಟ್ಟೆಗಾಗಿ ಕಡಿಮೆ ಎಂಜಿನ್ ಸಾಮರ್ಥ್ಯದ ಕ್ರೂಸರ್ ಬೈಕ್ ಮಾದರಿಯನ್ನು ಪರಿಚಯಿಸುತ್ತಿರುವ ಸುಜುಕಿ, ಸೂಪರ್ ಬೈಕ್ ಆವೃತ್ತಿಯಾದ ಎಂ1880 ಆರ್ ಬೈಕ್ ಪ್ರೇರಣೆಯೊಂದಿಗೆ ಇನ್‌ಟ್ರುಡರ್ 150 ಅನ್ನು ಅಭಿವೃದ್ಧಿಗೊಳಿಸಿದೆ.

ಅಮೆರಿಕ ಸೇರಿದಂತೆ ಯುರೋಪಿನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಜಿಝಡ್150 ಆವೃತ್ತಿಯನ್ನು ಬಿಡುಗಡೆ ಮಾಡುವ ಬಗ್ಗೆ ಈ ಹಿಂದೆ ಮಾಹಿತಿ ನೀಡಿದ್ದ ಸುಜುಕಿಯು ಇದೀಗ ಇನ್‌ಟ್ರುಡರ್ 150 ಅನ್ನು ಪರಿಚಯಿಸುತ್ತಿರುವುದು ಸೂಪರ್ ಬೈಕ್ ಪ್ರಿಯರಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

ಇನ್ನು ಸುಜುಕಿ ಬಿಡುಗಡೆ ಮಾಡುತ್ತಿರುವ ಇನ್‌ಟ್ರುಡರ್ 150 ಆವೃತ್ತಿಯು ಎಂ1880 ಆರ್ ಬೈಕ್ ಲುಕ್ ಹೊಂದಿದ್ದು, ಕೇವಲ 154.9 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದ್ದರು ಪ್ರಿಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿದೆ.

ಈ ಮೂಲಕ ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿರುವ ಇನ್‌ಟ್ರುಡರ್ 150 ಆವೃತ್ತಿಯು ಎಲ್‌ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಟ್ವಿನ್ ಫೋರ್ಟ್ ಕ್ರೋಮ್ ಎಕ್ಸಾಸ್ಟ್, 17- ಇಂಚಿನ ಬ್ಲ್ಯಾಕ್ ಅಲ್ಹಾಯ್ ಚಕ್ರಗಳನ್ನು ಹೊಂದಿರುವುದು ಹೊಸ ಬೈಕ್ ಲುಕ್ ಹೆಚ್ಚಿಸಿದೆ.

ಜೊತೆಗೆ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್, ರಿರ್ ಪ್ಲೆಂಡರ್ ಮತ್ತು ಬಕೆಟ್ ಸ್ಟೈಲ್ ಸೀಟುಗಳು ಸೂಪರ್ ಬೈಕ್ ಲುಕ್ ನೀಡಿದ್ದು, ಜಿಕ್ಸರ್ ಎಸ್ಎಫ್ ಮಾದರಿಯಲ್ಲೇ ಸಿಂಗಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಪಡೆದುಕೊಂಡಿದೆ.
ತಪ್ಪದೇ ಓದಿರಿ-ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

ಎಂಜಿನ್ ಸಾಮರ್ಥ್ಯ
154.9 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಇನ್‌ಟ್ರುಡರ್ 150 ಬೈಕ್ ಆವೃತ್ತಿಯು 14-ಬಿಎಚ್‌ಪಿ ಮತ್ತು 14-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಮಾಹಿತಿ ಕೂಡಾ ಸೋರಿಕೆಯಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಸುಜುಕಿ ಸಂಸ್ಥೆಯು ಭಾರತದಲ್ಲಿ ಬಿಡುಗಡೆ ಮಾಡಲು ಮುಂದಾಗಿರುವ ಇನ್‌ಟ್ರುಡರ್ 150 ಬೈಕ್ ಈ ಹಿಂದಿನ ಎಂ1800 ಆರ್ ಪ್ರೇರಣೆ ಹೊಂದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ ಗ್ರಾಹಕರಿಗಾಗಿ ಪರಿಚಯಿಸುತ್ತಿದೆ. ಆದ್ರೆ ಹೊಸ ಬೈಕ್ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಮಾಹಿತಿಯನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.
Trending On DriveSpark Kannada:


Click it and Unblock the Notifications








