ಅಕ್ಟೋಬರ್ ಅಂತ್ಯಕ್ಕೆ ಭಾರತ ಪ್ರವೇಶ ಪಡೆಯಲಿವೆ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್‌ಗಳು

Written By:

ಭಾರತೀಯ ಮಾರುಕಟ್ಟೆಯಲ್ಲಿ ಸೂಪರ್ ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆ ಹೆಚ್ಚಿತ್ತಿದ್ದು, ಈ ಹಿನ್ನೆಲೆ ದೇಶಿಯ ಮಾರುಕಟ್ಟೆಗೆ ಇಟಾಲಿಯನ್ ಮೂಲದ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್‌ಗಳು ಮೊದಲ ಬಾರಿಗೆ ಪ್ರವೇಶ ಪಡೆಯುತ್ತಿವೆ.

To Follow DriveSpark On Facebook, Click The Like Button
ಮೊದಲ ಬಾರಿಗೆ ಭಾರತ ಪ್ರವೇಶ ಪಡೆಯುತ್ತಿದೆ ಎಸ್‌ಡಬ್ಲ್ಯುಎಂ

ಇಟಾಲಿಯನ್ ಮಾರುಕಟ್ಟೆಯಲ್ಲಿ ಭಾರೀ ಆದಾಯ ಗಳಿಕೆಯೊಂದಿಗೆ ಸೂಪರ್ ಬೈಕ್ ಮಾರಾಟದಲ್ಲಿ ಮುಂಚೂಣಿಯಲ್ಲಿ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್‌ಗಳು ಇದೀಗ ಭಾರತಕ್ಕೂ ಲಗ್ಗೆಯಿಡುತ್ತಿದ್ದು, ಕೆಲವು ವಿಲಕ್ಷಣ ಬೈಕ್ ಮತ್ತು ಅತ್ಯುತ್ತಮ ಮಾದರಿಯ ಮೋಟರ್ ಸೈಕಲ್‌ಗಳನ್ನು ಅಭಿವೃದ್ದಿಗೊಳಿಸುವ ಯೋಚನೆಯಲ್ಲಿದೆ.

ಮೊದಲ ಬಾರಿಗೆ ಭಾರತ ಪ್ರವೇಶ ಪಡೆಯುತ್ತಿದೆ ಎಸ್‌ಡಬ್ಲ್ಯುಎಂ

ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್‌ಗಳು ಮೂಲತಃ ಇಟಾಲಿಯನ್ ದ್ವಿಚಕ್ರ ವಾಹನ ತಯಾರಕರಾಗಿದ್ದು, ಕಾರಣಾಂತರಗಳಿಂದ 1984ರಲ್ಲೇ ಉತ್ಪಾದನೆ ಇಲ್ಲದೇ ಮುಚ್ಚಿಹೊಗಿತ್ತು. ಆದ್ರೆ 2014ರಲ್ಲಿ ಚೀನಾದ ಶಿನೆರಾಯ್ ಗ್ರೂಪ್ ಎಸ್‌ಡಬ್ಲ್ಯುಎಂ ಖರೀದಿ ಮಾಡಿದ್ದು, ಈ ಹಿನ್ನೆಲೆ ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿದೆ.

ಮೊದಲ ಬಾರಿಗೆ ಭಾರತ ಪ್ರವೇಶ ಪಡೆಯುತ್ತಿದೆ ಎಸ್‌ಡಬ್ಲ್ಯುಎಂ

ಇದಲ್ಲದೇ 300ಸಿಸಿಯಿಂದ 650 ಸಿಸಿ ಎಂಜಿನ್ ಸಾಮರ್ಥ್ಯದ ಆಫ್ ಮೋಟಾರ್ ಸೈಕಲ್‌ಗಳನ್ನು ಅಭಿವೃದ್ಧಿಗೊಳಿಸುವಲ್ಲಿ ಮುಂಚೂಣಿಯಲ್ಲಿರುವ ಎಸ್‌ಡಬ್ಲ್ಯುಎಂ ಸಂಸ್ಥೆಯು ಈ ವರ್ಷದ ಅಕ್ಟೋಬರ್‌ನಲ್ಲಿ ಭಾರತಕ್ಕೆ ಪ್ರವೇಶಿಸಲು ಸಿದ್ಧವಾಗಿದೆ.

ಮೊದಲ ಬಾರಿಗೆ ಭಾರತ ಪ್ರವೇಶ ಪಡೆಯುತ್ತಿದೆ ಎಸ್‌ಡಬ್ಲ್ಯುಎಂ

ಈ ಹಿನ್ನೆಲೆ ಎಂವಿ ಅಗಸ್ಟಾ ಬೈಕ್ ಮಾದರಿಗಳಿಗೆ ಪ್ರಬಲ ಪ್ರತಿ ಸ್ಪರ್ಧಿಯಾಗುವ ಮುನ್ಸೂಚನೆ ನೀಡಿರುವ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್‌ಗಳು ಮುಖ್ಯವಾಗಿ ಆಪ್ ರೋಡಿಂಗ್ ಮತ್ತು ಕ್ಲಾಸಿಕ್ ಬೈಕ್ ಉತ್ಪಾದನೆಗೆ ಗಮನಹರಿಸಲಿವೆ.

ಮೊದಲ ಬಾರಿಗೆ ಭಾರತ ಪ್ರವೇಶ ಪಡೆಯುತ್ತಿದೆ ಎಸ್‌ಡಬ್ಲ್ಯುಎಂ

ಜೊತೆಗೆ ಭಾರತೀಯ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ಹೊಸ ಬೈಕ್ ಮಾದರಿಗಳನ್ನು ಅಭಿವೃದ್ಧಿಗೊಳಿಸಲಿರುವ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್‌ ಸಂಸ್ಥೆಯು, 125ಸಿಸಿ ಯಿಂದ 650 ಸಿಸಿ ವರೆಗೂ ವಿವಿಧ ಬೈಕ್‌ಗಳನ್ನು ಪರಿಚಯಿಸಿದೆ.

ಮೊದಲ ಬಾರಿಗೆ ಭಾರತ ಪ್ರವೇಶ ಪಡೆಯುತ್ತಿದೆ ಎಸ್‌ಡಬ್ಲ್ಯುಎಂ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಪ್ರಥಮ ಬಾರಿಗೆ ಭಾರತೀಯ ಮಾರುಕಟ್ಟೆ ಪ್ರವೇಶ ಪಡೆಯುತ್ತಿರುವ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್‌ಗಳು ಹೊಸ ಯೋಜನೆಗಳೊಂದಿಗೆ ಗ್ರಾಹಕರನ್ನು ಸೆಳೆಯುವ ತವಕದಲ್ಲಿದ್ದು, ಅಕ್ಟೋಬರ್ ನಂತರವಷ್ಟೇ ಹೊಸ ಉತ್ಪನ್ನಗಳ ಬಗೆಗೆ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿವೆ.

English summary
Read in Kannada about Off Road Motorcycles From SWM Set To Make Indian Debut In October This Year.
Story first published: Tuesday, September 5, 2017, 19:06 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark